ಮೈಸೂರಿನ ಪಿಡಬ್ಲ್ಯೂಡಿ ಅಧಿಕಾರಿ ಮನೆಯಲ್ಲಿ ಸಿಕ್ಕ ಆಸ್ತಿ ಮೊತ್ತ ನೋಡಿ ಬೆಚ್ಚಿಬಿದ್ದ ಎಸಿಬಿ

Published : Mar 03, 2017, 02:43 PM ISTUpdated : Apr 11, 2018, 12:43 PM IST
ಮೈಸೂರಿನ ಪಿಡಬ್ಲ್ಯೂಡಿ ಅಧಿಕಾರಿ ಮನೆಯಲ್ಲಿ ಸಿಕ್ಕ ಆಸ್ತಿ ಮೊತ್ತ ನೋಡಿ ಬೆಚ್ಚಿಬಿದ್ದ ಎಸಿಬಿ

ಸಾರಾಂಶ

ಎಸಿಬಿ ಮೂಲಗಳ ಪ್ರಕಾರ, ರಂಗನಾಥ್ ನಾಯಕ್ ಮನೆಯಲ್ಲಿ ಬರೋಬ್ಬರಿ 20 ಕೋಟಿ ಮೌಲ್ಯದ ಆದಾಯ ಪತ್ತೆಯಾಗಿದೆ. ಕೆಜಿ ಗಟ್ಟಲೆ ಚಿನ್ನ, ಬೆಳ್ಳಿ ಮೊದಲಾದ ಅಮೂಲ್ಯ ವಸ್ತುಗಳು ಸಿಕ್ಕಿವೆ.

ಮೈಸೂರು(ಮಾ. 03): ಕಳೆದ ಕೆಲ ದಿನಗಳಿಂದ ಎಸಿಬಿ ಅಧಿಕಾರಿಗಳು ರಾಜ್ಯದ ಭ್ರಷ್ಟ ಅಧಿಕಾರಿಗಳ ಬೆನ್ನು ಬಿದ್ದಿದ್ದಾರೆ. ಇವತ್ತು ಮೈಸೂರಿನಲ್ಲೂ ಬೆಳ್ಳಂಬೆಳಗ್ಗೆ ದೊಡ್ಡ ಮಿಕವೊಂದನ್ನು ಬಲೆಗೆ ಕೆಡವಿದ್ದಾರೆ. ಮೈಸೂರಿನಲ್ಲಿ ಲೋಕೋಪಯೋಗಿ ಇಲಾಖೆ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯೀಕರಣ ವಿಭಾಗದಲ್ಲಿ ಸೂಪರಿಂಟೆಂಡೆಂಟ್ ಇಂಜಿನಿಯರ್ ಆಗಿರುವ ಜಿ. ರಂಗನಾಥ್ ನಾಯಕ್ ಮನೆ ಮೇಲೆ ದಾಳಿ ನಡೆಸಿದ್ದಾರೆ. ವಿಜಯನಗರದ ಒಂದನೇ ಹಂತದಲ್ಲಿರುವ ಮಾನಸ ಅಪಾರ್ಟ್​ಮಂಟ್​ ಮೇಲೆ ಎಸಿಬಿ ಅಧಿಕಾರಿಗಳು ಮುಂಜಾನೆ 6 ಗಂಟೆಗೆ ದಾಳಿ ಮಾಡಿದ್ರು. ಕೋಟಿಗೂ ಅಧಿಕ ಮೌಲ್ಯದ ಆದಾಯ ಸಿಕ್ಕಿದ್ದು, ಪರಿಶೀಲನೆಯನ್ನು ಮುಂದುವರೆಸಿದ್ದಾರೆ. ಎಸಿಬಿ ಮೂಲಗಳ ಪ್ರಕಾರ, ರಂಗನಾಥ್ ನಾಯಕ್ ಮನೆಯಲ್ಲಿ ಬರೋಬ್ಬರಿ 20 ಕೋಟಿ ಮೌಲ್ಯದ ಆದಾಯ ಪತ್ತೆಯಾಗಿದೆ. ಕೆಜಿ ಗಟ್ಟಲೆ ಚಿನ್ನ, ಬೆಳ್ಳಿ ಮೊದಲಾದ ಅಮೂಲ್ಯ ವಸ್ತುಗಳು ಸಿಕ್ಕಿವೆ. ಸೂಪರಿಂಟೆಂಡೆಂಟ್ ಎಂಜಿನಿಯರ್ ಮನೆಯಲ್ಲಿ ಇಷ್ಟು ಪ್ರಮಾಣದ ಆಸ್ತಿ ನೋಡಿ ಎಸಿಬಿ ಅಧಿಕಾರಿಗಳೇ ಬೆಚ್ಚಿಬಿದ್ದರೆನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೊಳೆನರಸೀಪುರದ ಲಕ್ಷ್ಮಿನರಸಿಂಹ ಸ್ವಾಮಿ ರಥೋತ್ಸವ: ರಥದ ಅಲಂಕಾರದಲ್ಲಿ ರಾಜಕೀಯ:ಶ್ರೇಯಸ್ ಪಟೇಲ್ ವಿರುದ್ಧ JDS ಕಾರ್ಯಕರ್ತರ ಆಕ್ರೋಶ
ಇರಾನ್ ದಾಳಿಯ ಸಾವಿನ ದವಡೆಯಿಂದ ಪಾರಾಗಿ ಬೆಂಗಳೂರಿಗೆ ಬಂದಿಳಿದ 230 ಕನ್ನಡಿಗರು; ಬಾಂಬ್ ಬೀಳುವ ಅನುಭವ ಬಿಚ್ಚಿಟ್ಟರು!