ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್

By Web DeskFirst Published Sep 24, 2018, 1:23 PM IST
Highlights

ಕೇಂದ್ರ ಸರ್ಕಾರ ತನ್ನ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ಒಂದನ್ನು ನೀಡಿದೆ. 7ನೇ ವೇತನ ಆಯೋಗದ ಅಡಿಯಲ್ಲಿ ಕೇಂದ್ರ ಸರ್ಕಾರ ಎಲ್ ಟಿಸಿ ಸೌಲಭ್ಯವನ್ನು ವಿಸ್ತರಣೆ ಮಾಡುವುದಾಗಿ ಘೋಷಣೆ ಮಾಡಿದೆ.  

ನವದೆಹಲಿ :  ಕೇಂದ್ರ ಸರ್ಕಾರವು 7ನೇ ವೇತನ ಆಯೋಗದ ಅಡಿಯಲ್ಲಿ ತನ್ನ ನೌಕರರಿಗೆ ಇದೀಗ ಭರ್ಜರಿ ಗುಡ್ ನ್ಯೂಸ್ ಒಂದನ್ನು ನೀಡಿದೆ. 

ಕೇಂದ್ರ ಸರ್ಕಾರ ನೌಕರರಿಗೆ ಇದ್ದ ಎಲ್ ಟಿಸಿ ಯೋಜನೆಯನ್ನು ಇದೀಗ ವಿಸ್ತರಣೆ ಮಾಡಿದೆ. ಇದರಿಂದ ನೌಕರರು  ವಿವಿಧೆಡೆ ಪ್ರವಾಸಕ್ಕೆ ತೆರಳಲು ಅನುಕೂಲವಾಗಲಿದೆ. 

ಎಲ್ ಟಿಸಿ ಯೋಜನೆಯ ಅಡಿಯಲ್ಲಿ ನೌಕರರು  ಜಮ್ಮು ಕಾಶ್ಮೀರ, ಅಂಡಮಾನ್ ನೀಕೋಬಾರ್ , ಈಶಾನ್ಯ ವಲಯದ ಪ್ರದೇಶಗಳಿಗೆ ವಿಮಾನದ ಮೂಲಕ ಪ್ರಯಾಣಿಸುವ ಅವಕಾಶ ದೊರೆಯುತ್ತಿದೆ. 

ಮುಂದಿನ 2 ವರ್ಷಗಳ ಕಾಲ ಈ ಯೋಜನೆಯನ್ನು ವಿಸ್ತರಣೆ ಮಾಡಲಾಗಿದ್ದು, 2018ರ ಸೆಪ್ಟೆಂಬರ್ 26  ರಿಂದ  2020ರ ಸೆಪ್ಟೆಂಬರ್ 25ರವರೆಗೆ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದಾಗಿದೆ. 

ಪ್ರಯಾಣದ ವೇಳೆ ವೆಚ್ಚವಾದ ಹಣವನ್ನು ಕೇಂದ್ರ ಸರ್ಕಾರವು ಎಲ್ ಟಿಸಿ ಅಡಿಯಲ್ಲಿ ಮರುಪಾವತಿ ಮಾಡುತ್ತದೆ. ಲೀವ್ ಟ್ರಾವೆಲ್ ಕನ್ಸೀಶನ್ ಅಡಿಯಲ್ಲಿ ಅಲೋವೆನ್ಸ್ ಜೊತೆಗೆ ಸಂಬಳ ಸಹಿತ ರಜೆ ಸೌಲಭ್ಯವನ್ನು ಕೇಂದ್ರ ಸರ್ಕಾರಿ ನೌಕರರು ಪಡೆದುಕೊಳ್ಳುತ್ತಾರೆ. 

ಅಲ್ಲದೇ ಕೇಂದ್ರ ಸರ್ಕಾರಿ ನೌಕರರು ತಮ್ಮ ಪ್ರಯಾಣವನ್ನು ಖಾಸಗಿ ವಿಮಾನಯಾನದ ಮೂಲಕವೂ ಮಾಡಲು ಈ ಯೋಜನೆಯ ಅಡಿಯಲ್ಲಿ ಅವಕಾಶವನ್ನು ಒದಗಿಸುತ್ತಿದೆ. 

click me!