ಆಸ್ಪತ್ರೆಯಲ್ಲಿ ಜಯಲಲಿತಾರನ್ನು ಯಾರೂ ಭೇಟಿ ಮಾಡಿಯೇ ಇಲ್ಲ!, ಸುಳ್ಳು ಹೇಳಿದ್ದೆವು.. ಕ್ಷಮಿಸಿ: ತಮಿಳ್ನಾಡು ಸಚಿವ!

Published : Sep 24, 2017, 03:13 PM ISTUpdated : Apr 11, 2018, 01:13 PM IST
ಆಸ್ಪತ್ರೆಯಲ್ಲಿ ಜಯಲಲಿತಾರನ್ನು ಯಾರೂ ಭೇಟಿ ಮಾಡಿಯೇ ಇಲ್ಲ!, ಸುಳ್ಳು ಹೇಳಿದ್ದೆವು.. ಕ್ಷಮಿಸಿ: ತಮಿಳ್ನಾಡು ಸಚಿವ!

ಸಾರಾಂಶ

ಅನಾರೋಗ್ಯದಿಂದ ನಿರಂತರ ಎರಡು ತಿಂಗಳ ಕಾಲ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡಿನ ಮಾಜಿ ಸಿಎಂ ದಿವಂಗತ ಜೆ.ಜಯಲಲಿತಾ ಅವರ ಸಾವು ಸಹಜವಲ್ಲ ಎಂಬ ಆರೋಪಗಳಿಗೆ ಇದೀಗ ಮತ್ತಷ್ಟು ರೆಕ್ಕೆ ಪುಕ್ಕಗಳು ಸಿಕ್ಕಿವೆ.

ಚೆನ್ನೈ(ಸೆ.24): ಅನಾರೋಗ್ಯದಿಂದ ನಿರಂತರ ಎರಡು ತಿಂಗಳ ಕಾಲ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡಿನ ಮಾಜಿ ಸಿಎಂ ದಿವಂಗತ ಜೆ.ಜಯಲಲಿತಾ ಅವರ ಸಾವು ಸಹಜವಲ್ಲ ಎಂಬ ಆರೋಪಗಳಿಗೆ ಇದೀಗ ಮತ್ತಷ್ಟು ರೆಕ್ಕೆ ಪುಕ್ಕಗಳು ಸಿಕ್ಕಿವೆ.

ಜಯಾ ಅವರು ಚಿಕಿತ್ಸೆಗಾಗಿ ಅಪೋಲೊ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವೇಳೆ ಪಕ್ಷದ ಅಥವಾ ಸರ್ಕಾರದ ಯಾವೊಬ್ಬ ವ್ಯಕ್ತಿ ಸಹ ಜಯಾರನ್ನು ಭೇಟಿಯೇ ಮಾಡಿಲ್ಲ ಎಂದು ಖುದ್ದು ಅಣ್ಣಾ ಡಿಎಂಕೆಯ ಸಚಿವರೊಬ್ಬರು ಹೇಳಿದ್ದಾರೆ. ‘ಜಯಾರನ್ನು ನಾವ್ಯಾರೂ ಭೇಟಿ ಮಾಡಿರಲಿಲ್ಲ. ಆದರೆ ಶಶಿಕಲಾ ಅವರ ಹೆದರಿಕೆಯಿಂದಾಗಿ, ಜಯಾರನ್ನು ಭೇಟಿ ಮಾಡಿದ್ದೇವೆ. ಅವರು ಇಡ್ಲಿ ಸೇವಿಸಿದ್ದಾರೆ ಎಂದು ಅವರ ಆರೋಗ್ಯ ಸ್ಥಿತಿ ಕುರಿ ತು ನಾವು ಅಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದೆವು. ಆದರೆ, ಅವುಗಳೆಲ್ಲವೂ ಶುದ್ಧ ಸುಳ್ಳು. ನಮ್ಮ ಸುಳ್ಳುಗಳನ್ನು ಜನರು ಮನ್ನಿಸಬೇಕು’ ಎಂಬ ಸ್ಫೋಟಕ ಸತ್ಯವನ್ನು ಅರಣ್ಯ ಸಚಿವ ಸಿ.ಶ್ರೀನಿವಾಸನ್ ಬಾಯ್ಬಿಟ್ಟಿದ್ದಾರೆ.

ಮದುರೈನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವ ಶ್ರೀನಿವಾಸನ್, ಜಯಾ ಅವರ ಭೇಟಿಗೆ ಬಂದಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೇರಿ ಇತರ ರಾಷ್ಟ್ರೀಯ ನಾಯಕರು ಸಹ ಅಪೋಲೊ ಆಸ್ಪತ್ರೆಗಳ ಮುಖ್ಯಸ್ಥ ಪ್ರತಾಪ್ ರೆಡ್ಡಿ ಅವರ ಕೋಣೆಯಲ್ಲೇ ಕೂತು ಎದ್ದು ಬಂದಿದ್ದರು. ಪಕ್ಷದ ರಹಸ್ಯ ಮಾಹಿತಿಗಳು ಹೊರ ಬೀಳಬಾರದು ಎಂಬ ಕಾರಣಕ್ಕಾಗಿ ನಾವೆಲ್ಲರೂ ಸುಳ್ಳು ಹೇಳಬೇಕಾಯಿತು.

ಆದರೆ, ವಿ.ಕೆ.ಶಶಿಕಲಾ ಅವರು ಮಾತ್ರವೇ ವೈದ್ಯರ ಸಲಹೆ ಮೇರೆಗೆ ಎರಡು ನಿಮಿಷಗಳ ಕಾಲ ಜಯಾ ಅವರ ಕೋಣೆಗೆ ಪ್ರವೇಶಿಸುತ್ತಿದ್ದರು ಎಂದು ಹೇಳಿದರು.

ಟಿಟಿವಿ ನಕಾರ: ಆದರೆ, ಈ ಆರೋಪ ತಳ್ಳಿಹಾಕಿರುವ ಅಣ್ಣಾ ಡಿಎಂಕೆ ಪದಚ್ಯುತ ನಾಯಕ, ಶಶಿಕಲಾರ ಬಂದು ಟಿಟಿವಿ ದಿನಕರನ್, ‘ಜಯಾ ಚಿಕಿತ್ಸೆಯ ವಿಡಿಯೋ ನನ್ನ ಬಳಿ ಇದೆ. ಸೂಕ್ತ ಸಂದ‘ರ್ದಲ್ಲಿ ತನಿಖಾ ಆಯೋಗಕ್ಕೆ ನೀಡುವೆ’ ಎಂದು ಕೊಡಗಿನಲ್ಲಿ ಹೇಳಿದ್ದಾರೆ.     

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ಉಪಲೋಕಾಯುಕ್ತರಿಗೆ ಒಂದ್ ನಮಸ್ಕಾರ': ಭ್ರಷ್ಟಾಚಾರದ ಬಗ್ಗೆ ಹೇಳಿಕೆ ನೀಡಲು ಮಾತ್ರ ಅಧಿಕಾರವಿದೆಯೇ? – ಹೆಚ್‌ಡಿಕೆ ವ್ಯಂಗ್ಯ
ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು