ಶೇ.80 ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಬೇಕಾಗಿದೆ: ಹೊರಟ್ಟಿ

By Suvarna Web DeskFirst Published Aug 20, 2017, 3:18 PM IST
Highlights

80% ಜನ ಪ್ರತ್ಯೇಕ  ಲಿಂಗಾಯತ ಧರ್ಮವನ್ನು ಬಯಸುತ್ತಿದ್ದಾರೆ ಎಂದು ಹೇಳಿರುವ ಜೆಡಿಎಸ್ ಮುಖಂಡ ಹಾಗೂ ಮಾಜಿ ಸಚಿವ ಬಸವರಾಜ ಹೊರಟ್ಟಿ ತಾನು ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರಕ್ಕೆ ಬದ್ಧನಾಗಿದ್ದೆನೆ ಎಂದು ಹೇಳಿದ್ದಾರೆ.

ವಿಜಯಪುರ: 80% ಜನ ಪ್ರತ್ಯೇಕ  ಲಿಂಗಾಯತ ಧರ್ಮವನ್ನು ಬಯಸುತ್ತಿದ್ದಾರೆ ಎಂದು ಹೇಳಿರುವ ಜೆಡಿಎಸ್ ಮುಖಂಡ ಹಾಗೂ ಮಾಜಿ ಸಚಿವ ಬಸವರಾಜ ಹೊರಟ್ಟಿ ತಾನು ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರಕ್ಕೆ ಬದ್ಧನಾಗಿದ್ದೆನೆ ಎಂದು ಹೇಳಿದ್ದಾರೆ.

ಶಾಮನೂರು, ತಿಪ್ಪಣ್ಣ, ಖಂಡ್ರೆ ಇವ್ರು ಕುರ್ಚಿಗೆ ಅಂಟಿಕೊಂಡು ಕುಳಿತ್ತಿದ್ದಾರೆ ಎಂದಿರುವ ಹೊರಟ್ಟಿ, ಶಾಮನೂರ ಹಾಗೂ ತಿಪ್ಪಣ್ಣವರ್ ಅವ್ರ ನಿಲುವು ಬದಲಿಸಿಕೊಂಡು ಒಳ್ಳೆ ನಿರ್ಧಾರಕ್ಕೆ ಬರಲಿ ಎಂದು ಹೇಳಿದ್ದಾರೆ.

ಕಾಲ,ಕ್ಕೆ ತಕ್ಕಂತೆ ಜನರ ನಿಲುವು ಬದಲಾಗುತ್ತದೆ, ಆದುದರಿಂದ ಅವರ ಭಾವನೆಗಳು ಮತ್ತು ಬೇಡಿಕೆಗಳಿಗೆ ಸ್ಪಂದಿಸಬೇಕೆಂದು ಹೊರಟ್ಟಿ ಈ ಸಂದರ್ಭದಲ್ಲಿ ಹೇಳಿದ್ದಾರೆ,

ಬಹುತೇಕ ಸ್ವಾಮಿಜಿಗಳು ಪ್ರತ್ಯೇಕ ಧರ್ಮವನ್ನು ಬಯಸುತ್ತಿದ್ದಾರೆ, ಆದರೆ ಕೆಲವರಿಗೆ ತಮ್ಮ ಸ್ಥಾನಮಾನ ಕಳೆದುಕೊಳ್ಳುವ ಭಯವಿರುವುದರಿಂದ ವಿರೋಧಿಸುತ್ತಿದ್ದಾರೆ, ಎಂದು ಹೊರಟ್ಟಿ ಹೇಳಿದ್ದಾರೆ,

click me!