
ನವದೆಹಲಿ(ಮೇ.03): ಗುಜರಾತ್‌ನ ಬಿಜೆಪಿ ಸಂಸದ ಕೆ.ಸಿ. ಪಟೇಲ್ ಅವರನ್ನು ‘ಹನಿ ಟ್ರ್ಯಾಪ್’ಗೆ ಕಡೆವಿ 5 ಕೋಟಿ ರು. ಹಣಕ್ಕೆ ಬೇಡಿಕೆ ಇರಿಸಿದ್ದಳು ಎನ್ನಲಾದ ಮಹಿಳೆಯು ಐಎಎಸ್ ಅಧಿಕಾರಿಣಿಯಾಗಲು ಬಯಸಿದ್ದಳು ಹಾಗೂ ಇದೇ ರೀತಿ 20 ಸಂಸದರು ಹಾಗೂ 25 ಸಚಿವರನ್ನು ಅವಳು ‘ಹನಿ ಟ್ರ್ಯಾಪ್’ಗೆ ಕೆಡವಿದ್ದಳು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.
ಈ ಮಹಿಳೆಯ ನೇತೃತ್ವದಲ್ಲೇ ಒಂದು ಗ್ಯಾಂಗ್ ಇದೆ. ಸಂಸದರನ್ನು ಗುರಿಯಾಗಿಸಿಕೊಂಡು ಅವರನ್ನು ಬಲೆಗೆ ಕೆಡವುವುದು ಹಾಗೂ ಬ್ಲ್ಯಾಕ್‌ಮೇಲ್ ಮಾಡಿ ಕೋಟಿಗಟ್ಟಲೇ ಹಣ ಸಾಂಪಾದಿಸುವುದು ಈಕೆಯ ಉದ್ದೇಶವಾಗಿತ್ತು ಎಂದೂ ದಿಲ್ಲಿ ಪೊಲೀಸರಿಗೆ ಮಹತ್ವದ ಮಾಹಿತಿ ಲಭಿಸಿದೆ. ಸುಪ್ರೀಂ ಕೋರ್ಟ್ ವಕೀಲೆ ಎಂದು ಹೇಳಿಕೊಳ್ಳುವ ಮಹಿಳೆ ಈಗ 5 ದಿನ ಪೊಲೀಸ್ ವಶದಲ್ಲಿದ್ದು, ವಿಚಾರಣೆ ತೀವ್ರಗೊಂಡಿದೆ.
ಕೃತ್ಯ ಹೀಗೆ ಎಸಗುತ್ತಿದ್ದಳು:
ಸಚಿವ, ಸಂಸದರ ವೆಬ್‌ಸೈಟ್‌ಗಳಿಂದ ಈಕೆ ಅವರ ಫೋನ್ ನಂಬರ್ ಸಂಗ್ರಹಿಸುತ್ತಿದ್ದಳು. ಕೆಲ ಕಾನೂನು ವಿಷಯಗಳನ್ನು ಚರ್ಚಿಸಬೇಕಿದೆ ಎಂದು ಅವರಿಗೆ ಫೋನ್ ಮಾಡಿ ಗಾಜಿಯಾಬಾದ್‌ನ ಇಂದಿರಾಪುರಂ ನಿವಾಸಕ್ಕೆ ಆಹ್ವಾನಿಸುತ್ತಿದ್ದಳು. ಮನೆಯ ಬೆಡ್‌ರೂಂನಲ್ಲಿ ಹಾಸಿಗೆಯನ್ನೇ ಗುರಿಯಾಗಿಸಿಕೊಂಡು ಸಿಸಿಟೀವಿ ಅಳವಡಿಸಲಾಗಿರುತ್ತಿತ್ತು. ತನ್ನ ಮೋಹಕ್ಕೆ ಒಳಗಾದ ಸಂಸದರ ಜೊತೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದಳು. ಇಡೀ ಕ್ರಿಯೆಯನ್ನು ಸೀಡಿ ಮಾಡಿ ಸಂಸದರಿಗೆ ಕಳಿಸುತ್ತಿದ್ದಳು. ಸೀಡಿ ಬಹಿರಂಗಪಡಿಸುವೆ ಎಂದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಈ ಹಿಂದೆ ಈಕೆಯ ಬಲೆಗೆ ಬಿದ್ದವರಲ್ಲಿ ಉತ್ತರಾಖಂಡ ಸಚಿವ ಹರಕ್ ಸಿಂಗ್ ರಾವತ್ ಹಾಗೂ ಶಾದಿಲಾಲ್ ಬಾತ್ರಾ ಕೂಡ ಇದ್ದಾರೆ ಎನ್ನಲಾಗಿದೆ.
ಈಕೆಗೆ ಒಬ್ಬ ಪುರುಷ ಹಾಗೂ ಮುಜರ್‌ನಗರದ ಮಹಿಳೆ ಸಹಾಯ ಮಾಡುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಬೇರೆ ಗ್ಯಾಂಗ್ ಕೈವಾಡ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಐಎಎಸ್ ಆಕಾಂಕ್ಷಿ:
ಈ ಕಾಮುಕ ಮಹಿಳೆ ಐಎಎಸ್ ಪರೀಕ್ಷೆಗೆ ಕೂತು ನಪಾಸಾಗಿದ್ದಳು. ಎಂಎ ಎಲ್‌ಎಲ್‌ಬಿ ಮಾಡಿ ಎಲ್‌ಎಲ್‌ಎಂ ಕೂಡ ಕಲಿಯುತ್ತಿದ್ದಳು. ರಾಜಸ್ಥಾನ ಲೋಕಸೇವಾ ಆಯೋಗದ ಪರೀಕ್ಷೆಗೆ ಸಿದ್ಧವಾಗಲು 5 ವರ್ಷದ ಹಿಂದೆ ರಾಜಸ್ಥಾನದಿಂದ ದಿಲ್ಲಿಗೆ ಬಂದಿದ್ದಳು.
ಆದರೆ ಪೊಲೀಸರು ಈಕೆಗೆ ‘ಇಂಗ್ಲಿಷ್ ಬರಿ’ ಎಂದಾಗ ಬರೆಯಲು ಬಾರಲಿಲ್ಲ ಎನ್ನಲಾಗಿದೆ. ಹೀಗಾಗಿ ಈಕೆಯ ವಿದ್ಯಾರ್ಹತೆ ಬಗ್ಗೆ ಪೊಲೀಸರಿಗೆ ಶಂಕೆ ಎದುರಾಗಿದೆ. ಜೊತೆಗೆ ಈಕೆ ಸುಪ್ರೀಂ ಕೋರ್ಟ್ ವಕೀಲೆ ಎಂಬುದು ಬೋಗಸ್ ಎಂದು ಪೊಲೀಸರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.