ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಬಿಡುಗಡೆಯೇ ಡೌಟು!

Published : Jun 25, 2017, 11:24 AM ISTUpdated : Apr 11, 2018, 01:11 PM IST
ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಬಿಡುಗಡೆಯೇ ಡೌಟು!

ಸಾರಾಂಶ

ಮುಂಬರುವ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಕಣಕ್ಕಿಳಿಯಲಿರುವ ಅಭ್ಯರ್ಥಿ ಗಳ ಮೊದಲ ಪಟ್ಟಿಅಧಿಕೃತವಾಗಿ ಬಿಡುಗಡೆ ಆಗುವುದೇ ಅನುಮಾನವಿದೆ. ಕಳೆದ ಫೆಬ್ರವರಿಯಲ್ಲೇ ಪಟ್ಟಿಬಿಡುಗಡೆ ಮಾಡುವುದಾಗಿ ಹೇಳುತ್ತಲೇ ಬಂದಿದ್ದ ಜೆಡಿಎಸ್‌ ನಾಯಕರಿಗೆ ಇದೀಗ ಜೂನ್‌ ಮುಗಿಯುತ್ತ ಬಂದರೂ ಮೊದಲ ಪಟ್ಟಿಬಿಡುಗಡೆಯಾಗುವ ಲಕ್ಷಣವೇ ಕಂಡು ಬರುತ್ತಿಲ್ಲ.

ಬೆಂಗಳೂರು(ಜೂ.25): ಮುಂಬರುವ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಕಣಕ್ಕಿಳಿಯಲಿರುವ ಅಭ್ಯರ್ಥಿ ಗಳ ಮೊದಲ ಪಟ್ಟಿಅಧಿಕೃತವಾಗಿ ಬಿಡುಗಡೆ ಆಗುವುದೇ ಅನುಮಾನವಿದೆ. ಕಳೆದ ಫೆಬ್ರವರಿಯಲ್ಲೇ ಪಟ್ಟಿಬಿಡುಗಡೆ ಮಾಡುವುದಾಗಿ ಹೇಳುತ್ತಲೇ ಬಂದಿದ್ದ ಜೆಡಿಎಸ್‌ ನಾಯಕರಿಗೆ ಇದೀಗ ಜೂನ್‌ ಮುಗಿಯುತ್ತ ಬಂದರೂ ಮೊದಲ ಪಟ್ಟಿಬಿಡುಗಡೆಯಾಗುವ ಲಕ್ಷಣವೇ ಕಂಡು ಬರುತ್ತಿಲ್ಲ.

ಪಕ್ಷದ ವಿಶ್ವಸನೀಯ ಮೂಲಗಳ ಪ್ರಕಾರ ಪಟ್ಟಿಬಿಡುಗಡೆ ಮಾಡುವ ಸಾಧ್ಯತೆ ತೀರಾ ಕಡಮೆ. ಬಹಿರಂಗವಾಗಿ ಪಟ್ಟಿಬಿಡುಗಡೆ ಮಾಡಿದಲ್ಲಿ ಆಯಾ ಕ್ಷೇತ್ರದ ಪಕ್ಷದಲ್ಲಿನ ಇತರ ನಾಯಕರು ಬಂಡೇಳ ಬಹುದು ಅಥವಾ ಬೇರೆ ಪಕ್ಷದ ಸೆಳೆತಕ್ಕೆ ಒಳಗಾಗಬಹುದು ಎಂಬ ಆತಂಕ ಕಾರಣ.

ಹಾಗೆ ನೋಡಿದರೆ ಈ ಅಂಶವನ್ನು ಹಿಂದೆಯೇ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರು ಪ್ರಸ್ತಾಪಿಸಿದ್ದರು. ಅಭ್ಯರ್ಥಿಗಳ ಪಟ್ಟಿಯನ್ನು ಮೊದಲೇ ಬಿಡುಗಡೆ ಮಾಡಬೇಕು ಎಂಬುದು ಪಕ್ಷದ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರ ಆಶಯ. ಒಟ್ಟು 224 ಕ್ಷೇತ್ರಗಳ ಪೈಕಿ ಕನಿಷ್ಠ 100 ಕ್ಷೇತ್ರಗಳ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಇತರ ರಾಷ್ಟ್ರೀಯ ಪಕ್ಷಗಳಿಗಿಂತ ಮೊದಲೇ ಬಿಡುಗಡೆ ಮಾಡಿ ಚುನಾವಣಾ ಅಖಾಡಕ್ಕೆ ಇಳಿಯಬೇಕು ಎಂದು ಬಯಸಿ ದ್ದರು. ಹೀಗಾಗಿಯೇ ಕಳೆದ ಫೆಬ್ರವರಿ ಅಥವಾ ಮಾಚ್‌ರ್‍ನಲ್ಲೇ ಅಂದರೆ, ಚುನಾವಣೆಗೆ ಒಂದು ವರ್ಷ ಮೊದಲೇ ಪಟ್ಟಿಬಿಡುಗಡೆ ಮಾಡಲು ಅಣಿಯಾಗಿದ್ದರು.

ಆದರೆ, ಇದಕ್ಕೆ ದೇವೇಗೌಡರೇ ಬ್ರೇಕ್‌ ಹಾಕಿದರು. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಇಲ್ಲದ ಆತುರ ನಮಗೇಕೆ? ಈ ವಿಷಯದಲ್ಲಿ ಆತುರ ಬೇಡ ಎಂಬ ಸಲಹೆಯನ್ನು ಗೌಡರು ಬಹಿರಂಗವಾಗಿಯೇ ಪಕ್ಷದ ಕಾರ್ಯಕ್ರಮದಲ್ಲಿ ನೀಡಿದ್ದರು. ಗೌಡರ ಇದೇ ಅಭಿಪ್ರಾಯಕ್ಕೆ ಪಕ್ಷದ ಇತರ ಹಲವು ಹಿರಿಯ ನಾಯಕರೂ ಸಹಮತ ವ್ಯಕ್ತಪಡಿಸಿದ್ದರು. ಆದರೂ ಕುಮಾರಸ್ವಾಮಿ ಮಾತ್ರ ತಮ್ಮ ನಿಲವಿನಿಂದ ಹಿಂದೆ ಸರಿದಿರಲಿಲ್ಲ. ಶೀಘ್ರ ಪಟ್ಟಿಬಿಡುಗಡೆ ಮಾಡುವುದಾಗಿ ಹೇಳಿಕೆ ನೀಡುತ್ತಲೇ ಬಂದರು.

ರಾಜ್ಯ ರಾಜಕಾರಣದಲ್ಲಿ ಕಳೆದ ಹಲವು ವರ್ಷಗಳ ಬೆಳವಣಿಗೆಗಳನ್ನು ಗಮನಿಸಿದರೆ ಜೆಡಿಎಸ್‌ ಇತರ ಪಕ್ಷಗಳಿಗಿಂತ ಕೊನೆಯಲ್ಲಿ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸುತ್ತಲೇ ಬಂದಿದೆ. ಅದು ಜೆಡಿಎಸ್‌ನ ರಾಜಕೀಯ ಲೆಕ್ಕಾಚಾರವೂ ಹೌದು.
ಇತರ ಪಕ್ಷಗಳ ಟಿಕೆಟ್‌ ಘೋಷಣೆ ನಂತರ ಆಯಾ ಪಕ್ಷದ ಟಿಕೆಟ್‌ ಆಕಾಂಕ್ಷಿಗಳು ಮುನಿಸಿಕೊಂಡು ಬಂಡಾಯ ಸಾರುವವರನ್ನು ತನ್ನತ್ತ ಸೆಳೆಯುವುದು ಜೆಡಿಎಸ್‌ನ ತಂತ್ರ. ಎಲ್ಲ ಕ್ಷೇತ್ರಗಳಲ್ಲೂ ಬಲವಾದ ಅಭ್ಯರ್ಥಿಗಳು ಇಲ್ಲದೇ ಇರುವುದೂ ಇದಕ್ಕೆ ಮುಖ್ಯ ಕಾರಣ. ಹೀಗಿರುವಾಗ ಪಕ್ಷದ ಭವಿಷ್ಯದ ದೃಷ್ಟಿಯಿಂದ ಮುಖ್ಯವಾಗಿರುವ ಮುಂಬರುವ ವಿಧಾನಸಭಾ ಚುನಾವಣೆಗೆ ಅವಸರದಿಂದ ಅಭ್ಯರ್ಥಿಗಳನ್ನು ಘೋಷಿಸುವುದು ಬೇಡ ಎಂಬ ಅಭಿಪ್ರಾಯವನ್ನು ಗೌಡರು ಸ್ಪಷ್ಟವಾಗಿ ಹೇಳಿದ್ದಾರೆ.

ಹಾಗೊಂದು ವೇಳೆ ಈಗ ಬಿಡುಗಡೆ ಮಾಡಬೇಕು ಎಂದುಕೊಂಡರೂ ಆಷಾಢ ಮಾಸ ಆರಂಭವಾಗಿದೆ. ಇನ್ನೊಂದು ತಿಂಗಳ ಕಾಲ ಪಟ್ಟಿಬಿಡುಗಡೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅದು ಮುಗಿಯುವ ಹೊತ್ತಿಗೆ ರಾಜ್ಯ ರಾಜಕಾರಣದಲ್ಲಿನ ಬೆಳವಣಿಗೆಗಳು ತೀವ್ರಗೊಳ್ಳುವ ಸಾಧ್ಯತೆ ಹೆಚ್ಚಿದೆ. ಅಲ್ಲಿಗೆ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಬಿಡುಗಡೆ ಎನ್ನುವುದು ಕನಸಾಗಿಯೇ ಉಳಿಯಲಿದೆ ಎಂದು ಮೂಲಗಳು ತಿಳಿಸಿವೆ.

ಅದರ ಬದಲು ಯಾವ ಕ್ಷೇತ್ರಗಳಲ್ಲಿ ಪಕ್ಷದಿಂದ ಕಣಕ್ಕಿಳಿಯಬಲ್ಲ ಪ್ರಬಲ ಅಭ್ಯರ್ಥಿ ಗಳಿದ್ದಾರೆ ಅಂಥವರಿಗೆ ಮೌಖಿಕವಾಗಿ ತಯಾರಿ ನಡೆಸುವಂತೆ ಸೂಚನೆ ನೀಡಲಾ ಗುವುದು. ಅವರು ಚುನಾವಣಾ ಕೆಲಸ ಆರಂಭಿಸಲಿ. ಚುನಾವಣೆ ಸಮೀಪಿಸಿದಾಗ ಅವರ ಅಭ್ಯರ್ಥಿತನವನ್ನು ಅಧಿಕೃತವಾಗಿ ಘೋಷಿಸಿದರಾಯಿತು ಎಂಬ ನಿಲವಿಗೆ ಜೆಡಿಎಸ್‌ ನಾಯಕತ್ವ ಬರತೊಡಗಿದೆ ಎಂದು ತಿಳಿದು ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ