ಹಿಂದೂ ಧರ್ಮಕ್ಕೆ ಮುಸ್ಲೀಂ ವರ ಮತಾಂತರ; ಹಿಂದೂ ಪದ್ಧತಿಯಂತೆ ವಿವಾಹ

Published : May 31, 2017, 10:02 PM ISTUpdated : Apr 11, 2018, 12:46 PM IST
ಹಿಂದೂ ಧರ್ಮಕ್ಕೆ ಮುಸ್ಲೀಂ ವರ ಮತಾಂತರ; ಹಿಂದೂ ಪದ್ಧತಿಯಂತೆ ವಿವಾಹ

ಸಾರಾಂಶ

ಮುಸ್ಲಿಂ ಯುವಕನೊಬ್ಬ ಪ್ರೀತಿಸಿದ ಯುವತಿಗಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡು ಆಕೆಯನ್ನು ವಿವಾಹವಾಗಿರುವ ಅಪರೂಪದ ಕ್ಷಣಕ್ಕೆ ಬುಧವಾರ ಪಟ್ಟಣದ ಈಶ್ವರ ದೇವಸ್ಥಾನ ಸಾಕ್ಷಿಯಾಯಿತು. 

ಯಲ್ಲಾಪುರ (ಮೇ.31): ಮುಸ್ಲಿಂ ಯುವಕನೊಬ್ಬ ಪ್ರೀತಿಸಿದ ಯುವತಿಗಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡು ಆಕೆಯನ್ನು ವಿವಾಹವಾಗಿರುವ ಅಪರೂಪದ ಕ್ಷಣಕ್ಕೆ ಬುಧವಾರ ಪಟ್ಟಣದ ಈಶ್ವರ ದೇವಸ್ಥಾನ ಸಾಕ್ಷಿಯಾಯಿತು. 
 
ಪಟ್ಟಣದ ನೂತನ ನಗರದ ಹಸನ್ ರಹಿಂ ಖಾನ್ ಎಂಬ ಯುವಕನೇ ತಾನು ಪ್ರೀತಿಸುತ್ತಿದ್ದ ಕಾಳಮ್ಮನಗರದ ಯಶೋದಾ ಅವರನ್ನು ಹಿಂದೂ ಧಾರ್ಮಿಕ ಪದ್ಧತಿಯಂತೆ ಹಿಂದೂ ಸಂಘಟನೆ ಮುಖಂಡರ ಸಮ್ಮುಖದಲ್ಲಿ ಇಲ್ಲಿನ ಈಶ್ವರ ದೇವಸ್ಥಾನದಲ್ಲಿ ವಿವಾಹವಾಗಿದ್ದಾನೆ. ಇವರಿಬ್ಬರು ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಪ್ರೀತಿಸಿದ ಯುವತಿಯನ್ನು ಕೈ ಹಿಡಿಯಲೇಬೇಕು ಎಂದು ನಿರ್ಧರಿಸಿದ ಯುವಕ ಹಿಂದೂ ಧರ್ಮಕ್ಕೆ ಮತಾಂತರಗೊಂಡು ತನ್ನ ಹೆಸರನ್ನು ‘ಆರ್ಯ’ ಎಂದು ಬದಲಾಯಿಸಿಕೊಂಡಿದ್ದು, ಸಾರ್ವಜನಿಕರ ಸಮ್ಮುಖದಲ್ಲಿ ಇಬ್ಬರೂ ಸಪ್ತಪದಿ ತುಳಿದಿದ್ದಾರೆ. 
 
ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಹಾಜರಿದ್ದು, ವಧು-ವರರನ್ನು ಆಶೀರ್ವದಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಈ ವಿವಾಹ ‘ಲವ್ ಜಿಹಾದ್’ಗೆ ತಕ್ಕ ಉತ್ತರ. ಇಲ್ಲಿನ ಮುಸ್ಲಿಮರ ಪೂರ್ವಜರು ಹಿಂದೂಗಳೇ ಆಗಿದ್ದು, ಒತ್ತಾಯಪೂರ್ವಕವಾಗಿ ಮತಾಂತರ ಹೊಂದಿದ್ದಾರೆ. ಪುನಃ ಅವರನ್ನು ಹಿಂದೂ ಧರ್ಮಕ್ಕೆ ಕರೆತರಬೇಕೆಂಬುದು ನಮ್ಮ ಆಶಯ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವೀಕ್ ಡೇಸಲ್ಲಿ ಫ್ರೊಫೆಸರ್, ವೀಕೆಂಡ್‌ನಲ್ಲಿ ಖತರ್ನಾಕ್ ಕಳ್ಳಿ! ಮದುವೆ ಮನೆಗಳಲ್ಲಿ ಕನ್ನ ಹಾಕುತ್ತಿದ್ದ ಶಿಕ್ಷಕಿ!
2026 Holiday Calendar:ಮುಂದಿನ ವರ್ಷ ಕುಟುಂಬದ ಜೊತೆ ಟ್ರಿಪ್ ಹೋಗೋಕೆ ಇಲ್ಲಿದೆ ಬೆಸ್ಟ್ ಲೀವ್ ಪ್ಲಾನ್!