ಹಜ್ ಭವನ, ಠಾಣೆಯಾಯಿತು, ಉತ್ತರ ಪ್ರದೇಶದ ಶೌಚಾಲಯಕ್ಕೂ ಇದೀಗ ಕೇಸರಿ ಬಣ್ಣ

By nirupama sFirst Published Jan 12, 2018, 7:23 PM IST
Highlights

ಬಿಜೆಪಿ ಯೋಗಿ ಆದಿತ್ಯನಾಥ್ ಸರಕಾರ ಇರುವ ಉತ್ತರ ಪ್ರದೇಶದಲ್ಲಿ ಹಜ್ ಭವನ ಹಾಗೂ ಪೊಲೀಸ್ ಠಾಣೆಗಳಿಗೆ ಕೇಸರಿ ಬಣ್ಣ ಬಳಿದು ಸುದ್ದಿಯಾದ ಬೆನ್ನಲ್ಲೇ, ರಾಜ್ಯದ ಎಟವಾ ಗ್ರಾಮದ ಶೌಚಾಲಯಗಳಿಗೂ ಕೇಸರಿ ಬಣ್ಣ ಬಳಿಯಲಾಗಿದೆ.

ಲಖನೌ: ಬಿಜೆಪಿ ಯೋಗಿ ಆದಿತ್ಯನಾಥ್ ಸರಕಾರ ಇರುವ ಉತ್ತರ ಪ್ರದೇಶದಲ್ಲಿ ಹಜ್ ಭವನ ಹಾಗೂ ಪೊಲೀಸ್ ಠಾಣೆಗಳಿಗೆ ಕೇಸರಿ ಬಣ್ಣ ಬಳಿದು ಸುದ್ದಿಯಾದ ಬೆನ್ನಲ್ಲೇ, ರಾಜ್ಯದ ಎಟವಾ ಗ್ರಾಮದ ಶೌಚಾಲಯಗಳಿಗೂ ಕೇಸರಿ ಬಣ್ಣ ಹಚ್ಚಲಾಗಿದೆ.

ಕ್ರಿಪಾಲ್ಪುರ್ ಗ್ರಾಮ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ತವರೂರು. ಈ ಗ್ರಾಮದ ಪ್ರಧಾನರಾಗಿರುವ ವೇದ್ ಪಾಲ್ ಶೌಚಾಲಯಗಳಿಗೂ ಕೇಸರಿ ಬಣ್ಣ ಬಳಿಸಿದ್ದು, ಕೆಲವರ ಉಬ್ಬೇರಿಸಿದೆ. 

'ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರಕಾರವಿದ್ದು, ಸರಕಾರಿ ಕಚೇರಿಗಳಿಗೆ ಕೇಸರಿ ಬಣ್ಣ ಹಚ್ಚಲಾಗುತ್ತಿದೆ. ಅಂಥದ್ರಲ್ಲಿ ಶೌಚಾಲಯಗಳಿಗೆ ಕೇಸರಿ ಬಣ್ಣ ಬಳಿದರೇನು?,' ಎಂದು ವೇದ್ ಪಾಲ್ ಪ್ರಶ್ನಿಸುತ್ತಾರೆಂದು ಎಎನ್‌ಐ ವರದಿ ಮಾಡಿದೆ.

'ಆದರೆ, ಕೇಸರಿ ಬಣ್ಣ ಬಳಿಯುವ ಸಂಬಂಧ ಯಾವುದೇ ಸರಕಾರಿ ಆದೇಶವೂ ಇಲ್ಲ. ಈಗಾಗಲೇ 100 ಶೌಚಾಲಯಗಳಿಗೆ ಕೇಸರಿ ಬಣ್ಣ ಹಚ್ಚಿದ್ದು, ಉಳಿದ 250ಕ್ಕೂ ಇದೇ ಬಣ್ಣ ಬಳಿಯಲಾಗುತ್ತದೆ,'  ಎಂದೂ ಅವರು ಹೇಳಿದ್ದಾರೆ.

ಶೌಚಾಲಯಗಳಿಗೆ ಇಂಥದ್ದೇ ಬಣ್ಣ ಬಳಿಯಬೇಕೆಂಬ ಕಾನೂನು ಎಲ್ಲಿಯೂ ಇಲ್ಲವೆಂದು ಅವರು ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ.
 

click me!