ಕರ್ತವ್ಯಲೋಪವೆಸಗಿದ್ದ 805 ವೈದ್ಯರು ಸಸ್ಪೆಂಡ್

By suvarna web deskFirst Published Oct 27, 2016, 3:15 PM IST
Highlights

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ರಮೇಶ್​​​ ಕುಮಾರ್​​​, ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆ, ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ, ಸರ್ಕಾರಿ ಆಸ್ಪತ್ರೆಗಳಲ್ಲಿ ಸುಮಾರು ಒಂದು ಸಾವಿರ ದಿನಗಳಿಂದ ಗೈರು ಹಾಜರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸುಮಾರು 805 ವೈದ್ಯರ ವಜಾ ಮಾಡಲಾಗಿದೆ ಎಂದು ಹೇಳಿದರು.

ಬೆಂಗಳೂರು(ಅ.27): ಸರ್ಕಾರಿ ಕೆಲಸ ದೇವರ ಕೆಲಸ ಅಂತಾರೆ. ಆದರೆ, ಅದೇ ಸರ್ಕಾರಿ ಕೆಲಸಲ್ಲಿದ್ದುಕೊಂಡೇ ಚಕ್ಕರ್​​ ಹಾಕುತ್ತಿದ್ದ ವೈದ್ಯರಿಗೆ ಆರೋಗ್ಯ ಸಚಿವ ರಮೇಶ್​​ ಕುಮಾರ್​ ಬಿಸಿ ಮುಟ್ಟಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞರು, ವೈದ್ಯರ ಕೊರತೆ ಹಿನ್ನಲೆಯಲ್ಲಿ ಸತತ ಒಂದು ಸಾವಿರ ದಿನಗಳಿಂದ ಗೈರು ಹಾಜರಾಗಿದ್ದ 805 ವೈದ್ಯರನ್ನು ಸಸ್ಪೆಂಡ್ ಮಾಡಲಾಗಿದೆ.

click me!