ವಿದ್ಯಾರ್ಥಿಗಳ ಅಡ್ಮಿಷನ್ ವೇಳೆ ಆಧಾರ್‌ ಕೇಳುವಂತಿಲ್ಲ

Published : Dec 26, 2018, 08:45 AM IST
ವಿದ್ಯಾರ್ಥಿಗಳ ಅಡ್ಮಿಷನ್ ವೇಳೆ ಆಧಾರ್‌ ಕೇಳುವಂತಿಲ್ಲ

ಸಾರಾಂಶ

 ಶಾಲಾ-ಕಾಲೇಜುಗಳು ವಿದ್ಯಾರ್ಥಿಗಳ ಅಡ್ಮಿಷನ್‌ (ಪ್ರವೇಶ) ವೇಳೆ ಆಧಾರ್‌ ಕೇಳಿದರೆ ಅದು ಸರ್ವೋಚ್ಚ ನ್ಯಾಯಾಲಯದ ಆದೇಶದ ನಿಂದನೆಯಾಗುತ್ತದೆ ಎಂದು ಆಧಾರ್ ಪ್ರಾಧಿಕಾರ ಎಚ್ಚರಿಸಿದೆ.

ನವದೆಹಲಿ :  ಶಾಲೆಯಲ್ಲಿ ಅಡ್ಮಿಷನ್‌ ಪಡೆಯಲು ಆಧಾರ್‌ ಕಡ್ಡಾಯವಲ್ಲ ಎಂದು ಕೆಲವು ತಿಂಗಳ ಹಿಂದೆಯೇ ಆದೇಶ ಹೊರಡಿಸಲಾಗಿದ್ದರೂ, ಕೆಲವು ಶಿಕ್ಷಣ ಸಂಸ್ಥೆಗಳು ಆಧಾರ್‌ ಕಡ್ಡಾಯ ಮಾಡುತ್ತಿರುವುದನ್ನು ‘ಆಧಾರ್‌ ಪ್ರಾಧಿಕಾರ’ ಗಂಭೀರವಾಗಿ ಪರಿಗಣಿಸಿದೆ. ಶಾಲಾ-ಕಾಲೇಜುಗಳು ವಿದ್ಯಾರ್ಥಿಗಳ ಅಡ್ಮಿಷನ್‌ (ಪ್ರವೇಶ) ವೇಳೆ ಆಧಾರ್‌ ಕೇಳಿದರೆ ಅದು ಸರ್ವೋಚ್ಚ ನ್ಯಾಯಾಲಯದ ಆದೇಶದ ನಿಂದನೆಯಾಗುತ್ತದೆ ಎಂದು ಪ್ರಾಧಿಕಾರ ಎಚ್ಚರಿಸಿದೆ.

ನರ್ಸರಿ ಹಾಗೂ ಮೊದಲನೇ ತರಗತಿಯ ಪ್ರವೇಶಗಳು ಈಗ ದೇಶದ ವಿವಿಧ ಕಡೆ ಆರಂಭವಾಗಿದ್ದು, ಅನೇಕ ಕಡೆ ಮಗುವಿನ ಆಧಾರ್‌ ಕಾರ್ಡು ಕೊಡಿ ಎಂದು ಶಾಲೆಗಳು ಕೇಳುತ್ತಿರುವ ದೂರುಗಳು ಬರತೊಡಗಿವೆ. ಈ ಹಿನ್ನೆಲೆಯಲ್ಲಿ ಸುದ್ದಿಸಂಸ್ಥೆ ಜತೆ ಮಾತನಾಡಿದ ಆಧಾರ್‌ ಪ್ರಾಧಿಕಾರದ ಸಿಇಒ ಅಜಯ್‌ಭೂಷಣ್‌ ಪಾಂಡೆ, ‘ಶಾಲೆಗಳು ಆಧಾರ್‌ ಕೇಳುವುದು ಸರಿಯಲ್ಲ. ಕಾನೂನಿನ ಪ್ರಕಾರ ಇದಕ್ಕೆ ಅವಕಾಶವಿಲ್ಲ. ಶಾಲೆಗೆ ಪ್ರವೇಶ ನೀಡುವಾಗ ಆಧಾರ್‌ ತೆಗೆದುಕೊಂಡು ಬನ್ನಿ ಎಂದು ಷರತ್ತು ವಿಧಿಸುವಂತಿಲ್ಲ’ ಎಂದರು. ಒಂದು ವೇಳೆ ಆಧಾರ್‌ ಕೇಳಿದರೆ ಅದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದೂ ಅವರು ಹೇಳಿದರು.

ಶಾಲೆಗಳು ಆಧಾರ್‌ ಕೇಳದೇ ಮಕ್ಕಳಿಗೆ ಪ್ರವೇಶ ಕಲ್ಪಿಸಬೇಕು. ಶಾಲೆಗಳೇ ಶಿಬಿರಗಳನ್ನು ಏರ್ಪಡಿಸಿ ಮಕ್ಕಳಿಗೆ ಆಧಾರ್‌ ಕೊಡಿಸಲು ಅವಕಾಶವಿದೆ ಎಂದು ಪಾಂಡೆ ಸಲಹೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೋದಿಗೆ ಸಮಾಧಿ ತೋಡುತ್ತೇವೆ: ಕಾಂಗ್ರೆಸ್ ವೋಟ್ ಚೋರಿ ಸಮಾವೇಶದಲ್ಲಿ ಕಾರ್ಯಕರ್ತರ ಘೋಷಣೆ
'ಇದಪ್ಪಾ ಕಾನ್ಪಿಡೆನ್ಸ್‌ ಅಂದ್ರೆ..' ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಬರೋ ಮುನ್ನವೇ 12 ಸಾವಿರ ಲಡ್ಡು ಮಾಡಿಸಿಟ್ಟ ಸ್ಪರ್ಧಿ!