
ನವದೆಹಲಿ (ಡಿ.03): 500 ಹಾಗೂ 1000 ರೂ ನೋಟುಗಳ ಅಮಾನ್ಯ ಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಮೊರಾದಾಬಾದ್ ರ್ಯಾಲಿಯಲ್ಲಿ ಸಮರ್ಥಿಸಿಕೊಂಡಿದ್ದಾರೆ.
ತಾವು ತೆಗೆದುಕೊಂಡ ಈ ಕ್ರಮದಿಂದಾಗಿ ಕಾಳಧನಿಕರಿಗೆ ಬಿಸಿ ಮುಟ್ಟಿಸಿದಂತಾಗಿದೆ ಎಂದಿದ್ದಾರೆ.
ನಾವು ಸಕ್ಕರೆ, ಸೀಮೆಎಣ್ಣೆ, ಹಾಗೂ ಗೋಧಿ ಪಡೆಯಲು ಕ್ಯೂ ನಿಂತಿದ್ದೇವೆ. 60 ವರ್ಷ ನಮ್ಮನ್ನಾಳಿದವರಿಗೆ ಧನ್ಯವಾದಗಳು. ಈ ದೇಶ ಕ್ಯೂಗಳಲ್ಲಿ ಸಾಕಷ್ಟು ಸಮಯ ವ್ಯರ್ಥ ಮಾಡಿದೆ. ನಾನು ಮಾಡಿರುವ ಕೆಲಸದಿಂದ ಪ್ರಾರಂಭವಾಗಿರುವ ನೋಟು ನಿಷೇಧ ಕ್ಯೂ ಈ ಎಲ್ಲಾ ಕ್ಯೂಗಳಿಗೆ ಅಂತ್ಯ ಹಾಡಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಈ ದೇಶ ಭ್ರಷ್ಟಾಚಾರದಿಂದ ಹೈರಾಣಾಗಿಲ್ಲವೇ? ಭ್ರಷ್ಟಾಚಾರ ತನ್ನಿಂದ ತಾನೇ ನಿರ್ಮೂಲನೆ ಆಗುವುದೇ? ಇದನ್ನು ಹೋಗಲಾಡಿಸುವ ಅಗತ್ಯವಿಲ್ಲವೇ?ಎಂದು ಜನರನ್ನುದ್ದೇಶಿಸಿ ಮೋದಿ ಕೇಳಿದ ಪ್ರಶ್ನೆಗೆ ಜನರು ಹೌದು ಹೌದು ಎಂದು ಪ್ರತಿಕ್ರಿಯೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.