8ನೇ ತರಗತಿ ಫೇಲಾದವನೀಗ ಸೈಬರ್ ತಜ್ಞ..!

Published : Nov 24, 2017, 05:31 PM ISTUpdated : Apr 11, 2018, 01:05 PM IST
8ನೇ ತರಗತಿ ಫೇಲಾದವನೀಗ  ಸೈಬರ್ ತಜ್ಞ..!

ಸಾರಾಂಶ

ಟಿಎಸಿ ಸೆಕ್ಯುರಿಟಿ ಸಲ್ಯೂಷನ್ಸ್ ಎಂಬ ಕಂಪನಿ ಸ್ಥಾಪಿಸಿರುವ ತೃಷ್ಣೀತ್, ಪಂಜಾಬ್ ಸರ್ಕಾರ ಹಾಗೂ ಕ್ರೈಮ್ ಬ್ರಾಂಚ್ ಪೊಲೀಸರ ಮಾಹಿತಿ ತಂತ್ರಜ್ಞಾನ ಸಲಹೆಗಾರನಾಗಿದ್ದಾನೆ. ಪ್ರತಿಷ್ಠಿತ ರಿಲಯನ್ಸ್ ನಂತಹ ಕಂಪನಿಗಳೂ ಈತನಿಗೆ ಗ್ರಾಹಕನಾಗಿವೆ.

ಮುಂಬೈ(ನ.24): 10ನೇ ತರಗತಿ ಅಥವಾ ಪಿಯುಸಿಯಲ್ಲಿ ಕಡಿಮೆ ಅಂಕ ಬಂದರೇ ಪೋಷಕರು ರೇಗಾಡುತ್ತಾರೆ. ಇನ್ನು ಅನುತ್ತೀರ್ಣರಾದರಂತೂ ಕೇಳುವುದೇ ಬೇಡ. ಕೆಲಸಕ್ಕೆ ಬಾರದವನು ಎಂದು ನಿಂದಿಸುವುದುಂಟು. ಆದರೆ 8ನೇ ತರಗತಿಯಲ್ಲೇ ಫೇಲಾದ ಯುವಕನೊಬ್ಬ ಈಗ ಕೋಟ್ಯಧೀಶನಾಗಿ ಮಿಂಚುತ್ತಿದ್ದಾನೆ. ಆತನ ಹೆಸರು ತೃಷ್ಣೀತ್ ಅರೋರಾ. ಇನ್ನೂ 23 ವರ್ಷ. ದೇಶದ ಪ್ರಮುಖ ಸೈಬರ್ ಭದ್ರತಾ ಪರಿಣತನಾಗಿರುವ ಈತ, ತಾನೊಬ್ಬ ನೈತಿಕ ಹ್ಯಾಕರ್ ಎಂದು ಕರೆದುಕೊಳ್ಳುತ್ತಾನೆ.

ಭಾರತದಲ್ಲಿ 4 ಹಾಗೂ ದುಬೈನಲ್ಲಿ ಒಂದು ಕಚೇರಿ ಹೊಂದಿದ್ದಾನೆ. ಈ ವಯಸ್ಸಿನಲ್ಲೇ ಮಿಲಿಯನೇರ್ (6.5 ಕೋಟಿ ರು.ಗೂ ಅಧಿಕ ಸಂಪತ್ತು ಹೊಂದಿದವ) ಆಗಿದ್ದಾನೆ. ಸಿಬಿಐ ಅಧಿಕಾರಿಗಳಿಗೇ ಸೈಬರ್ ಭದ್ರತೆ ಕುರಿತು ತರಬೇತಿ ಕೊಡುತ್ತಿದ್ದಾನೆ. ಟಿಎಸಿ ಸೆಕ್ಯುರಿಟಿ ಸಲ್ಯೂಷನ್ಸ್ ಎಂಬ ಕಂಪನಿ ಸ್ಥಾಪಿಸಿರುವ ಈತ, ಪಂಜಾಬ್ ಸರ್ಕಾರ ಹಾಗೂ ಕ್ರೈಮ್ ಬ್ರಾಂಚ್ ಪೊಲೀಸರ ಮಾಹಿತಿ ತಂತ್ರಜ್ಞಾನ ಸಲಹೆಗಾರನಾಗಿದ್ದಾನೆ. ಪ್ರತಿಷ್ಠಿತ ರಿಲಯನ್ಸ್ ನಂತಹ ಕಂಪನಿಗಳೂ ಈತನಿಗೆ ಗ್ರಾಹಕನಾಗಿವೆ.

ಇದೆಲ್ಲಾ ಆಗಿದ್ದು ಹೇಗೆ?: ತೃಷ್ಣೀತ್ ಚಿಕ್ಕವನಾಗಿದ್ದಾಗ ಆತನಿಗೆ ಪೋಷಕರು ಆಟದ ಸಾಮಗ್ರಿ ಹಾಗೂ ಎಲೆಕ್ಟ್ರಾನಿಕ್ ಸಾಧನಗಳನ್ನು ತಂದುಕೊಡುತ್ತಿದ್ದರು. ಬೇರೆ ಮಕ್ಕಳು ಅವುಗಳ ಜತೆ ಆಟವಾಡಲು ಆರಂಭಿಸಿದರೆ, ಈತ ಮಾತ್ರ ಅವನ್ನೆಲ್ಲಾ ಬಿಚ್ಚಿ, ಅವು ಹೇಗೆ ಕೆಲಸ ಮಾಡುತ್ತವೆ ಎಂದು ನೋಡುತ್ತಿದ್ದ. ಮನೆಯಲ್ಲಿದ್ದ ಕಂಪ್ಯೂಟರ್ ಮುಂದೆ ಸಾಕಷ್ಟು ಹೊತ್ತು ಕೂತಿರುತ್ತಿದ್ದ. ವೈಸ್ ಸಿಟಿ ಗೇಮ್ ಆಡುತ್ತಾ, ಕಂಪ್ಯೂಟರ್ ಹಾರ್ಡ್‌'ವೇರ್ ಬಗ್ಗೆ ತಿಳಿದುಕೊಳ್ಳಲು ಆರಂಭಿಸಿದ. ಮಗ ಹೆಚ್ಚು ಹೊತ್ತು ಕಂಪ್ಯೂಟರ್‌ ಮುಂದೆ ಕೂರಿಸುವುದನ್ನು ತಪ್ಪಿಸಲು ತೃಷ್ಣೀತ್ ತಂದೆ ಪಾಸ್‌'ವರ್ಡ್ ಅಳವಡಿಸಲು ಆರಂಭಿಸಿದರು. ಆದರೆ ಅದನ್ನು ಒಂದೇ ದಿನದಲ್ಲಿ ಭೇದಿಸುವಷ್ಟು ಚಾಕಚಕ್ಯತೆ ತೃಷ್ಣೀತ್‌'ಗೆ ಸಿದ್ಧಿಸಿತ್ತು. ಈತನ ಆಸಕ್ತಿ ನೋಡಿ ತಂದೆ ಹೊಸ ಕಂಪ್ಯೂಟರ್ ಕೊಟ್ಟಿದ್ದರು.

ಕಂಪ್ಯೂಟರ್ ರಿಪೇರಿಗೆಂದು ಹಾರ್ಡ್‌'ವೇರ್ ತಜ್ಞರನ್ನು ಕರೆಸಿದರೆ, ಅವರು ಮಾಡುವ ಕೆಲಸವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ. ಕಂಪ್ಯೂಟರ್ ಏನಾದರೂ ಸ್ಥಗಿತಗೊಂಡರೆ ತಾನೇ ರಿಪೇರಿ ಮಾಡುತ್ತಿದ್ದ. ಅಕ್ಕ-ಪಕ್ಕದ ಮನೆಯವರಿಗೂ ಕಂಪ್ಯೂಟರ್ ದುರಸ್ತಿ ಮಾಡಿಕೊಡುತ್ತಿದ್ದ. ಕಂಪ್ಯೂಟರ್ ಮೇಲೆ ಅತಿಯಾದ ಆಸಕ್ತಿ ಬೆಳೆಸಿಕೊಂಡ ತೃಷ್ಣೀತ್ 8ನೇ ತರಗತಿಯಲ್ಲಿ ಫೇಲಾಗಿಬಿಟ್ಟ. ಪೋಷಕರು ಪ್ರಶ್ನಿಸಿದಾಗ, ನನಗೆ ಕಂಪ್ಯೂಟರ್ ಬಗ್ಗೆ ಗೊತ್ತು. ಸಾಫ್ಟ್‌'ವೇರ್ ಹಾಗೂ ಹಾರ್ಡ್‌'ವೇರ್ ಮೇಲಷ್ಟೇ ನನಗೆ ಒಲವು. ಬೇರೆಯದರಮೇಲೆ ಆಸಕ್ತಿ ಇಲ್ಲ ಎಂದಿದ್ದ. ಬಳಿಕ ಓದು ತ್ಯಜಿಸಿ ಇದೇ ಕ್ಷೇತ್ರದಲ್ಲಿ ಮುಂದುವರಿದಿದ್ದ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿಗೆ ಬಿಗ್ ರಿಲೀಫ್: ಇಡಿ ಪ್ರಕರಣದಲ್ಲಿ 4 ತಿಂಗಳ ಬಳಿಕ ಜಾಮೀನು ಮಂಜೂರು
ವಿದ್ಯಾರ್ಥಿಗಳ ಕೈಯಲ್ಲಿ ಕಾರು ತೊಳೆಯಿಸಿದ ಶಿಕ್ಷಕ; ಹಳಿಯಾಳದಲ್ಲಿ ಗುರುವಿನ 'ಕಾರು ಬಾರು' ವಿಡಿಯೋ ವೈರಲ್!