
ವಾಷಿಂಗ್ಟನ್(ಆ.22): ಚಂದ್ರನ ಅನ್ವೇಷಣೆಗಾಗಿ ಕೈಗೊಳ್ಳಲಾಗಿದ್ದ ಚಂದ್ರಯಾನ-1 ಮಿಷನ್ ನ ಡಾಟಾದಿಂದ ಮಹತ್ವದ ಅಂಶವನ್ನು ವಿಜ್ಞಾನಿಗಳು ಕಂಡುಕೊಂಡಿದ್ದು ಚಂದ್ರನ ಧ್ರುವ ಪ್ರದೇಶದಲ್ಲಿ ನೀರು ಹೆಪ್ಪುಗಟ್ಟಿದ ಸ್ಥಿತಿಯಲ್ಲಿದೆ ಎಂದಿದ್ದಾರೆ.
ಚಂದ್ರನ ಮೇಲ್ಮೈ ನ ಕೆಲವೇ ಕೆಲವು ಮಿಲೀಮೀಟರ್ ನಷ್ಟು ಆಳದಲ್ಲಿ ನೀರು ಮಂಜುಗಡ್ಡೆ ರೂಪದಲ್ಲಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದು, ಚಂದ್ರನಲ್ಲಿ ವಾಸಿಸುವ ಸಾಧ್ಯತೆಗಳನ್ನು ಅರಿಯುವುದಕ್ಕೆ ಇದು ಸಹಕಾರಿ ಎಂದಿದ್ದಾರೆ.
ಜರ್ನಲ್ ಪಿಎನ್ಎಎಸ್ ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ, ಚಂದ್ರನ ಮೇಲ್ಮೆ ಮೇಲೆ ಮಂಜುಗಡ್ಡೆ ನಿಕ್ಷೇಪಗಳು ಹರಡಿದ್ದು, ಅತ್ಯಂತ ಪುರಾತನವಾಗಿದ್ದಿರಬೇಕು ಎಂದು ಅಂದಾಜಿಸಲಾಗಿದೆ.
ದಕ್ಷಿಣ ಧ್ರುವವದಲ್ಲಿ ಮಂಜುಗಡ್ಡೆ ಸಂಗ್ರಹವಾಗಿರುವ ರೀತಿಗೂ ಉತ್ತರ ಧ್ರುವದಲ್ಲಿ ಮಂಜುಗಡ್ಡೆ ಸಂಗ್ರಹವಾಗಿರುವ ರೀತಿಗೂ ವ್ಯತ್ಯಾಸವಿದ್ದು, ಇದನ್ನು ಕಂಡುಕೊಳ್ಳುವುದಕ್ಕೆ ನಾಸಾದ ಮೂನ್ ಮಿನರಾಲಜಿ ಮ್ಯಾಪರ್(ಎಂ3) ಹಾಗೂ ಚಂದ್ರಯಾನ-1 ರ ಡಾಟ ನೆರವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.