ಗೋವಾದಲ್ಲಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ಎಎಪಿ ಎಂಟ್ರಿ: ಪರಿಕ್ಕರ್ ದೆಹಲಿ ರಾಜಕಾರಣದಿಂದ ಬಿಜೆಪಿಗೆ ಹೊಡೆತ

Published : Jan 07, 2017, 02:39 AM ISTUpdated : Apr 11, 2018, 01:12 PM IST
ಗೋವಾದಲ್ಲಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ಎಎಪಿ ಎಂಟ್ರಿ: ಪರಿಕ್ಕರ್ ದೆಹಲಿ ರಾಜಕಾರಣದಿಂದ ಬಿಜೆಪಿಗೆ ಹೊಡೆತ

ಸಾರಾಂಶ

ಪಂಜಾಬ್ ಚುನಾವಣೆಯಷ್ಟೇ ಕುತೂಹಲ ಕೆರಳಿಸಿರುವುದು ಕರ್ನಾಟಕಕ್ಕೆ ತಾಗಿಕೊಂಡಿರುವ ಕರಾವಳಿ  ಗೋವಾದ ವಿಧಾನ ಸಭಾ ಚುನಾವಣೆ . ಪರಂಪರಾಗತವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಒಂದು ಪಕ್ಷವನ್ನು ಆಯ್ದುಕೊಳ್ಳುತ್ತಿದ್ದ ಗೋವಾ ಮತದಾರರ ಎದುರು ಈಗ ಮೂರನೇ ವಿಕಲ್ಪವಾಗಿ ಆಮ್ ಆದ್ಮಿ ಪಕ್ಷ ಕೂಡ ಕಾಣಿಸಿಕೊಂಡಿದ್ದು ನೇರ ಹಣಾಹಣಿ ಈಗ ತ್ರಿಕೋಣ ಸ್ವರೂಪವನ್ನು ತಾಳುತ್ತಿದೆ .

ಗೋವಾ(ಜ.07): ಪಂಜಾಬ್ ಚುನಾವಣೆಯಷ್ಟೇ ಕುತೂಹಲ ಕೆರಳಿಸಿರುವುದು ಕರ್ನಾಟಕಕ್ಕೆ ತಾಗಿಕೊಂಡಿರುವ ಕರಾವಳಿ  ಗೋವಾದ ವಿಧಾನ ಸಭಾ ಚುನಾವಣೆ . ಪರಂಪರಾಗತವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಒಂದು ಪಕ್ಷವನ್ನು ಆಯ್ದುಕೊಳ್ಳುತ್ತಿದ್ದ ಗೋವಾ ಮತದಾರರ ಎದುರು ಈಗ ಮೂರನೇ ವಿಕಲ್ಪವಾಗಿ ಆಮ್ ಆದ್ಮಿ ಪಕ್ಷ ಕೂಡ ಕಾಣಿಸಿಕೊಂಡಿದ್ದು ನೇರ ಹಣಾಹಣಿ ಈಗ ತ್ರಿಕೋಣ ಸ್ವರೂಪವನ್ನು ತಾಳುತ್ತಿದೆ .

ಪಂಜಾಬ್ ಚುನಾವಣೆಯಷ್ಟೇ ಕುತೂಹಲ ಹುಟ್ಟಿಸಿದ್ದು ಗೋವಾ ಎಲೆಕ್ಷನ್. ೨೦೧೨ರಲ್ಲಿ ಬಿಜೆಪಿ ಮರಳಿ ಅಧಿಕಾರ

ಹಿಡಿಯಲು ಸಾಧ್ಯವಾಗಿದ್ದು ಮನೋಹರ ಪರಿಕ್ಕರ್ ನಾಯಕತ್ವದಿಂದ. ಕಟ್ಟಾ ಆರ್ ಎಸ್ ಎಸ್ ಹಿನ್ನೆಲೆಯಿಂದ ಬಂದರು ಕೂಡ ಮನೋಹರ ಪರಿಕ್ಕರ್'​ಗೆ ಗೋವಾದ ೪೦ ರಲ್ಲಿ ಬಹುತೇಕ ಸೀಟ್'ಗಳಲ್ಲಿ ನಿರ್ಣಾಯಕ ಎನಿಸಿಕೊಂಡಿದ್ದು ಕ್ರಿಶ್ಚಿಯನ್ ಮತದಾರರು. ಆದರೆ ಮನೋಹರ್ ಪರಿಕ್ಕರ್ ರಕ್ಷಣಾ ಸಚಿವರಾಗಿ ದೆಹಲಿಗೆ ಹೋಗಿದ್ದರಿಂದ ಬಿಜೆಪಿಯನ್ನು ಬ್ಯಾಕ್ ಫುಟ್'ಗೆ ತಳ್ಳಿದೆ. ಇನ್ನೂ ೨೦೧೨ ರ ಸೋಲಿನ ನಂತರವೂ ಕಾಂಗ್ರೆಸ್ ಚೇತರಿಸಿಕೊಂಡಿಲ್ಲ. ಮಾಜಿ ಸಿಎಂ ದಿಗಂಬರ ಕಾಮತ್ ಸೇರಿದಂತೆ ಬಹುತೇಕರ ವಿರುದ್ಧದ ಭ್ರ್ರಷ್ಟಾಚಾರ ಪ್ರಕರಣಗಳು ಕಾಂಗ್ರೆಸ್​'ಗೆ ಸಮಸ್ಯೆಯಾಗಿದೆ. ಇದಕ್ಕಿಂತಲೂ ಹೆಚ್ಚು ಟೆನ್ಷನ್ ಆಮ್ ಆದ್ಮಿ ಪಕ್ಷ ಕೂಡ ಗೋವಾದಲ್ಲಿ  ಬೆಳೆಯುತ್ತಿರುವುದು ಕ್ರಿಶ್ಚಿಯನ್ ಮತದಾರರ ಮೇಲೆ ಕಣ್ಣಿಟ್ಟಿರುವುದು.

ಬಿಜೆಪಿ ಗಿರುವ ದೊಡ್ಡ ಚಿಂತೆ ಆರ್ ಎಸ್ ಎಸ್ ಕೇಡರ್ನಲ್ಲಿರುವ ಅಸಮಾಧಾನ . ಇಂಗ್ಲಿಷ್ ಶಾಲೆಗಳ ಅನುದಾನ ಕಡಿತಗೊಳಿಸಲು ಕ್ರಿಶ್ಚಿಯನ್ ಪ್ರೇಮದ ಕಾರಣದಿಂದ ಹಿಂದೇಟು ಹಾಕಿದರು ಅನ್ನೋ ಕಾರಣಕ್ಕೆ ಆರ್ ಎಸ್ ಎಸ್ ನಾಯಕರಾಗಿದ್ದ ಸುಭಾಷ ವೆಲಿಂಗಿಕರ್ ಹೊಸ ಪ್ರಾದೇಶಿಕ ಪಕ್ಷವನ್ನೇ ಸ್ಥಾಪಿಸಿದ್ದು ಬಿಜೆಪಿ ಯ ಹಳೆಯ ಮಿತ್ರ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷದೊಂದಿಗೆ ಮೈತ್ರಿ ಕೂಡ ಮಾಡಿಕೊಂಡಿದ್ದಾರೆ . ಹೊಸ ಪಕ್ಷ ಹಿಂದೂ ಮತಗಳನ್ನು ಒಡೆದರೆ ಅನ್ನೋ ಭೀತಿ ಕೂಡ ಬಿಜೆಪಿಗಿದೆ.

ಇನ್ನೂ ಎಲೆಕ್ಷನ್ ಕಾರಣದಿಂದಲೇ ಕೇಂದ್ರ ಎಷ್ಟೇ ಒತ್ತಡ ಹೇರಿದರೂ ಮಹದಾಯಿ ಮಾತುಕತೆಗೂ ಗೋವಾ ಸರ್ಕಾರ ಹಿಂದೇಟು ಹಾಕಿದೆ ಅನ್ನೋದು ಗಮನಾರ್ಹ. ಒಟ್ಟಿನಲ್ಲಿ  ಈ ಬಾರಿ ಗೋವಾದಲ್ಲಿ ಕಾಂಗ್ರೆಸ್-ಬಿಜೆಪಿ ಮಧ್ಯೆ ಎಎಪಿ ಎಂಟ್ರಿ ಭಾರೀ ಕುತೂಹಲ ಹುಟ್ಟಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಖ್ಯಮಂತ್ರಿ ಅಧಿಕಾರ ಹಸ್ತಾಂತರದ ಬಗ್ಗೆ ನಮಗೆ ಏನೂ ಗೊತ್ತಿಲ್ಲ: ಸಚಿವ ರಾಮಲಿಂಗಾರೆಡ್ಡಿ
ಡಿಕೆ ಶಿವಕುಮಾರ್‌ಗೆ ಕೇಂದ್ರ ನಾಯಕತ್ವ ಸ್ಥಾನ : ಕಾಂಗ್ರೆಸ್‌ನಲ್ಲಿ ಕೂಗು