
ನವದೆಹಲಿ[ಅ.07]: ಪಾಕಿಸ್ತಾನದ ಬಾಲಾಕೋಟ್ ಜೈಷ್ ಎ ಮೊಹಮ್ಮದ್ ಉಗ್ರರ ಶಿಬಿರದ ಮೇಲೆ ದಾಳಿ ನಡೆಸಿದ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್‌ರ ‘51 ಸ್ಕಾ$್ವಡ್ರನ್’ ವಾಯುಪಡೆ ಘಟಕಕ್ಕೆ ಏರ್ ಚೀಫ್ ಮಾರ್ಷಲ್ ಆರ್‌ಕೆಎಸ್ ಭದೂರಿಯಾ ಅವರು ‘ಪ್ರಶಂಸನಾ ಗೌರವ’ ನೀಡಿ ಸನ್ಮಾನಿಸಲಿದ್ದಾರೆ.
ಕ್ರಿಕೆಟಿಗರ ಟಿ ಟಾಲೆಂಜ್‌ನಲ್ಲಿ ಪೈಲೆಟ್ ಅಭಿನಂದನ್ ಎಳೆದುತಂದ ಪಾಕಿಸ್ತಾನಿ ಫ್ಯಾನ್ಸ್!
ಅದೇ ರೀತಿ ಫೆ.26ರಂದು ಜೈಷ್ ಕ್ಯಾಂಪ್ ಮೇಲೆ ಲೇಸರ್ ಬಾಂಬ್ ಹಾಕಿದ ‘9 ಸ್ವಾಡ್ರನ್’ ಘಟಕ ಹಾಗೂ ವಾಯುದಾಳಿ ನಡೆಸಲು ಫೆ.27ರಂದು ಆಗಮಿಸುತ್ತಿದ್ದ ಪಾಕಿಸ್ತಾನಿ ಜೆಟ್‌ಗಳನ್ನು ಹಿಮ್ಮೆಟ್ಟಿಸಿದ ಸ್ಕಾ$್ವಡ್ರನ್ ಲೀಡರ್ ಮಿಂಟಿ ಅಗರ್‌ವಾಲ್ ಅವರ ‘601 ಸಿಗ್ನಲ್’ ವಾಯುಪಡೆ ಘಟಕಕ್ಕೂ ಪ್ರಶಂಸನಾ ಗೌರವ ಪ್ರಕಟಿಸಲಾಗಿದೆ.
ಕಳೆದ ಫೆಬ್ರವರಿಯಲ್ಲಿ ಅಭಿನಂದನ್ ಅವರು ಮಿಗ್-21 ಬೈಸನ್ ವಿಮಾನ ಚಲಾಯಿಸಿ, ಪಾಕಿಸ್ತಾನದ ವಾಯುಪಡೆಗೆ ಸೇರಿದ ಅಮೆರಿಕ ನಿರ್ಮಿತ ಎಫ್-16 ಯುದ್ಧವಿಮಾನ ಹೊಡೆದುರುಳಿಸಿದ್ದರು. ಆದರೆ ಅಭಿನಂದನ್‌ರ ಮಿಗ್ ಕೂಡ ದಾಳಿಗೆ ತುತ್ತಾಗಿ ಬಿದ್ದ ಕಾರಣ, ಅಭಿನಂದನ್‌ರನ್ನು ಪಾಕಿಸ್ತಾನ ಬಂಧಿಸಿ ನಂತರ ಬಿಡುಗಡೆ ಮಾಡಿತ್ತು.
ಹುಬ್ಬಳ್ಳಿಯಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ಪ್ರತ್ಯಕ್ಷ !
ಪಾಕ್ ಮೇಲೆ ದಾಳಿ ನಡೆಸಿದ ಸಾಧನೆ ಕಾರಣಕ್ಕೆ ಈಗ ‘51 ಸ್ಕಾ$್ವಡ್ರನ್’ಗೆ ಗೌರವ ಲಭ್ಯವಾಗಿದ್ದು, ಈ ವಾಯುಪಡೆ ಘಟಕದ ಪರ ಗ್ರೂಪ್ ಕ್ಯಾಪ್ಟನ್ ಸತೀಶ್ ಪವಾರ್ ಅವರು ಗೌರವ ಸ್ವೀಕರಿಸಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.