ಮ್ಯಾಕ್ ಡೊನಾಲ್ಡ್'ನ ತಿಂಡಿಯಲ್ಲಿ ಸಿಕ್ತು ಸತ್ತ ಹಲ್ಲಿ : ಬೆಚ್ಚಿ ಬಿದ್ದ ಗ್ರಾಹಕರು

By Suvarna Web Desk  |  First Published Mar 3, 2017, 1:35 PM IST

ವೈಟರ್ ಎರಡೂ ತಿಂಡಿಗಳನ್ನು ತಾಯಿ ಮಗಳಿದ್ದ ಟೇಬಲ್'ಗೆ ತಂದಿಟ್ಟ. ಇಬ್ಬರು ತಿಂಡಿಯನ್ನು ತಿನ್ನಲು ಶುರು ಮಾಡಿದಾಗಕರಿದ ಪದಾರ್ಥ'ದಲ್ಲಿ ಸತ್ತ ಹಲ್ಲಿ ಕಾಣಿಸಿದೆ.


ಕೋಲ್ಕತ್ತಾ(ಮಾ.03):  ಪಾನಿಪೂರಿಗೆ ಟಾಯ್ಲೆಟ್ ಕ್ಲೀನರ್ ಬಳಸಿದ್ದನು ಕೆಲವು ದಿನಗಳನ್ನು ಹಿಂದೆ ನೋಡಿದ್ದೆವು. ಅಲ್ಲದೆ ಆ ವ್ಯಾಪಾರಿಗೆ ಕೋರ್ಟ್ 6 ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು.

ಈಗ ಪ್ರತಿಷ್ಟಿತ ಮ್ಯಾಕ್'ಡೊನಾಲ್ಡ್ ಹೋಟಲ್'ನ ಕರಿದ ಪದಾರ್ಥದಲ್ಲಿ ಸತ್ತ ಹಲ್ಲಿಯನ್ನು ಕಂಡ ಗ್ರಾಹಕರು ಬೆಚ್ಚಿಬಿದ್ದಿದ್ದಾರೆ.ಈ ಘಟನೆ  ನಡೆದಿರುವುದು ಕೋಲ್ಕತ್ತಾದ ಪ್ರತಿಷ್ಟಿತ ಹೋಟೆಲ್'ನಲ್ಲಿ. ಪ್ರಿಯಾಂಕಾ ಮೊಯ್ಹಿತ್ರಾ ಹಾಗೂ ಆಕೆಯ ಮಗಳೊಂದಿಗೆ ಕೋಲ್ಕತಾದ ಇಎಂ ಬೈಪಾಸ್' ಪ್ರದೇಶದ ಪ್ರತಿಷ್ಟಿತ ಮ್ಯಾಕ್ ಡೊನಾಲ್ಡ್ ಹೋಟೆಲ್'ನಲ್ಲಿ ಊಟ ಮಾಡಲು ತೆರಳಿದ್ದಾರೆ. ಇಬ್ಬರು ಬರ್ಗಾರ್ ಹಾಗೂ ಕರಿದ ಪದಾರ್ಧ ಆರ್ಡ್'ರ್ ಮಾಡಿದ್ದಾರೆ.

Tap to resize

Latest Videos

ವೈಟರ್ ಎರಡೂ ತಿಂಡಿಗಳನ್ನು ತಾಯಿ ಮಗಳಿದ್ದ ಟೇಬಲ್'ಗೆ ತಂದಿಟ್ಟ. ಇಬ್ಬರು ತಿಂಡಿಯನ್ನು ತಿನ್ನಲು ಶುರು ಮಾಡಿದಾಗ ಫ್ರೆಂಚ್  ಸತ್ತ ಹಲ್ಲಿ ಕಾಣಿಸಿದೆ. ಇದನ್ನು ಕಂಡೊಡನೆ ಇಬ್ಬರಿಗೂ ವಾಂತಿಯಾಗಿದೆ. ತಕ್ಷಣ ಇದನ್ನು ಹೋಟನ್'ನ ಮ್ಯಾನೇಜರ್ ಗಮನಕ್ಕೆ ತಂದಿದ್ದಾರೆ.

ಹೋಟೆಲ್ ಮ್ಯಾನೇಜರ್ ಹಲ್ಲಿ ಬಿದ್ದದ್ದಕ್ಕೆ ಕ್ಷಮೆಯಾಚಿಸಿ ಎರಡೂ ತಿಂಡಿಗಳನ್ನು ಹೊಸದಾಗಿ ನೀಡುವುದಾಗಿ ಹೇಳಿದ. ಆದರೆ ಪ್ರಿಯಾಂಕ ಅವರು ಅದನ್ನು ತಿರಸ್ಕರಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳೀಯ ಆಹಾರ ಇಲಾಖೆಯವರು ಕೂಡ ಮ್ಯಾಕ್'ಡೊನಾಲ್ಡ್ ಆಹಾರ ಅಸುರಕ್ಷತೆಯ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.

ಇತ್ತ ಪ್ರತಿಷ್ಟಿತ ಮ್ಯಾಕ್ ಡೊನಾಲ್ಡ್ ಸಂಸ್ಥೆ ಕೂಡ ಗಂಭೀರವಾಗಿ ಪರಿಗಣಿಸಿ ಔಟ್'ಲೆಟ್'ನ ನಿರ್ವಹಣೆಯನ್ನು ಬೇರೆಯವರಿಗೆ ನೀಡಲು ಕ್ರಮ ಕೈಗೊಂಡಿದೆ.

click me!