ಭಾರತದ ಹೀರೋ ಅಭಿನಂದನ್‌ಗೆ ಪಾಕ್‌ ಕಿರುಕುಳ ಕೊಡ್ತಾ?

By Web DeskFirst Published Mar 2, 2019, 8:21 PM IST
Highlights

ಪಾಕ್ ನಿಜ ಬಣ್ಣ ಬಯಲು ಮಾಡಿದ ವಿಂಗ್ ಕಮಾಂಡರ್| ಪಾಕ್ ನಲ್ಲಿ ಅಭಿನಂದನ್ ಗೆ ಮಾನಸಿಕ ಕಿರುಕುಳ| ಒತ್ತಾಯಪೂರ್ವಕವಾಗಿ ವಿಡಿಯೋ ಮಾಡಿಸಲಾಗಿದೆ| ಅಭಿನಂದನ್ ಗೆ ಮಾನಸಿಕ ಹಿಂಸೆ ನೀಡಿದ ಪಾಕಿ ಸೈನಿಕರು|

ನವದೆಹಲಿ(ಮಾ.02): ತನ್ನ ವಶದಲ್ಲಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಗೌರವಯುತವಾಗಿ ನಡೆಸಿಕೊಂಡಿದ್ದಾಗಿ ಬೊಗಳೆ ಬಿಟ್ಟಿದ್ದ ಪಾಕಿಸ್ತಾನದ ನಿಜ ಬಣ್ಣ ಬಯಲಾಗಿದೆ. 

ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಿರುವ ಅಭಿನಂದನ್ ಅವರನ್ನುಪಾಕಿಸ್ತಾನದಲ್ಲಿ ಮಾನಸಿಕವಾಗಿ ಸಾಕಷ್ಟು ಹಿಂಸಿಸಲಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ. ಆದರೆ ಅಭಿನಂದನ್ ಅವರ ಮೇಲೆ ಯಾವುದೇ ದೈಹಿಕ ಹಲ್ಲೆ ನಡೆದಿಲ್ಲ ಎಂದು ವರದಿ ತಿಳಿಸಿದೆ.

A day after his return from Pakistan, Wing Commander Abhinandan informed the top brass of IAF that he was subjected to a lot of mental harassment, though he was not physically tortured by Pakistan military authorities, said a source.

Read Story | https://t.co/5SkjqinLgz pic.twitter.com/sHR3IPjSNU

— ANI Digital (@ani_digital)

ಅಭಿನಂದನ್ ಅವರನ್ನು ಸುರಕ್ಷಿತವಾಗಿ ನೋಡಿಕೊಂಡರೂ ಒತ್ತಾಯ ಪೂರ್ವಕ ಹೇಳಿಕೆ ಪಡೆದು ವಿಡಿಯೋ ಬಿಡುಗಡೆ ಮಾಡಲಾಗಿತ್ತು . ಉದ್ದೇಶಪೂರ್ವಕವಾಗಿಯೇ ಬಿಡುಗಡೆ ಪ್ರಕ್ರಿಯೆಯನ್ನು ವಿಳಂಬಗೊಳಿಸಲಾಯಿತು ಎಂದು ಹೇಳಲಾಗಿದೆ.

click me!