
ಬೆಂಗಳೂರು (ನ.17): ರೇಪಿಸ್ಟ್ ಸ್ನೇಹಿತನನ್ನು ಉಳಿಸಲು ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ರಿಪೋರ್ಟ್ ಬುಕ್ ಕಳ್ಳತನ ಮಾಡಲು ಹೋಗಿ ಪುಲಕೇಶಿನಗರದ ನಿವಾಸಿ ಜುಬೇರ್ ಅಕ್ಬರ್ ಎನ್ನುವವರು ಔಟ್ ಪೋಸ್ಟ್ ಪೊಲಿಸರ ಬಳಿ ಸಿಕ್ಕಿ ಬಿದ್ದಿದ್ದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಅಕ್ಟೋಬರ್ 8 ರಂದು ಅಪ್ರಾಪ್ತ ಬಾಲಕಿ ಮೇಲೆ ಆತ್ಯಾಚಾರವಾಗಿತ್ತು. ಸ್ವತಃ ತಂದೆಯೇ ಈ ಕೃತ್ಯವನ್ನು ಎಸೆಗಿದ್ದ. ಈ ಬಗ್ಗೆ ಪ್ರೇಜರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಂದೆಯ ಮೇಲೆ ಪೋಕ್ಸೋ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಲಾಗಿತ್ತು.
ನೊಂದ ಬಾಲಕಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಈ ಬಗ್ಗೆ ಮೆಡಿಕೋ ಲೀಗಲ್ ಕೇಸ್ ಬುಕ್ ನಲ್ಲಿ ಎಂಟ್ರಿ ಮಾಡಲಾಗಿತ್ತು. ಇದನ್ನು ಪ್ರತಿದಿನ ಕ್ಯಾಸುವಲ್ಟಿ ರೂಂನಲ್ಲಿ ವೈದ್ಯರು ಇಡುತ್ತಿದ್ದರು. ಇದನ್ನು ತಿಳಿದಿದ್ದ ಜುಬೇರ್ ಅಕ್ಟೋಬರ್ 14 ರಂದು ಕಳ್ಳತನ ಮಾಡಿದ್ದರು. ಬುಕ್ ನಾಪತ್ತೆ ವಿಚಾರವು ಮಾರನೇ ದಿನ ಬೆಳಿಗ್ಗೆ ಬೆಳಕಿಗೆ ಬಂದಿತ್ತು. ಈ ಬಗ್ಗೆ ಕ್ಯಾಸುವಲ್ಟಿ ಅಧಿಕಾರಿ ಡಾ ಶಂಕರ್ ರಿಂದ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಆರೋಪಿ ಜುಬೇರ್ ಅಕ್ಬರ್ ಕೃತ್ಯ ಬೆಳಕಿಗೆ ಬಂದಿದೆ. ತಕ್ಷಣ ಡಾ. ಶಂಕರ್ ರಿಂದ ಬೌರಿಂಗ್ ಔಟ್ ಪೊಸ್ಟ್ ಪೊಲಿಸರಿಗೆ ದೂರು ನೀಡಿದ್ದಾರೆ.
ಸದ್ಯ ಜುಬೇರ್ ಅಕ್ಬರ್ ನನ್ನು ಬಂಧಿಸಿರುವ ಬೌರಿಂಗ್ ಠಾಣೆ ಪೊಲೀಸರು ಆರೋಪಿ ಜುಬೇರ್ ನಿಂದ ಕೃತ್ಯದ ಬಗ್ಗೆ ತಪ್ಪೊಪ್ಪಿಗೆ ಬರೆಸಿಕೊಂಡಿದ್ದಾರೆ.
ಕೋರ್ಟಿಗೆ ಮೆಡಿಕಲ್ ರಿಪೋರ್ಟ್ ಸಲ್ಲಿಸಿದ್ರೆ ಸ್ನೇಹಿತ ಜೈಲಿಗೆ ಹೋಗ್ತಾನೆ. ಆತನನ್ನು ಬಚಾವ್ ಮಾಡಲು ಈ ರೀತಿ ಪ್ಲಾನ್ ಮಾಡಿರುವುದಾಗಿ ಜುಬೇರ್ ಹೇಳಿದ್ದಾನೆ.
ಬೌರಿಂಗ್ ಆಸ್ಪತ್ರೆಯ ಭಧ್ರತೆಯ ಬಗ್ಗೆ ಅನುಮಾನ ಹೆಚ್ಚಾಗಿದ್ದು ಪೋಲಿಸರು ಬೌರಿಂಗ್ ಅಧಿಕಾರಿಗಳಿಂದ ಭಧ್ರತೆಯ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.