ಜೀವ ಕಸಿದ ಮಂಜು: ಸರಣಿ ರಸ್ತೆ ಅಪಘಾತಕ್ಕೆ 8 ಬಲಿ!

Published : Dec 24, 2018, 04:03 PM IST
ಜೀವ ಕಸಿದ ಮಂಜು: ಸರಣಿ ರಸ್ತೆ ಅಪಘಾತಕ್ಕೆ 8 ಬಲಿ!

ಸಾರಾಂಶ

ಉತ್ತರ ಭಾರತದಲ್ಲಿ ಮುಂದುವರೆದ ಚಳಿಯ ರೌದ್ರಾವತಾರ| ಹರಿಯಾಣದಲ್ಲಿ ಝಜ್ಜರ್ ನಲ್ಲಿ ಭೀಕರ ಸರಣಿ ರಸ್ತೆ ಅಪಘಾತ| ಮಂಜು ಕವಿದ ಪರಿಣಾಮ ರಸ್ತೆ ಮೇಲಿನ ವಾಹನಗಳೇ ಕಾಣಿಸುತ್ತಿಲ್ಲ| ಟ್ರಕ್ ಗುದ್ದಿದ ಪರಿಣಾಮ ಸರಣಿ ರಸ್ತೆ ಅಪಘಾತ ಸಂಭವಿಸಿದೆ| ಅಪಘಾತದಲ್ಲಿ 8 ಜನರ ದುರ್ಮರಣ, ಹಲವರಿಗೆ ಗಂಭೀರ ಗಾಯ

ಝಜ್ಜರ್(ಡಿ.24): ಉತ್ತರ ಭಾರತದಲ್ಲಿ ಚಳಿಯಹೊಡೆತಕ್ಕೆ ಜನಜೀವನ ತತ್ತರಿಸಿದೆ. ಈ ಮಧ್ಯೆ ಗುರುಗಾಂವ್ ನಲ್ಲಿ ತಾಪಮಾನ ಶೂನ್ಯಕ್ಕೆ ಕುಸಿದ ಪರಿಣಾಮ, ರಸ್ತೆ ಮೇಲೆ ತೀವ್ರ ಮಂಜು ಕವಿದಿದ್ದರಿಂದ ಸರಣಿ ಅಪಘಾತ ಸಂಭವಿಸಿ 8 ಜನ ಸಾವನ್ನಪ್ಪಿದ್ದಾರೆ.

ಹರಿಯಾಣದ ಝಜ್ಜರ್ ನಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಮಂಜು ಕವಿದಿದ್ದರಿಂದ ರಸ್ತೆ ಮೇಲಿದ್ದ ವಾಹನಗಳು ಕಾಣುತ್ತಿರಲಿಲ್ಲ. ಪರಿಣಾಮ ಬೃಹತ್ ಟ್ರಕ್ ವೊಂದು ತನ್ನ ಮುಂದಿದ್ದ ವಾಹನಗಳಿಗೆ ಢಿಕ್ಕಿ ಹೊಡೆದಿದೆ.

ಪರಿಣಾಮ ಸುಮಾರು 10ಕ್ಕೂ ಹೆಚ್ಚು ವಾಹನಗಳು ಈ ಅಪಘಾತದಲ್ಲಿ ಜಖಂಗೊಂಡಿದ್ದು, ದುರ್ಘಟನೆಯಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಟ್ರಕ್ ಮುಂದಿದ್ದ ಜೀಪ್ ನಲ್ಲಿ ಸಂಚರಿಸುತ್ತಿದ್ದ ಸುಮಾರು 5ಕ್ಕೂ ಹೆಚ್ಚು ಮಂದಿ ಈ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು ಗಾಯಾಳುಗಳನ್ನು ಝಜ್ಜರ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ
ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!