ಮೊದಲ ರಾತ್ರಿ ತನಗಾಗಿ ಕಾಯುತ್ತಿದ್ದ ನವ ವಧುವಿಗೆ ಬೆಲ್ಟ್'ನಿಂದ ಥಳಿಸಿದ ವರ!

Published : Dec 03, 2016, 10:19 AM ISTUpdated : Apr 11, 2018, 12:48 PM IST
ಮೊದಲ ರಾತ್ರಿ ತನಗಾಗಿ ಕಾಯುತ್ತಿದ್ದ ನವ ವಧುವಿಗೆ ಬೆಲ್ಟ್'ನಿಂದ ಥಳಿಸಿದ ವರ!

ಸಾರಾಂಶ

ಈ ಮಹಿಳೆ ಮೂಲತಃ ಉತ್ತರಾಖಂಡ್'ನವರಾಗಿದ್ದು, ಇತ್ತೀಚೆಗಷ್ಟೇ ಯುಎಸ್'ನಿಂದ ಬಂದಿದ್ದರು. ಮ್ಯಾಟ್ರಿಮೋನಿಯಲ್ ವೆಬ್'ಸೈಟ್'ನಲ್ಲಿ ವಿಜಯ್'ನನ್ನು ಕಂಡ ಮಹಿಳೆ ಆತನನ್ನು ಇಷ್ಟಪಟ್ಟು ಮದುವೆಯಾಗಿದ್ದಳು ಆದರೆ ಮದುವೆಯಾದ ಮೊದಲ ರಾತ್ರಿಯೇ ಹಣಕ್ಕಾಗಿ ಪೀಡಿಸಿದ ಈತನಿಗೆ ಈ ಯುವತಿ ನಿರಾಕರಿಸಿದ್ದಳು ಇದರಿಂದ ಸಿಟ್ಟಿಗೆದ್ದ ವಿಜಯ್ ಮುಖ ಮೂತಿ ನೋಡದೆ ಬೆಲ್ಟ್'ನಿಂದ ಆಕೆಗೆ ಥಳಿಸಿದ್ದ. ಈ ವಿಚಾರವಾಗಿ ದೂರು ನೀಡಿದ್ದರೂ ಪೊಲೀಸರು ಮಾತ್ರ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಹೀಗಾಗಿ ಮಹಿಳೆ ನೇರವಾಗಿ ಡೆಪ್ಯುಟಿ ಸಿಎಂ ಸಹಾಯವಾಣಿಗೆ ಕರೆ ಮಾಡಿ ವಿಷಯವನ್ನು ತಿಳಿಸಿದ್ದಾಳೆ.

ಮೊಹಾಲಿ(ಡಿ.03): ಮೊಹಾಲಿಯಲ್ಲೊಬ್ಬ ವರ ಮದುವೆಯ ಮೊದಲ ರಾತ್ರಿ ನವ ವಧುವಿನ ಕೋಣೆಯೊಳಗೆ ತೆರಳಿ ಬೆಲ್ಟ್'ನಿಂದ ಆಕೆಯ ಮುಖ ಮೂತಿ ನೋಡದೆ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ. ವಾಸ್ತವದಲ್ಲಿ ಇವರಿಬ್ಬರ ಮದುವೆ ಕಳೆದ ಒಂದು ತಿಂಗಳ ಹಿಂದೆಯೇ ಮ್ಯಾಟ್ರಿಮೋನಿಯಲ್ ವೆಬದ'ಸೈಟ್ ಮೂಲಕ ನಡೆದಿತ್ತು.

ಈ ಮಹಿಳೆ ಮೂಲತಃ ಉತ್ತರಾಖಂಡ್'ನವರಾಗಿದ್ದು, ಇತ್ತೀಚೆಗಷ್ಟೇ ಯುಎಸ್'ನಿಂದ ಬಂದಿದ್ದರು. ಮ್ಯಾಟ್ರಿಮೋನಿಯಲ್ ವೆಬ್'ಸೈಟ್'ನಲ್ಲಿ ವಿಜಯ್'ನನ್ನು ಕಂಡ ಮಹಿಳೆ ಆತನನ್ನು ಇಷ್ಟಪಟ್ಟು ಮದುವೆಯಾಗಿದ್ದಳು ಆದರೆ ಮದುವೆಯಾದ ಮೊದಲ ರಾತ್ರಿಯೇ ಹಣಕ್ಕಾಗಿ ಪೀಡಿಸಿದ ಈತನಿಗೆ ಈ ಯುವತಿ ನಿರಾಕರಿಸಿದ್ದಳು ಇದರಿಂದ ಸಿಟ್ಟಿಗೆದ್ದ ವಿಜಯ್ ಮುಖ ಮೂತಿ ನೋಡದೆ ಬೆಲ್ಟ್'ನಿಂದ ಆಕೆಗೆ ಥಳಿಸಿದ್ದ. ಈ ವಿಚಾರವಾಗಿ ದೂರು ನೀಡಿದ್ದರೂ ಪೊಲೀಸರು ಮಾತ್ರ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಹೀಗಾಗಿ ಮಹಿಳೆ ನೇರವಾಗಿ ಡೆಪ್ಯುಟಿ ಸಿಎಂ ಸಹಾಯವಾಣಿಗೆ ಕರೆ ಮಾಡಿ ವಿಷಯವನ್ನು ತಿಳಿಸಿದ್ದಾಳೆ.

ಮಹಿಳೆಯ ಬೆನ್ನು, ಸೊಂಟ ಹಾಗೂ ಕಾಲಿನ ಮೇಲೆ ಬೆಲ್ಟ್'ನಿಂದ ಹೊಡೆದಿರುವ ಗುರುತುಗಳು ಕಂಡು ಬಂದಿವೆ. ಇಷ್ಟಾದರೂ ಪೊಲೀಸರು ಮಾತ್ರ ಈ ವಿಚಾರ ತಮಗೆ ಸಂಬಂಧಪಟ್ಟದಲ್ಲ ಎಂಬಂತಿದ್ದಾರೆ.

ಮಾಧ್ಯಮಗಳಲ್ಲಿ ಪ್ರಸಾರವಾದ ಸುದ್ದಿಯನ್ವಯ ಹಿಂಸೆಗೊಳಗಾದ ಮಹಿಳೆ 'ನನ್ನ ಪತಿ ವಿಜಯ್ ನನ್ನನ್ನು ಅದೆಷ್ಟು ಹಿಂಸಿಸುತ್ತಾನೆಂದರೆ ಆತನ ಹೊಡೆತಗಳ ಗುರುತು ನನ್ನ ಮೈ ಮೇಲೆ ಅಚ್ಚೊತ್ತಿದಂತಿವೆ. ಆದರೂ ಪೊಲೀಸರು ಮಾತ್ರ ಕಣ್ಮುಚ್ಚಿಕೊಂಡಿದ್ದಾರೆ. ನನ್ನ ಪತಿಗೆ ಬಿಜೆಪಿ ನೇತಾರರೊಂದಿಗೆ ಉತ್ತಮ ಸಂಬಂಧವಿದೆ. ಪೊಲೀಸರು ಮೇಲೆ ಕ್ರಮ ಕೈಗೊಳ್ಳದಂತೆ ಚೊತ್ತಡ ಹೇರಿದ್ದಾನೆ' ಎಂದಿದ್ದಾಳೆ.

ಇನ್ನು ಡೆಪ್ಯುಟಿ ಸಿಎಂ ಸಹಾಯವಾಣಿಗೆ ಕರೆ ಮಾಡಿದ ಮಹಿಳೆ 'ಸಾಹೇಬರೆ ನಿಮ್ಮ ಎಸ್'ಎಚ್'ಒ ಮಹಿಳೆಯರ ಸಹಾಯ ಮಾಡಲು ವಿಫಲವಾಗಿದೆ. ಈಗ ಕೇವಲ ಆತ್ಮಹತ್ಯೆಯೊಂದೇ ನನೆದುರಿಗಿರುವ ಆಯ್ಕೆ. ಸಾಯುವ ಮೊದಲು ನನಗಿರುವ ನಿಮ್ಮ ಬಳಿ ನನ್ನದೊಂದು ವಿನಂತಿ, ಮಹಿಳೆಯರ ಸಹಾಯ ಮಾಡದೇ, ಅವರನ್ನು ನೋಡಿ ನಗುವ ಇಂತಹ ಹೇಡಿ ಅಧಿಕಾರಿಗಳನ್ನು ಅಮಾನತ್ತುಗೊಳಿಸಿ. ಇಷ್ಟೇ ನಿಮ್ಮಲ್ಲಿ ಕೇಳಿಕೊಳ್ಳುತ್ತಿರುವುದು' ಎಂದಿದ್ದರು.

ಇಷ್ಟೆಲ್ಲಾ ನಡೆದ ಬಳಿಕವೂ ಪೊಲೀಸರು ಆಕೆಯ ಪತಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ರಾಜಿ ಒಪ್ಪಂದ ಮಾಡಲು ಕರೆಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ ಹೊಸ 600 ಪಿಎಸ್‌ಐ ನೇಮಕಾತಿ ಪ್ರಕ್ರಿಯೆ ಶೀಘ್ರವೇ ಆರಂಭ: ಗೃಹ ಸಚಿವ ಪರಮೇಶ್ವರ್‌
ಕನ್ನಡ ಭಾಷೆ ಕಲಿಸದ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ: ಸಚಿವ ಮಧು ಬಂಗಾರಪ್ಪ