ಇಸ್ರೋ 100 ನೇ ಉಪಗ್ರಹ ಉಡಾವಣೆ: ಪಾಕ್'ಗೆ ಶುರುವಾಗಿದೆ ನಡುಕ

By Suvarna Web DeskFirst Published Jan 12, 2018, 6:08 PM IST
Highlights

ನಮ್ಮ ಹೆಮ್ಮೆಯ ಇಸ್ರೋ ಇಂದು ಆಂಧ್ರ ಪ್ರದೇಶದ ಶ್ರೀಹರಿಕೋಟ ಉಪಗ್ರಹ ಉಡಾವಣಾ ಕೇಂದ್ರದಿಂದ 31 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ.  ಇದೊಂದು ಮೈಲಿಗಲ್ಲಾಗಿದ್ದು, ಬಾಹ್ಯಾಕಾಶದಲ್ಲಿ ಭಾರತ ಸಾಧನೆ ಕಂಡು ಪಾಕಿಸ್ತಾನಕ್ಕೆ ನಡುಕ ಉಂಟಾಗಿದೆ.

ಬೆಂಗಳೂರು (ಜ.12): ನಮ್ಮ ಹೆಮ್ಮೆಯ ಇಸ್ರೋ ಇಂದು ಆಂಧ್ರ ಪ್ರದೇಶದ ಶ್ರೀಹರಿಕೋಟ ಉಪಗ್ರಹ ಉಡಾವಣಾ ಕೇಂದ್ರದಿಂದ 31 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ.  ಇದೊಂದು ಮೈಲಿಗಲ್ಲಾಗಿದ್ದು, ಬಾಹ್ಯಾಕಾಶದಲ್ಲಿ ಭಾರತ ಸಾಧನೆ ಕಂಡು ಪಾಕಿಸ್ತಾನಕ್ಕೆ ನಡುಕ ಉಂಟಾಗಿದೆ.

ಉಪಗ್ರಹ ಉಡಾವಣೆಗೂ ಮುನ್ನ ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಭಾರತಕ್ಕೆ ಎಚ್ಚರಿಕೆ ನೀಡಿದ್ದು ರಕ್ಷಣಾ ದೃಷ್ಟಿಯಿಂದ ಈ ಉಪಗ್ರಹಗಳನ್ನು ಭಾರತ ಪಯೋಗಿಸಬಾರದು. ಇದರಿಂದ ದೂರ ಇರಬೇಕು ಎಂದು ಹೇಳಿದೆ. ಈ ಮೂಲಕ ತನ್ನ ಭಯವನ್ನು ವ್ಯಕ್ತಪಡಿಸಿದೆ.

ಭೂ ವೀಕ್ಷಣಾ ಉಪಗ್ರಹಗಳು ಸೇರಿದಂತೆ ಬಾಹ್ಯಾಕಾಶದ ಎಲ್ಲಾ ತಂತ್ರಜ್ಞಾನಗಳನ್ನು ನಾಗರೀಕ ಮತ್ತು ಸೇನಾ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತದೆ. ಇದು ಪ್ರಾದೇಶಿಕ ಸ್ಥಿರತೆ ಮೇಲೆ ಪರಿಣಾಮ ಬೀರುತ್ತದೆ ಎಂದು ಪಾಕಿಸ್ತಾನ ಹೇಳಿದೆ.

click me!