
ಹಾಸನ(ಫೆ.23): ಮನೋಜ್ ಮತ್ತು ಸಂಧ್ಯಾಳದ್ದು ಫೇಸ್ ನೋಡದೇ ಫೇಸ್ ಬುಕ್ ನಲ್ಲಾದ ಪರಿಚಯ.! ಈ ಫೇಸ್ಬುಕ್ ಪರಿಚಯ ದಿನಕಳೆದಂತೆ ಆ ಯುವಕ-ಯುವತಿಯನ್ನು ತುಂಬಾ ಆತ್ಮೀಯರನ್ನಾಗಿ ಮಾಡಿತ್ತು. ಹೀಗೆ ಆತ್ಮೀಯರಾದ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಹಸೆಮಣೆ ಏರಿದ ಜೋಡಿ ಹೊಸಬದುಕು ಅಲ್ಲಾಗಲಿಲ್ಲ, ಜೋಡಿಯ ವೈವಾಹಿಕ ಬದುಕಿನ ಕ್ಲೈಮ್ಯಾಕ್ಸ್ ತಿಳಿದರೆ ಅಚ್ಚರಿಯಾಗ್ತಿರಾ. ಆ ಪ್ರೇಮಾಯಣ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಮನೋಜ್ ಮಂಗಳೂರಿನ ಫರಂಗಿಪೇಟೆಯ ಮೂಲದವನಾದರೆ, ಸಂಧ್ಯಾ, ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆಗ್ಗೋವೆ ಗ್ರಾಮದವಳು .ಕೇವಲ ಒಂದೂವರೆ ತಿಂಗಳ ಹಿಂದೆ ಫೇಸ್ಬುಕ್'ನಲ್ಲಿ ಇಬ್ಬರ ಪರಿಚಯವಾಯಿತು. ಇಬ್ಬರು ಹದಿಹರೆಯದ ಹುಡುಗ-ಹುಡುಗಿ ಆಗಿರುವುದರಿಂದ ಈ ಪರಿಚಯ ಪ್ರೇಮವಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಒಂದು ತಿಂಗಳೊಳಗೆ ಶುರುವಾದ ಇವರಿಬ್ಬರ ಚಿತ್ರ-ವಿಚಿತ್ರ ಪ್ರೀತಿ ಕೊನೆಗೆ ಬಂದು ನಿಂತಿದ್ದು ಮದುವೆ ಹಂತಕ್ಕೆ. ಪ್ರೀತಿಯಲ್ಲಿ ಬಿದ್ದ ಮೇಲೆ ಕೆಲ ದಿನಗಳ ಹಿಂದೆಯಷ್ಟೇ ಸಂಧ್ಯಾಳನ್ನು ಮದುವೆ ಮಾಡಿಕೊಂಡ ಮನೋಜ್ ಕೇವಲ ಆರೇ ದಿನದಲ್ಲಿ ಪತ್ನಿಯನ್ನ ಬಿಟ್ಟು ಪರಾರಿಯಾಗಿದ್ದಾನೆ.
ಗುರುತು, ಪರಿಚಯ ಹಿನ್ನೆಲೆ ಗೊತ್ತಿಲ್ಲದಿದ್ದರೂ, ಫೇಸ್ಬುಕ್ ಮೂಲಕ ಪ್ರೇಮಾಂಕುರವಾಗಿ ಇಬ್ಬರು ಆತುರಾತುರವಾಗಿ ಮದ್ವೆಯಾಗಿ, ಮನೋಜನನ್ನೇ ಸರ್ವಸ್ವ ಅಂತಾ ನಂಬಿದ್ದ ಸಂಧ್ಯಾ, ಆತ ಮಧ್ಯೆ ದಾರಿಯಲ್ಲಿ ಬಿಟ್ಟು ಹೋಗುತ್ತಾನೆ ಎಂದು ಕನಸು ಮನಸ್ಸಿನಲ್ಲೂ ನೆನೆಸಿರಲಿಲ್ಲ. ಬಿಟ್ಟುಹೋದ ನೋವಲ್ಲಿ, ಮನನೊಂದ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಯತ್ನ ಮಾಡಿದ್ದಳು. ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಸಂಧ್ಯಾ ಚೇತರಿಸಿಕೊಂಡಿದ್ದಾಳೆ. ಇದೀಗ, ಪರಾರಿಯಾಗಿರೋ ಮನೋಜ್ ವಿರುದ್ದ ಬಂಟ್ವಾಳ ಠಾಣೆಗೆ ದೂರು ನೀಡಿದ್ದಾಳೆ.
ಅದೇನೆ ಇರಲಿ, ಫೇಸ್ಬುಕ್ ನ ಈ ಫಾಸ್ಟ್ ಲವ್,ಮ್ಯಾರೇಜ್ ಸಂಧ್ಯಾ ಹಾಗೂ ಮನೋಜ್ ಮನೆಯವರಿಗೆ ಫಜೀತಿ ಸೃಷ್ಠಿ ಮಾಡಿದೆ. ತಾಳಿ ಕಟ್ಟಿರೋ ಮನೋಜ್ ಜೊತೆ ಬಾಳು ನಡೆಸಲು ಸಂಧ್ಯಾ ಹಾತೊರೆಯುತ್ತಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.