ಸೇನಾ ಮುಖ್ಯಸ್ಥರು ಪ್ರಧಾನಿ ಭೇಟಿ ಮಾಡಲು ಕಾರಣವೇನು ?

By Internet DeskFirst Published Sep 24, 2016, 6:09 PM IST
Highlights

ನವದೆಹಲಿ(ಸೆ.24): ಭೂ ಸೇನೆ ಮತ್ತು ವಾಯು ಸೇನಾ ಮುಖ್ಯಸ್ಥರು ಹಾಗೂ ನೌಕಾ ಸೇನೆಯ ಉಪ ಮುಖ್ಯಸ್ಥರು ಶನಿವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಉರಿ ದಾಳಿಯ ಬಳಿಕ ಸೇನಾ ಮುಖ್ಯಸ್ಥರು ಪ್ರಧಾನಿಯವರನ್ನು ಭೇಟಿಯಾಗಿರುವುದು ಮಹತ್ವವನ್ನು ಪಡೆದಿದೆ. ಆದರೆ ಇದೊಂದು ವಾಡಿಕೆಯ ಸಾಮಾನ್ಯ ಭೇಟಿಯಾಗಿತ್ತು ಎಂದು ಸೇನಾ ಮೂಲಗಳು ಹೇಳಿವೆ.

ವಿವಿಧ ವಿಷಯಗಳ ಕುರಿತಂತೆ ಸೇನಾ ಮುಖ್ಯಸ್ಥರು ಪ್ರಧಾನಿಯವರನ್ನು ಭೇಟಿಯಾಗಿ ಮಾತುಕತೆ ನಡೆಸುವ ಸಂಪ್ರದಾಯ ಪ್ರತಿ ತಿಂಗಳು ಇರುತ್ತದೆ. ಸೇನಾ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಸುಹಾಗ್, ವಾಯು ಸೇನಾ ಮುಖ್ಯಸ್ಥ ಮಾರ್ಷಲ್ ಅರೂಪ್ ರಾಹ ಮತ್ತು ನೌಕಾ ಸೇನಾ ಉಪ ಮುಖ್ಯಸ್ಥ ಅಡ್ಮಿರಲ್ ಕೆಬಿ ಸಿಂಗ್ ಪ್ರಧಾನಿಯವರನ್ನು ಭೇಟಿಯಾಗಿದ್ದಾರೆ. ನೌಕಾ ಮುಖ್ಯಸ್ಥ ಅಡ್ಮಿರಲ್ ಸುನೀಲ್ ಲಾಂಬಾ ನಗರದಿಂದ ಹೊರಗಿದ್ದಾರೆ.

Latest Videos

click me!