
ಲಖನೌ (ಡಿ. 26): ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ನಡೆಯಲಿರುವ ಕುಂಭಮೇಳದಲ್ಲಿ ಸುರಕ್ಷತಾ ದೃಷ್ಟಿಯಿಂದ ಶತಮಾನಗಳ ಹಳೆಯದಾದ ಸಾಂಪ್ರದಾಯಿಕ ಕುದುರೆ ಮತ್ತು ಆನೆ ಮೆರವಣಿಗೆ ಮೇಲೆ ಕುಂಭಮೇಳದ ಆಡಳಿತ ನಿಷೇಧ ಹೇರಿದೆ. ಕುಂಭಮೇಳದ ಆಡಳಿತದ ಈ ಕ್ರಮಕ್ಕೆ ನಾಗಾ ಸೇರಿದಂತೆ ಇತರ ಸಾಧುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಂಗಾ ಮತ್ತು ಯಮುನಾ ನದಿ ಸಂಗಮವಾಗುವ ಪ್ರದೇಶದಲ್ಲಿ ಪವಿತ್ರ ಸ್ನಾನ ಮಾಡುವುದಷ್ಟೇ ಅಲ್ಲದೆ, ನೂರಾರು ನಾಗಾ ಮುನಿಗಳು ಕುದುರೆ ಮತ್ತು ಆನೆ ಮೆರವಣಿಗೆ ಸಾಗುವುದು ಸಹ ಕುಂಭಮೇಳ ಮತ್ತು ಅರ್ಧಕುಂಭಮೇಳದ ವಿಶೇಷವಾಗಿದೆ.
ಆದರೆ, ಜ.14ರಿಂದ ಮಾ.4ರವರೆಗೂ ನಡೆಯಲಿರುವ ಕುಂಭಮೇಳದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಆನೆ ಮತ್ತು ಕುದುರೆ ಮೆರವಣಿಗೆಗೆ ನಿಷೇಧ ಹೇರಲಾಗಿದೆ ಎಂದು ಮೇಳದ ಭದ್ರತಾ ಉತ್ಸುವಾರಿ ವಹಿಸಿಕೊಂಡಿರುವ ಡಿಐಜಿ ಕೆ.ಪಿ.ಸಿಂಗ್ ಘೋಷಣೆ ಮಾಡಿದ್ದಾರೆ. ಆದರೆ, ಇದಕ್ಕೆ ಭಕ್ತಾದಿಗಳು ಮತ್ತು ನಾಗಾ ಸಾಧುಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.