ಪೋಷಕರೇ ಇನ್ಮುಂದೆ ನೋ ಟೆನ್ಷನ್: ಮಕ್ಕಳು ಅಪಹರಣವಾದರೆ ಮೆಸೇಜ್ ನೀಡುತ್ತದೆ ಈ ಆ್ಯಪ್

By Suvarna Web DeskFirst Published Jun 1, 2017, 8:16 AM IST
Highlights

ಮಕ್ಕಳನ್ನು ಮನೆಯಲ್ಲಿ ಬಿಟ್ಟು ಉದ್ಯೋಗಕ್ಕೆ ಹೋಗುವ ಪೋಷಕರೇ ಇನ್ಮುಂದೆ ನೀವು ಚಿಂತೆ ಬಿಟ್ಟು ನೆಮ್ಮದಿಯಾಗಿ ಕೆಲಸ ಮಾಡಿ. ನಿಮ್ಮ ಪುಟ್ಟ ಮಗು ಅಪಹರಣ ಆಗುವ ಭೀತಿ ಇದ್ದರೆ ಚಿಂತೆ ಪಡಬೇಡಿ. ಯಾಕೆಂದರೆ 'ಟ್ರಾಕ್ ಮೀ' ಎನ್ನುವ ಮಕ್ಕಳ ಕಿಡ್ನಾಪ್ ಆಪ್ ಬಂದಿದೆ.

ಉಡುಪಿ(ಜೂ.01): ಮಕ್ಕಳನ್ನು ಮನೆಯಲ್ಲಿ ಬಿಟ್ಟು ಉದ್ಯೋಗಕ್ಕೆ ಹೋಗುವ ಪೋಷಕರೇ ಇನ್ಮುಂದೆ ನೀವು ಚಿಂತೆ ಬಿಟ್ಟು ನೆಮ್ಮದಿಯಾಗಿ ಕೆಲಸ ಮಾಡಿ. ನಿಮ್ಮ ಪುಟ್ಟ ಮಗು ಅಪಹರಣ ಆಗುವ ಭೀತಿ ಇದ್ದರೆ ಚಿಂತೆ ಪಡಬೇಡಿ. ಯಾಕೆಂದರೆ 'ಟ್ರಾಕ್ ಮೀ' ಎನ್ನುವ ಮಕ್ಕಳ ಕಿಡ್ನಾಪ್ ಆಪ್ ಬಂದಿದೆ.

ಉಡುಪಿಯ ಬಂಟಕಲ್ಲು ಮದ್ವ ವಾದಿರಾಜ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಹೊಸ ಸಂಶೋಧನೆ ಮಾಡಿದ್ದಾರೆ. ಮಕ್ಕಳು ಕಿಡ್ನಾಪ್ ಆದರೆ ತಕ್ಷಣ ಕಂಡು ಹಿಡಿಯುವ ಟ್ರಾಪ್ ಮಿ ಆಪ್ ಅನ್ನು ಸಂಶೋಧನೆ ಮಾಡಿದ್ದಾರೆ. ನಿಮ್ಮ ಮಕ್ಕಳು ನಿಗದಿತ ವ್ಯಾಪ್ತಿ ಮೀರಿ ಓಡಾಡಿದರೆ ನಿಮಗೆ ಮೆಸೇಜ್ ಬರುತ್ತದೆ. ಅವರನ್ನು ಯಾರಾದರೂ ಹೊತ್ತೊಯ್ದರೆ ಸಂಚಾರದ ಗೂಗಲ್ ಮ್ಯಾಪ್ ನಿಮ್ಮ ಮೊಬೈಲ್'ಗೆ ಬಂದು ಬೀಳುತ್ತದೆ.

ಈ App ಗೆ ವಿದ್ಯಾರ್ಥಿಗಳು ಟ್ರಾಪ್ ಮೀ ಅಂತ ಹೆಸರಿಟ್ಟಿದ್ದಾರೆ. ಇನ್ನೂ ಈ ಆಪ್ ಕಾರ್ಯ ನಿರ್ವಹಣೆ ಕುರಿತಾಗಿ ನೋಡುವುದಾದರೆ. ರಾಸ್ಟರಿ ಪೈ 3ಯನ್ನು ಜಿಪಿಎಸ್ ಗೆ ಜೋಡಿಸಲಾಗುತ್ತದೆ. ಅದರಿಂದ ಉಪಲಬ್ದವಾಗುವ ಮಾಹಿತಿ ಡಾಟಾಬೇಸ್'ಗೆ ಹೋಗುತ್ತದೆ. ಅಕ್ಷಾಂಶ ಮತ್ತು ರೇಖಾಂಶಗಳನ್ನು ಅಂತರ್ಜಾಲದ ಮೂಲಕ ಕಳುಹಿಸಲಾಗುತ್ತದೆ. ಚಲಿಸಿದ ದಾರಿ ನಕ್ಷೆಯ ರೂಪದಲ್ಲಿ ಲಭ್ಯವಾಗುತ್ತದೆ. ಅಪಾಯಕಾರಿ ಸಂದರ್ಭದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ರವಾನೆಯಾಗುತ್ತೆ.

ಮಕ್ಕಳ ಅಪಹರಣ ದಿನೇ ದಿನೇ ಹೆಚ್ಚುತ್ತಿದೆ. ಹಾಗಾಗಿ ಈ ಆಧುನಿಕ Appನ್ನು ಸರಿಯಾಗಿ ಬಳಕೆ ಮಾಡಿಕೊಂಡರೆ  ಉಪಯೋಗವಾಗುವುದರಲ್ಲಿ ಅನುಮಾನವೇ ಇಲ್ಲ.

click me!