ಮುಂಬೈನಲ್ಲಿ 2600 ಮರಗಳ ಹನನ: ಇಂದು ಸುಪ್ರೀಂ ವಿಚಾರಣೆ

By Web DeskFirst Published Oct 7, 2019, 8:35 AM IST
Highlights

ಮರಗಳ ಹನನ ಪ್ರಶ್ನಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ 2 ಬಾರಿ ತಿರಸ್ಕರಿಸಿತ್ತು| ತೀವ್ರ ಪ್ರತಿಭಟನೆ ಇಂದು ಸುಪ್ರೀಂ ವಿಚಾರಣೆ| 

ನವದೆಹಲಿ[ಆ.07]: ಮುಂಬೈನಲ್ಲಿ ಮೆಟ್ರೋ ರೈಲು ಡಿಪೋಗೆಂದು ಆರೇ ಅರಣ್ಯದ 2600ಕ್ಕೂ ಹೆಚ್ಚು ಮರಗಳ ಕಡಿತ ಕುರಿತಂತೆ ಸುಪ್ರೀಂ ಕೋರ್ಟ್‌ ವಿಶೇಷ ಪೀಠ ಸೋಮವಾರ ಬೆಳಗ್ಗೆ 10 ಗಂಟೆಗೆ ವಿಚಾರಣೆ ನಡೆಸಲಿದೆ.

ಮೆಟ್ರೋ ಡಿಪೋಗೆ 2656 ಮರಗಳ ಹನನ!

ಮರಗಳ ಹನನ ಪ್ರಶ್ನಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ 2 ಬಾರಿ ತಿರಸ್ಕರಿಸಿತ್ತು. ಇದರ ಬೆನ್ನಲ್ಲೇ ಮರ ಕಡಿತ ಖಂಡಿಸಿ ಮುಂಬೈನಲ್ಲಿ ಪ್ರತಿಭಟನೆ ತಾರಕಕ್ಕೇರಿತ್ತು. ಈ ನಡುವೆ, ನೋಯ್ಡಾದ ಕಾನೂನು ವಿದ್ಯಾರ್ಥಿಗಳು, ಮರ ಕಡಿತ ವಿರೋಧಿಸಿ ಮುಖ್ಯ ನ್ಯಾಯಾಧೀಶ ನ್ಯಾ| ರಂಜನ್‌ ಗೊಗೋಯ್‌ ಅವರಿಗೆ ಪತ್ರ ಬರೆದಿದ್ದರು.

ಮೆಟ್ರೋಗಾಗಿ 2600 ಮರ ಕಡಿಯಲು ಕೋರ್ಟ್ ಸಮ್ಮತಿ!

ಇದನ್ನೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಪರಿಗಣಿಸಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ನಿರ್ಧರಿಸಿದೆ.

click me!