
ನವದೆಹಲಿ(ಮಾ. 11): ಪಂಚರಾಜ್ಯ ಚುನಾವಣಾ ಫೈಟ್'ನಲ್ಲಿ ಎರಡು ರಾಜ್ಯಗಳಲ್ಲಿ ಹಣಾಹಣಿ ನಡೆಸಿದ್ದ ಆಮ್ ಆದ್ಮಿ ಪಕ್ಷಕ್ಕೆ ನಿರಾಶೆಯಾಗುತ್ತಿದೆ. ಪಂಜಾಬ್ ಮತ್ತು ಗೋವಾದಲ್ಲಿ ಅಧಿಕಾರ ಗದ್ದುಗೆ ಹಿಡಿದೇ ತೀರುತ್ತೇನೆಂದು ಪಣ ತೊಟ್ಟಿದ್ದ ಕೇಜ್ರಿವಾಲ್ ನೇತೃತ್ವದ ಆಪ್ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿದೆ. ಗೋವಾದಲ್ಲಿ ಬಂದಿರುವ ಮತ ಎಣಿಕೆ ಟ್ರೆಂಡ್ ಪ್ರಕಾರ ಪಕ್ಷವು ಶೂನ್ಯ ಸಂಪಾದನೆ ಮಾಡಿ ಹೀನಾಯ ಸೋಲನುಭವಿಸುವುದು ಖಚಿತವಾಗಿದೆ.
ಪಂಜಾಬ್'ನಲ್ಲಿ ಕೆಲ ಸಮೀಕ್ಷೆಗಳು ಆಮ್ ಆದ್ಮಿಗೆ ಗೆಲುವು ದೊರಕಬಹುದೆಂದು ಅಂದಾಜು ಮಾಡಿದ್ದವು. ಆದರೆ, ಇಲ್ಲಿ ಎರಡೇ ಸ್ಥಾನಕ್ಕಾಗಿ ಶಿರೋಮಣಿ ಅಕಾಲಿ ದಳ-ಬಿಜೆಪಿ ಮೈತ್ರಿಕೂಟದೊಂದಿಗೆ ಎಎಪಿ ಪೈಪೋಟಿ ನಡೆಸುತ್ತಿದೆ.
ದಿಲ್ಲಿಯ ನಂತರ ದೇಶದ ಇತರ ಭಾಗದಲ್ಲಿ ಅಧಿಕಾರ ಹಿಡಿಯುವ ಮಹತ್ವಾಕಾಂಕ್ಷೆಯಲ್ಲಿದ್ದ ಆಮ್ ಆದ್ಮಿ ಪಕ್ಷಕ್ಕೆ ಅತೀವ ನಿರಾಶೆಯಾಗಿರುವುದಂತೂ ಹೌದು. ಪಂಜಾಬ್'ನಲ್ಲಿ ಅಧಿಕಾರ ಸಿಕ್ಕೇಸಿಗುತ್ತದೆ ಎಂದು ಎಣಿಸಿದ್ದ ಆಪ್, ಆ ರಾಜ್ಯದಲ್ಲಿ ಇನ್ನಿಲ್ಲದ ಪ್ರಚಾರ ನಡೆಸಿತ್ತು. ಆದರೆ, ಕಾಂಗ್ರೆಸ್ ಪಕ್ಷ ಭರ್ಜರಿ ಬಹುಮತ ಪಡೆಯುವುದನ್ನು ತಡೆಯಲು ಅದರಿಂದಾಗಲಿಲ್ಲ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.