ನಿವೃತ್ತ ವಿವಿ ಶಿಕ್ಷಕರು, ಬೋಧಕೇತರ ಸಿಬ್ಬಂದಿಗೂ 7ನೇ ವೇತನ ಆಯೋಗ ಭಾಗ್ಯ

First Published Jun 13, 2018, 7:50 AM IST
Highlights

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮೊದಿ ಸರ್ಕಾರವು 7ನೇ ವೇತನ ಆಯೋಗದ ಭಾಗ್ಯವನ್ನು ವಿಶ್ವವಿದ್ಯಾಲಯದ ನಿವೃತ್ತ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಗೂ ಕಲ್ಪಿಸಿದೆ. ಇದರಿಂದ ದೇಶದ ವಿವಿಗಳು ಹಾಗೂ ಅಧೀನ ಕಾಲೇಜುಗಳ 8 ಲಕ್ಷ ನಿವೃತ್ತ ಶಿಕ್ಷಕರು ಹಾಗೂ 15 ಲಕ್ಷ ನಿವೃತ್ತ ಬೋಧಕೇತರ ಸಿಬ್ಬಂದಿಗೆ ಅನುಕೂಲವಾಗಲಿದೆ.
 

ನವದೆಹಲಿ (ಜೂ. 13): ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮೊದಿ ಸರ್ಕಾರವು 7ನೇ ವೇತನ ಆಯೋಗದ ಭಾಗ್ಯವನ್ನು ವಿಶ್ವವಿದ್ಯಾಲಯದ ನಿವೃತ್ತ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಗೂ ಕಲ್ಪಿಸಿದೆ. ಇದರಿಂದ ದೇಶದ ವಿವಿಗಳು ಹಾಗೂ ಅಧೀನ ಕಾಲೇಜುಗಳ 8 ಲಕ್ಷ ನಿವೃತ್ತ ಶಿಕ್ಷಕರು ಹಾಗೂ 15 ಲಕ್ಷ ನಿವೃತ್ತ ಬೋಧಕೇತರ ಸಿಬ್ಬಂದಿಗೆ ಅನುಕೂಲವಾಗಲಿದೆ.

ಈ ಬಗ್ಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ ಜಾವಡೇಕರ್‌ ಟ್ವೀಟರ್‌ನಲ್ಲಿ ಹೇಳಿಕೆ ನೀಡಿದ್ದಾರೆ. ‘ಕೇಂದ್ರೀಯ, ಯುಜಿಸಿ ಅನುದಾನಿತ ಹಾಗೂ ಡೀಮ್‌್ಡ ವಿವಿಗಳು ಮತ್ತು ಅವುಗಳ ಅಧೀನ ಕಾಲೇಜುಗಳ 23 ಲಕ್ಷ ನಿವೃತ್ತ ಉದ್ಯೋಗಿಗಳಿಗೆ 7ನೇ ವೇತನ ಆಯೋಗದ ಅನ್ವಯ ಪಿಂಚಣಿ ಲಭಿಸಲಿದೆ. ಇದರಲಲ್ಲಿ 15 ಲಕ್ಷ ನಿವೃತ್ತ ಬೋಧಕೇತರ ಹಾಗೂ 8 ಲಕ್ಷ ಬೋಧಕ ಸಿಬ್ಬಂದಿ ಇರಲಿದ್ದಾರೆ. ಸುಮಾರು 6 ಸಾವಿರ ರು.ನಿಂದ 18 ಸಾವಿರ ರು.ವರೆಗೆ ಹೆಚ್ಚುವರಿ ಲಾಭ ಪಡೆಯಲಿದ್ದಾರೆ’ ಎಂದು ಹೇಳಿದ್ದಾರೆ.

click me!