ಬೆಳ್ಳಂಬೆಳಗ್ಗೆ ದಾವಣಗೆರೆಯಲ್ಲಿ ಎಸಿಬಿ ಶಾಕ್

Published : Apr 10, 2018, 11:10 AM ISTUpdated : Apr 14, 2018, 01:12 PM IST
ಬೆಳ್ಳಂಬೆಳಗ್ಗೆ ದಾವಣಗೆರೆಯಲ್ಲಿ ಎಸಿಬಿ ಶಾಕ್

ಸಾರಾಂಶ

ಬೆಳ್ಳಂಬೆಳಗ್ಗೆ ದಾವಣಗೆರೆ ಜಿಲ್ಲೆಯಲ್ಲಿ ಎಸಿಬಿ ಶಾಕ್ ನೀಡಲಾಗಿದೆ. ಜಗಳೂರು ತಾಲ್ಲೂಕಿನ ಮಡ್ರಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಎಟಿ ನಾಗರಾಜ್ ಅವರಿಗೆ ಎಸಿಬಿ ಅಧಿಗಾರಿಗಳು ಬಿಸಿ ಮುಟ್ಟಿಸಿದ್ದಾರೆ.

ದಾವಣಗೆರೆ : ಬೆಳ್ಳಂಬೆಳಗ್ಗೆ ದಾವಣಗೆರೆ ಜಿಲ್ಲೆಯಲ್ಲಿ ಎಸಿಬಿ ಶಾಕ್ ನೀಡಲಾಗಿದೆ. ಜಗಳೂರು ತಾಲ್ಲೂಕಿನ ಮಡ್ರಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಎಟಿ ನಾಗರಾಜ್ ಅವರಿಗೆ ಎಸಿಬಿ ಅಧಿಗಾರಿಗಳು ಬಿಸಿ ಮುಟ್ಟಿಸಿದ್ದಾರೆ.

ಬೆಳ್ಳಂಬೆಳಗ್ಗೆ ನಡೆದ ಎಸಿಬಿ ದಾಳಿಯ ವೇಳೆ ಅತ್ಯಧಿಕ ಪ್ರಮಾಣದಲ್ಲಿ ಆಸ್ತಿ ಪಾಸ್ತಿ ಪತ್ತೆಯಾಗಿದೆ.   2 ಐಷಾರಾಮಿ ಕಾರುಗಳು, 2 ಲಾರಿ, 4 ಬೈಕ್, 5 ಮನೆಗಳನ್ನು ಪತ್ತೆ ಮಾಡಿದ್ದಾರೆ.  

ಜಗಳೂರು ತಾಲ್ಲೂಕಿನ ಗೌರಿಪುರದಲ್ಲಿ 2 ಮನೆ, ಹಿರೆಮಲ್ಲನ ಹೊಳೆಯಲ್ಲಿ 1 ಮನೆ, ಕೂಡ್ಲಿಗಿ ಹಾಗೂ ದಾವಣಗೆರೆಯ ಎಸ್ ಎಸ್ ಬಡಾವಣೆಯಲ್ಲಿ ಒಂದು ಮನೆ ಪತ್ತೆ ಇರುವುದು ದಾಳಿ ವೇಳೆ ತಿಳಿದು ಬಂದಿದೆ.  

ಎಸಿಬಿ ಎಸ್ ಪಿ ವಂಶಿಕೃಷ್ಣ ನೇತೃತ್ವದಲ್ಲಿ ದಾಳಿ ನಡೆದಿದೆ. ಅತೀ ಭ್ರಷ್ಟ ಪಿಡಿಓ ಎಂಬ ಹೇಸರು ಮಾಡಿದ್ದ ಪಿಡಿಓ ನಾಗರಾಜ್, ಕೂಡ್ಲಿಗಿ ಹಾಗೂ ದಾವಣಗೆರೆಯಲ್ಲಿ ವ್ಯವಹಾರ ಮಾಡಲು ಕಚೇರಿಗಳನ್ನು ಹೊಂದಿದ್ದರು ಎನ್ನುವುದು ತಿಳಿದು ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕರ್ನಾಟಕ ಪೊಲೀಸ್ ವರ್ಗಾವಣೆ: 129 ಇನ್ಸ್‌ಪೆಕ್ಟರ್, 23 ಡಿವೈಎಸ್ಪಿಗಳ ಎತ್ತಂಗಡಿ; ಬೆಂಗಳೂರು ಪೊಲೀಸರಿಗಿಲ್ಲ ಭಾಗ್ಯ!
DMart ಆನ್‌ಲೈನ್‌ ಅಪ್ಲಿಕೇಶನ್‌ ಅಥವಾ DMart ಸ್ಟೋರ್‌? ಹೆಚ್ಚಿನ ಆಫರ್‌ ಸಿಗೋದು ಎಲ್ಲಿ?