
ಹೈದರಾಬಾದ್(ಆ.22): ಕೇರಳ ಪ್ರವಾಹ ಕಂಡು ಮಮ್ಮಲ ಮರುಗಿದ ಮಧ್ಯಪ್ರಾಚ್ಯ ರಾಷ್ಟ್ರಗಳು, ಕೇರಳ ಪುನರ್ ಸ್ಥಾಪನೆಗೆ ಹೇರಳ ಧನ ಸಹಾಯ ಮಾಡಿವೆ. ಅದರಲ್ಲೂ ಸಂಯುಕ್ತ ಅರಬ್ ರಾಷ್ಟ್ರವೊಂದೇ ಕೇರಳಕ್ಕೆ ಸುಮಾರು 100 ಮಿಲಿಯನ್ ಯುಎಸ್ ಡಾಲರ್ ಧನ ಸಹಾಯದ ಘೋಷಣೆ ಮಾಡಿದೆ.
ಆದರೆ ಕೇರಳಕ್ಕೆ ಈ ಧನ ಸಹಾಯ ಸ್ವೀಕರಿಸುವುದೇ ಅತ್ಯಂತ ಕಠಿಣ ಸವಾಲಾಗಿ ಪರಿಣಮಿಸಿದೆ. ಕಾರಣ ಉಭಯ ರಾಷ್ಟ್ರಗಳ ನಡುವೆ ಹಣ ವರ್ಗಾವಣೆಯ ಕುರಿತು ಯಾವುದೇ ದ್ವಿಪಕ್ಷೀಯ ಒಪ್ಪಂದ ಆಗದೇ ಇರುವುದು. ಈ ಹಿಂದೆ ಪ್ರಕೃತಿ ವಿಕೋಪ ಸಂಭವಿಸಿದಾಗ ಯುಎಇಯಲ್ಲಿ ವಾಸಿಸುವ ಭಾರತೀಯರು ಆರ್ ಬಿಐ ಡ್ರಾಫ್ಟ್ ಗೆ ಹಣ ಸಂದಾಯ ಮಾಡುತ್ತಿದ್ದರೇ ವಿನಾ: ನೇರವಾಗಿ ಯುಎಇ ಸರ್ಕಾರ ಭಾರತ ಸರ್ಕಾರಕ್ಕೆ ಹಣ ಸಂದಾಯ ಮಾಡಿದ ಉದಾಹರಣೆ ಇಲ್ಲ.
ಈ ಕುರಿತು ಮಾಹಿತಿ ನೀಡಿರುವ ಸೌದಿ ಅರೆಬಿಯಾಕ್ಕೆ ಭಾರತದ ಮಾಜಿ ರಾಯಭಾರಿ ತಲ್ಮೀಜ್ ಅಹ್ಮದ್, ಯುಎಇ ಘೋಷಿಸಿರುವ ಧನಸಹಾಯ ಭಾರತಕ್ಕೆ ಬರುವುದು ಅನುಮಾನ ಎಂದು ಹೇಳಿದ್ದಾರೆ. ಒಂದು ದೇಶದಲ್ಲಿ ಪ್ರಕೃತಿ ವಿಕೋಪ ಉಂಟಾದಾಗ ಮತ್ತೊಂದು ದೇಶ ಪರಿಹಾರ ಸಾಮಗ್ರಿ ಕಳುಹಿಸಬಹುದೇ ವಿನಾ: ಬನೇರವಾಗಿ ಹಣ ಕಲಳುಹಿಸಿದ ಉದಾಹರಣೆ ಇಲ್ಲ ಎಂದು ಅಹ್ಮದ್ ತಿಳಿಸಿದ್ದಾರೆ.
ಅಲ್ಲದೇ ಭಾರತದ ಕಾನೂನು ಪ್ರಕಾರ ಯಾವುದೇ ದೇಶದಿಂದ ನೇರವಾಗಿ ಹಣ ಸ್ವೀಕರಿಸುವಂತಿಲ್ಲ. ಈ ಕಾರಣಕ್ಕೆ ಯುಎಇ ಧನಸಹಾಯ ಕೇರಳ ಪ್ರವಾಹಕ್ಕೆ ಬಳಕೆಯಾಗುವುದು ಅನುಮಾನ ಎನ್ನಲಾಗಿದೆ. ಅಲ್ಲದೇ ಯುಎಇ ಧನಸಹಾಯದ ಬದಲು ಅಷ್ಟೇ ಪ್ರಮಾಣದ ಪರಿಹಾರ ಸಾಮಗ್ರಿ ಕಳುಹಿಸಿದರೆ ಒಳ್ಳೆಯದು ಎನ್ನುತ್ತಾರೆ ಅಹ್ಮದ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.