
ಶಿವಮೊಗ್ಗ (ನ.24): ತೀರ್ಥಹಳ್ಳಿಯ ಉದ್ಯಮಿಯೊಬ್ಬರಿಗೆ ವಿದೇಶದಿಂದ ನಟೋರಿಯಸ್ ಡಾನ್ ರವಿ ಪೂಜಾರಿ ಬೆದರಿಕೆಯ ಕರೆ ಮಾಡಿ 25 ಕೋಟಿ ಹಣಕ್ಕೆ ಬೇಡಿಕೆ ಇಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತೀರ್ಥಹಳ್ಳಿ ನ್ಯಾಷನಲ್ ಸಂಸ್ಥೆಯ ಅಬ್ದುಲ್ ಕಲಂಗೆ 1 ತಿಂಗಳ ಹಿಂದೆಯೇ ವಿದೇಶದಿಂದ ರವಿ ಪೂಜಾರಿ ಹೆಸರಿನಲ್ಲಿ ಬೆದರಿಕೆ ಕರೆ ಮಾಡಿ 25 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಈ ಕುರಿತಂತೆ ದರಲಗೋಡು ಶ್ರೀನಾಥ ಜೋಯ್ಸ್ ಎಂಬುವವರು ತೀರ್ಥಹಳ್ಳಿ ಠಾಣೆಗೆ ದೂರು ನೀಡಿದ್ದು ಎಫ್‌ಐಆರ್ ದಾಖಲಾಗಿ ತನಿಖೆ ನಡೆಯುತ್ತಿದೆ ಎಂದು ಎಸ್ಪಿ ಅಭಿನವ್ ಖರೆ ಹೇಳಿದ್ದಾರೆ. ತೀರ್ಥಹಳ್ಳಿ ಪಟ್ಟಣದ ಪ್ರಸಿದ್ದ ಗುತ್ತಿಗೆದಾರ, ಗೋಲ್ಡ್ ಪ್ಯಾಲೇಸ್, ಸೂಪರ್ ಬಜಾರ್ ಹೊಂದಿರುವ ನ್ಯಾಷನಲ್ ಸಂಸ್ಥೆಯ ಅಬ್ದುಲ್ ಕಲಂಗೆ ಮತ್ತವರ ಆಪ್ತ ತೀರ್ಥಹಳ್ಳಿ ದರಲಗೋಡು ಶ್ರೀನಾಥ್ ಜೋಯ್ಸ್‌ಗೆ ವಿದೇಶದಿಂದ ಬೆದರಿಕೆ ಕರೆ ಬರುತ್ತಿದೆ. ಅದು ಡಾನ್ ರವಿ ಪೂಜಾರಿ ಹೆಸರಿನಲ್ಲಿ 25 ಕೋಟಿ ರೂಪಾಯಿಗೆ ಹಣ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆಂದು ಕೆಲವು ದಿನಗಳ ಹಿಂದೆ ತೀರ್ಥಹಳ್ಳಿ ಠಾಣೆಗೆ ಅಬ್ದುಲ್ ಕಲಂರವರ ಅತ್ಯಂತ ಆಪ್ತ ಶ್ರೀನಾಥ ಜೋಯ್ಸ್ ಎಂಬುವವರು ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ತೀರ್ಥಹಳ್ಳಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು. ಹಿರಿಯ ಪೊಲೀಸ್ ಅಧಿಕಾರಿಗಳು ಅಬ್ದುಲ್ ಕಲಂಗೆ ಭದ್ರತೆ ನೀಡಿದ್ದು, ಕರೆ ಬಗ್ಗೆ ಖಚಿತ ಪಡಿಸಲು ತಂಡಗಳನ್ನು ರಚಿಸಿ ತನಿಖೆ ನಡೆಯುತ್ತಿದೆ .
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.