
ನವದೆಹಲಿ(ನ.18): 500, 1000 ರೂ ನೋಟು ಬ್ಯಾನ್ ಬಳಿಕ ಜಾರಿಗೆ ಬಂದ 2000 ರೂ ನೋಟು ಈಗಾಗಲೇ ಸಾಕಷ್ಟು ವಿವಾದಗಳಿಗೆ ಎಡೆ ಮಾಡಿಕೊಟ್ಟಿದೆ. ಕೆಲವರು ಈ ನೋಟಿನ ಗುಣಮಟ್ಟ ಸರಿ ಇಲ್ಲ ಎಂದು ಆರೋಪಿಸಿದರೆ ಇನ್ನು ಕೆಲವರು ನೋಡಿನ ಬಣ್ಣ ಹೋಗುತ್ತದೆ ಎಂದು ಪ್ರಯೋಗಗಳ ಮೂಲಕ ಮನದಟ್ಟು ಮಾಡಿದ್ದರು.
ಇದೇ ವಿಚಾರವಾಗಿ 2000 ರೂ ನೋಟನ್ನು ನೀರಿಗೆ ಹಾಕಿದರೆ ಬಣ್ಣ ಹೋಗುತ್ತದೆ ಎಂಬ ದೂರಿನೊಂದಿಗೆ ತನ್ನ ವಕೀಲೆ ML ಶರ್ಮಾ ಮೂಲಕ ಮಹಿಳೆಯೊಬ್ಬಳು ಕೋರ್ಟ್ ಮೆಟ್ಟಿಲೇರಿದ್ದಳು. ಈ ಕುರಿತಾಗಿ ಟಿಪ್ಪಣಿ ನೀಡಿದ್ದ ಮಹಿಳೆ 'ಮಾರುಕಟ್ಟೆಯಲ್ಲಿ ಚಲಾವಣೆಗೆ ಬಂದಿರುವ 2000 ರೂ. ನೋಟುಗಳಲ್ಲಿ ಶೇ. 50ರಷ್ಟು ನಕಲಿಯಾಗಿವೆ. ಇವುಗಳನ್ನು ನೀರಿಗೆ ಹಾಕಿದರೆ ಬಣ್ಣ ಹೋಗುತ್ತದೆ. ಹೀಗಾಗಿ 500 ಹಾಗೂ 1000 ರೂಪಾಯಿ ನೋಟು ಬ್ಯಾನ್ ಮಾಡಿರುವ ಆದೇಶವನ್ನು ಹಿಂಪಡೆಯಬೇಕು' ಎಂದಿದ್ದರು.
ಈ ಕುರಿತಾಗಿ ವಿಚಾರಣೆ ಆರಂಭಿಸಿದ್ದ ಸುಪ್ರೀಂ ಕೋರ್ಟ್'ನ ಚೀಫ್ ಜಸ್ಟೀಸ್ ಟಿ. ಎಸ್ ಠಾಕೂರ್, ಮಹಿಳೆಯ ಈ ಮನವಿ ಆಲಿಸಿ 'ನೀವು ಕರೆನ್ಸಿ ನೋಟನ್ನೇಕೆ ನೀರಿಗೆ ಹಾಕುತ್ತೀರಿ? ಅದರ ಅಗತ್ಯವಾದರೂ ಏನು? 2000 ರೂಪಾಯಿ ನೋಟನ್ನು ನೀರಿಗೆ ಹಾಕುವುದರ ಅರ್ಥವೇನು?' ಎಂದು ಖಡಕ್ಕಾಗಿ ಪ್ರಶ್ನಿಸಿದ್ದಾರೆ.
ಇನ್ನು ಈ ಕುರಿತಾಗಿ ತೀರ್ಪನ್ನು ಕಾಯ್ದಿರಿಸಿರುವ ಸುಪ್ರೀಂ ವಿಚಾರಣೆಯನ್ನು ನವೆಂಬರ್ 25ಕ್ಕೆ ಮುಂದೂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.