
ಬೆಂಗಳೂರು(ಡಿ.18): ಐಟಿ ದಾಳಿ ನಡೆದು ಸರಿಯಾಗಿ ಒಂದು ವಾರದ ಬಳಿಕ ಎಸಿಬಿ ಅಧಿಕಾರಿಗಳು ಕಾವೇರಿ ನೀರಾವರಿ ನಿಗಮದ ಎಂ.ಡಿ ಚಿಕ್ಕರಾಯಪ್ಪ ಮನೆ ಮೇಲೆ ದಾಳಿ ನಡೆಸಿದ್ದಾರೆ. ಡಿಸೆಂಬರ್ 8ರಂದು ಚಿಕ್ಕರಾಯಪ್ಪಗೆ ಸೇರಿದ ಎರಡು ಮನೆಗಳ ಮೇಲೆ ದಾಳಿ ನಡೆಸಿದ್ದರು. ಬೆಳಗ್ಗೆ 6 ಗಂಟೆಗೆ ಡಾಲರ್ಸ್ ಕಾಲೋನಿಯ ಬಂಗಲೆಗೆ ಬಂದ ಎಸಿಬಿ ಅಧಿಕಾರಿಗಳನ್ನ ಒಂದೂ ಕಾಲು ಗಂಟೆಯವರೆಗೆ ಒಳಗೆ ಬಿಡೋದೇ ಇಲ್ಲ. ಚಿಕ್ಕರಾಯಪ್ಪ ಕುಟುಂಬದವರು ಮನೆ ಬಾಗಿಲು ತೆಗೆಯುವುದು 7.15ಕ್ಕೆ.
| ಶರ್ಟ್ಗಳು- 111 | 46 ಸಾವಿರ ರೂಪಾಯಿ |
| ಟೀ ಶರ್ಟ್ಗಳು-107 | 74 ಸಾವಿರ ರೂಪಾಯಿ |
| ಫ್ಯಾಂಟ್-73 | 65 ಸಾವಿರ ರೂಪಾಯಿ |
| ಸಾಕ್ಸ್ 15 ಜೊತೆ(ಹೊಸದು) | 2 ಸಾವಿರ ರೂಪಾಯಿ |
| ಸಾಕ್ಸ್ 13 ಜೊತೆ (ಬಳಸಿರುವುದು) | 1 ಸಾವಿರ ರೂಪಾಯಿ |
| ಪಂಚೆ- 13 | 18 ಸಾವಿರ ರೂಪಾಯಿ |
| ಒಳ ಉಡುಪುಗಳು-59 | 24 ಸಾವಿರ ರೂಪಾಯಿ |
| ಕರವಸ್ತ್ರ -2 | 240 ರೂಪಾಯಿ |
| ಟೀ ಕಪ್-20 | 200 ರೂಪಾಯಿ |
| ಊಟದ ತಟ್ಟೆ-20 | 1700 ರೂಪಾಯಿ |
| ಕೈಗಡಿಯಾರ -16 | 17,500 ರೂಪಾಯಿ |
| ಚೂಡಿದಾರ್, ಲಂಗ ದಾವಣಿ-178 | 1.4 ಲಕ್ಷ ರೂಪಾಯಿ |
| ಸೀರೆ-81 | 2.68 ಲಕ್ಷ ರೂಪಾಯಿ |
| 9 ಜೊತೆ ಶೂ, 33 ಜೊತೆ ಚಪ್ಪಲಿ | 15 ಸಾವಿರ ರೂಪಾಯಿ |
ಎಸಿಬಿ ಅಧಿಕಾರಿಗಳು ಚಿಕ್ಕರಾಯಪ್ಪ ಮನೆಯಲ್ಲಿ ಪತ್ತೆ ಮಾಡಿದ ಈ ವಸ್ತುಗಳನ್ನೆಲ್ಲಾ ನೋಡಿ ಆಶ್ಚರ್ಯ ಆಗಿರುತ್ತದೆ. ಇದರ ಜೊತೆಗೆ ಪೀಠೋಪಕರಣಗಳು, ಟಿವಿಗಳು, ಪುಸ್ತಕ, ಹಾಸಿಗೆ, ಬೆಡ್ಶೀಟ್ ಎಲ್ಲವನ್ನೂ ಲೆಕ್ಕಹಾಕಿದ್ದಾರೆ.
ದೇವರ ಮನೆಯಲ್ಲಿತ್ತು ಕೆಜಿಗಟ್ಟಲೆ ಚಿನ್ನ, ಬೆಳ್ಳಿ!
ಇನ್ನೂ ಎಸಿಬಿ ಅಧಿಕಾರಿಗಳನ್ನು ಒಂದೂ ಕಾಲು ಗಂಟೆ ಬಾಗಿಲಲ್ಲೇ ಕಾಯುವಂತೆ ಮಾಡಿದ ಚಿಕ್ಕರಾಯಪ್ಪ ಪತ್ನಿ ಮನೆಯಲ್ಲಿದ್ದ 1.7 ಕೆಜಿ ಚಿನ್ನ ಮತ್ತು 14.7 ಕೆಜಿ ಬೆಳ್ಳಿಯನ್ನ ದೇವರ ಮನೆಯಲ್ಲಿ ಬಚ್ಚಿಟ್ಟಿದ್ದರು. ಅದನ್ನೂ ಮೌಲ್ಯಮಾಪನ ಮಾಡಿ ಹಿಂದಿರುಗಿಸಿದ್ದಾರೆ. ಇದರ ಒಟ್ಟು ಮೌಲ್ಯ 1.1 ಕೋಟಿಯಾಗುರತ್ತದೆ.
ಎಸಿಬಿ ಅಧಿಕಾರಿಗಳಿಗೆ ಕೊಡಲಿಲ್ಲ ರೂಮ್ ಬೀಗ
ಇನ್ನೂ ಎಸಿಬಿ ಅಧಿಕಾರಿಗಳ ದಾಳಿ ವೇಳೆ ಒಂದು ರೂಂಗೆ ಬೀಗ ಹಾಕಲಾಗಿತ್ತು. ಐಟಿ ದಾಳಿ ಬಳಿಕ ಈ ರೂಮ್ಗೆ ಬೀಗ ಹಾಕಲಾಗಿದೆ.. ನಂತ್ರ ಕೀ ಕಳೆದುಹೋಗಿದೆ ಎಂದು ಚಿಕ್ಕರಾಯಪ್ಪ ಕುಟುಂಬ ಸಬೂಬು ನೀಡಿದಾಗ ಎಸಿಬಿ ಅಧಿಕಾರಿಗಳು ಅಲ್ಲಿಗೆ ಸುಮ್ಮನಾಗ್ಬಿಟ್ರು.. ಇನ್ನೂ ಚಿಕ್ಕರಾಯಪ್ಪ ಪುತ್ರಿ ಫೆಬೆಲ್ ಬೇ ಅಪಾರ್ಟ್ಮೆಂಟ್'ನಲ್ಲಿದ್ದ ಡಸ್ಟರ್ ಮತ್ತು ಆಡಿ ಕಾರಿನ ಕೀಗಳು, ಜೊತೆಗೆ ಕೆಲ ಆಸ್ತಿ ಪಾಸ್ತಿಯ ದಾಖಲೆ ಪತ್ರಗಳನ್ನ ಎಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಐಟಿ ದಾಳಿಯಾಗಿ ವಾರದ ಬಳಿಕ ಎಸಿಬಿ ದಾಳಿ ನಡೆಸಿದೆ. ಆಗಲೂ ಕಾಟಾಚಾರದ ಪರಿಶೀಲನೆ ಒಳ ಉಡುಪು ಶರ್ಟ್ಗಳ ಲೆಕ್ಕಹಾಕೋಕೆ ಎಸಿಬಿ ಅಧಿಕಾರಿಗಳೇ ಬೇಕಿತ್ತಾ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.