ಅಮೆರಿಕದ ಹೊಸ ವೀಸಾ ನೀತಿ ಭಾರತೀಯ ವಲಸಿಗರಿಗೆ ಸಂಕಷ್ಟ!

By Web DeskFirst Published Oct 7, 2019, 8:27 AM IST
Highlights

ಅಮೆರಿಕದ ಹೊಸ ವೀಸಾ ನೀತಿ ಭಾರತೀಯ ವಲಸಿಗರಿಗೆ ಕಷ್ಟ| ಆರೋಗ್ಯ ವಿಮೆ ಹೊಂದಿರದೇ ಇದ್ದರೆ ವೀಸಾ ಇಲ್ಲ| ನವೆಂಬರ್‌ನಿಂದ ಹೊಸ ನಿಯಮ ಜಾರಿ| ಈಗಾಗಲೇ ಅಮೆರಿಕದಲ್ಲಿರುವ ಭಾರತೀಯರಿಗೆ ಇದು ಅನ್ವಯಿಸಲ್ಲ

ವಾಷಿಂಗ್ಟನ್‌[ಅ.07]: ಅಮೆರಿಕದ ಹೊಸ ವೀಸಾ ನೀತಿಯೊಂದರಿಂದ, ಅಲ್ಲಿಗೆ ತೆರಳಲು ಇಚ್ಛಿಸುತ್ತಿರುವ ಭಾರತೀಯ ವಲಸಿಗರಿಗೆ ತೊಂದರೆಯಾಗುವ ಸಾಧ್ಯತೆ ಇದೆ. ‘ವೀಸಾ ಆಕಾಂಕ್ಷಿಗಳು ಆರೋಗ್ಯ ವಿಮೆ ಹೊಂದಿರಬೇಕು ಅಥವಾ ತಮ್ಮ ಆರೋಗ್ಯ ಸಂಬಂಧಿ ವೆಚ್ಚಗಳನ್ನು ತಾವೇ ಭರಿಸಬೇಕು’ ಎಂಬ ಷರತ್ತುಗಳನ್ನು ಹೊಸ ವೀಸಾ ನೀತಿಯಲ್ಲಿ ಹಾಕಲಾಗಿದೆ. ಒಂದು ವೇಳೆ ಆರೋಗ್ಯ ವಿಮೆ ಹೊಂದಿರದಿದ್ದರೆ ಅಥವಾ ಆ ವಿಮೆಯು ಆರೋಗ್ಯ ವೆಚ್ಚ ಭರಿಸಲು ಅಸಮರ್ಥರಾಗಿದ್ದರೆ ಅಂಥವರಿಗೆ ವೀಸಾ ನಿರಾಕರಿಸಲಾಗುತ್ತದೆ.

312 ಸಿಖ್ ವಿದೇಶಿಯರು ಕಪ್ಪುಪಟ್ಟಿಯಿಂದ ಹೊರಕ್ಕೆ: ಇಬ್ಬರು ಉಳಿದಿದ್ದೇಕೆ?

ಈ ಹೊಸ ವೀಸಾ ನೀತಿಯಿಂದ ಸುಮಾರು 23 ಸಾವಿರ ಭಾರತೀಯ ವಲಸಿಗರಿಗೆ ತೊಂದರೆಯಾಗುವ ಸಾಧ್ಯತೆ ಇದೆ. ನವೆಂಬರ್‌ನಿಂದ ಜಾರಿಯಾಗುವಂತೆ ಹೊಸ ವೀಸಾ ನೀತಿಯನ್ನು ಜಾರಿಗೆ ತರಲು ಡೊನಾಲ್ಡ್‌ ಟ್ರಂಪ್‌ ಸರ್ಕಾರ ನಿರ್ಧರಿಸಿದೆ. ಅಮೆರಿಕದ ಆರೋಗ್ಯ ವೆಚ್ಚದ ಮೇಲೆ ಹೊರೆ ಬೀಳುವುದನ್ನು ತಪ್ಪಿಸಲು ಈ ನೀತಿ ಜಾರಿಗೆ ತರಲಾಗಿದೆ.

ಜನಸಾಮಾನ್ಯರಿಗೆ ಸುಷ್ಮಾ ಯಾಕೆ ಇಷ್ಟ? ಈ ಸಾಧನೆಗಳೆ ಹೇಳುತ್ತವೆ ಉತ್ತರ

ಈಗಾಗಲೇ ಅಮೆರಿಕದ ಕಂಪನಿಗಳ ಪ್ರಾಯೋಜಿತ ಎಚ್‌1ಬಿ ವೀಸಾ ಅಡಿ ಅಥವಾ ಗ್ರೀನ್‌ಕಾರ್ಡ್‌ ಅಡಿ ಅಮೆರಿಕದಲ್ಲಿ ಇರುವವರಿಗೆ ಈ ನಿಯಮ ಅನ್ವಯಿಸುವುದಿಲ್ಲ. ಹೊಸದಾಗಿ ತಮ್ಮ ಸಂಬಂಧಿಕರ ಪ್ರಾಯೋಜಕತ್ವದಲ್ಲಿ ಅಮೆರಿಕಕ್ಕೆ ತೆರಳಲು ಇಚ್ಛಿಸುತ್ತಿರುವ ವಿದೇಶೀ ವೀಸಾ ಆಕಾಂಕ್ಷಿಗಳಿಗೆ ನಿಯಮ ಅನ್ವಯವಾಗುತ್ತದೆ. ಇಂತಹ 23 ಸಾವಿರ ವೀಸಾ ಆಕಾಂಕ್ಷಿಗಳು ಭಾರತದಿಂದ ಮುಂದಿನ ತಿಂಗಳು ಅಮೆರಿಕಕ್ಕೆ ತೆರಳಲು ಕಾಯುತ್ತಿದ್ದು, ಅವರ ಮೇಲೆ ಹೊಸ ನೀತಿ ಪರಿಣಾಮ ಬೀರುವ ಭೀತಿಯಿದೆ.

click me!