
ಬೆಂಗಳೂರು(ಸೆ.07): ಸ್ಯಾಂಡಲ್'ವುಡ್ ನಟ ಹಾಗೂ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ಚೇತನ್ ಅವರು ತಮಗೆ ಜೀವಭಯ ಇರುವುದಾಗಿ ಪೊಲೀಸರ ಮೋರೆ ಹೋಗಿದ್ದಾರೆ.
ತಮ್ಮ ಮನೆಯ ಬಳಿ ಕೆಲವರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದು, ತಮಗೆ ಜೀವಭಯವಿದೆ ಈ ಕಾರಣದಿಂದ ತಮಗೆ ರಕ್ಷಣೆ ನೀಡಿ ಎಂದು ನಗರ ಪೊಲೀಸರ್ ಆಯುಕ್ತರಿಗೆ ದೂರು ನೀಡಿದ್ದಾರೆ. ಇತ್ತೀಚಿಗೆ ಕೆಲವು ದಿನಗಳ ಹಿಂದಷ್ಟೆ "ಲಿಂಗಾಯತ ಧರ್ಮ - ಸ್ವತಂತ್ರ ಧರ್ಮ" ವಿಚಾರ ವೇದಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸುತ್ತೂರು ಶ್ರೀಗಳ ವಿರುದ್ಧ ನೇರವಾಗಿ ಆರೋಪ ಮಾಡಿದ್ದರು.
ಯಡಿಯೂರಪ್ಪನವರು ಬ್ಲ್ಯಾಕ್'ಮ್ಯಾಜಿಕ್ ಒಪ್ಪಿಕೊಂಡಿರೋ ಸ್ವಯಂಸೇವಕ... ಹಾಗೆ ನೋಡೋಕೆ ಹೋದ್ರೆ ಬಸವಣ್ಣನವರು ಇದನ್ನ ಒಪ್ತಾ ಇದ್ರಾ...? ಖಂಡಿತ ಒಪ್ಪಲ್ಲ... ಅವರು ಮುಖ್ಯಮಂತ್ರಿ ಸ್ಥಾನದಲ್ಲಿದ್ದಾಗಲೂ ಅವರನ್ನ ಭ್ರಷ್ಟಾಚಾರ ಆರೋಪದ ಮೇಲೆ ಕೆಳಗಿಳಿಸಲಾಯಿತು. ಅದರ ಜೊತೆಗೆ, 300 ಕೋಟಿ ಕರ್ನಾಟಕದ ದುಡ್ಡು ತೆಗೆದುಕೊಂಡು, ಧಾರ್ಮಿಕ ವ್ಯವಸ್ಥೆಗೆ ದೇವಸ್ಥಾನಗಳಾಗಿರಬಹುದು, ಮಠಗಳಾಗಿರಬಹುದು, ಇಡೀ ದಕ್ಷಿಣ ಭಾರತಕ್ಕೆ ಹಣ ಚೆಲ್ಲಿದ್ದಾರೆ.... ಎಂದು ಆರೋಪ ಮಾಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.