ಅಬುಧಾಬಿಯಲ್ಲಿ ಹಿಂದಿ 3ನೇ ಅಧಿಕೃತ ಭಾಷೆ!

By Web DeskFirst Published Feb 11, 2019, 10:44 AM IST
Highlights

ಅಬುಧಾಬಿ ನ್ಯಾಯಾಂಗ ಇಲಾಖೆಯು ನ್ಯಾಯಾಲಯಗಳಲ್ಲಿ ಹಿಂದಿಯನ್ನು ಮೂರನೇ ಅಧಿಕೃತ ಭಾಷೆಯಾಗಿ ಬಳಕೆ ಮಾಡಲು ನಿರ್ಧರಿಸಿದೆ.

ದುಬೈ[ಫೆ.11]: ಅಬುಧಾಬಿ ಕೋರ್ಟ್‌ನಲ್ಲಿ ಹಿಂದಿಯನ್ನು ಮೂರನೇ ಅಧಿಕೃತ ಭಾಷೆಯಾಗಿ ಬಳಕೆ ಮಾಡಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಅಬುಧಾಬಿ ನ್ಯಾಯಾಂಗ ಇಲಾಖೆ ಶನಿವಾರ ಈ ಮಹತ್ವದ ತೀರ್ಮಾನ ಕೈಗೊಂಡಿದೆ.

ದೇಶದ ಜನಸಂಖ್ಯೆಯ ಶೇ.30ರಷ್ಟುಮಂದಿ ಭಾರತೀಯರೇ ಆಗಿದ್ದರಿಂದ ಅಲ್ಲಿನ ನ್ಯಾಯಾಂಗ ಇಲಾಖೆ ಕೋರ್ಟ್‌ ವ್ಯವಹಾರಗಳಲ್ಲಿ ಅಗತ್ಯ ಸಂದರ್ಭಗಳಲ್ಲಿ ಹಿಂದಿ ಭಾಷಾ ಬಳಕೆ ಮಾಡುವುದೇ ಒಳಿತೆಂಬ ತೀರ್ಮಾನಕ್ಕೆ ಬಂದಿದೆ. ನ್ಯಾಯಾಂಗ ತನಿಖೆ ಹಾಗೂ ವಿಚಾರಣೆ ಸಂದರ್ಭದಲ್ಲಿ ಇದು ಸಹಕಾರಿ ಆಗಲಿದೆ ಎಂಬುದು ಅಲ್ಲಿನ ನ್ಯಾಯಾಂಗ ಇಲಾಖೆ ಉದ್ದೇಶವಾಗಿದ್ದು, ಈ ಹಿನ್ನೆಲೆಯಲ್ಲಿ ಕೋರ್ಟ್‌ನಲ್ಲಿ ಹಿಂದಿಯನ್ನು ಅಧಿಕೃತ ಭಾಷೆಯನ್ನಾಗಿ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದೆ. ಅರೆಬಿಕ್‌ ಹಾಗೂ ಇಂಗ್ಲಿಷ್‌ ಜತೆಗೆ ಈಗ ಹಿಂದಿಯೂ ಅಧಿಕೃತ ಭಾಷೆಯಾಗಿದೆ.

ಸರ್ಕಾರಿ ದಾಖಲೆಗಳ ಪ್ರಕಾರ ಅಬುಧಾಬಿ ಜನಸಂಖ್ಯೆ 90 ಲಕ್ಷದಷ್ಟಿದ್ದು, ಅದರಲ್ಲಿ 2/3ರಷ್ಟುವಲಸಿಗರೇ ಇದ್ದಾರೆ. ಭಾರತೀಯರು ಹೆಚ್ಚುಕಡಿಮೆ 26 ಲಕ್ಷ ಮಂದಿ ಇದ್ದಾರೆ.

click me!