ದರ್ಶನ್ ಕಾರು ಅಪಘಾತ ಕೇಸ್ ಗೆ ಟ್ವಿಸ್ಟ್

By Web Desk  |  First Published Sep 24, 2018, 12:42 PM IST

ಮೈಸೂರಿನಲ್ಲಿ ನಡೆದ ನಟ ದರ್ಶನ್ ಕಾರು ಅಪಘಾತ ಪ್ರಕರಣಕ್ಕೆ ಇದೀಗ ಮತ್ತೊಂದು ಟ್ವಿಸ್ಟ್ ದೊರಕಿದೆ. 


ಮೈಸೂರು :  ಮೈಸೂರಿನಲ್ಲಿ ದರ್ಶನ್ ಕಾರು ಅಪಘಾತ ಪ್ರಕರಣಕ್ಕೆ ಇದೀಗ ಮತ್ತೊಂದು ಟ್ವಿಸ್ಟ್ ದೊರಕಿದೆ. 

ಮೈಸೂರಿನಿಂದ ಕಾರ್ಯಕ್ರಮ ಮುಗಿಸಿಕೊಂಡು ಬೆಂಗಳೂರಿಗೆ ವಾಪಸಾಗುತ್ತಿದ್ದ ವೇಳೆ  ಮೈಸೂರಿನ ಹೊರ ವಲಯದ ಜೆಎಸ್ ಎಸ್ ಅರ್ಬನ್ ಹಾಥ್ ಬಳಿ ತಡರಾತ್ರಿ 2.55ಕ್ಕೆ ದರ್ಶನ್ ಕಾರು ಅಪಘಾತವಾಗಿದೆ ಎನ್ನುವ ವಿಚಾರ ತಿಳಿದು ಬಂದಿದೆ. 

Tap to resize

Latest Videos

ಇನ್ನು ದರ್ಶನ್, ಪ್ರಜ್ವಲ್ ದೇವರಾಜ್, ದೇವರಾಜ್ ಅವರು ಕಾರಿನಲ್ಲಿದ್ದು, ದರ್ಶನ್ ಅವರೇ ಕಾರುಚಲಾಯಿಸಿಕೊಂಡು ಬರುತ್ತಿದ್ದರು ಎನ್ನಲಾಗಿತ್ತು. ಆದರೆ ಇದೀಗ ಅವರ ಚಾಲಕ  ಕಾರು ಚಲಾವಣೆ ಮಾಡುತ್ತಿದ್ದರು ಎನ್ನಲಾಗಿದೆ.

ಈ ವೇಳೆ ತಿರುವಿನಲ್ಲಿ ಆಗಮಿಸುವ ವೇಳೆ ಚಾಲಕನ ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸಿದೆ. ಡಿವೈಡರ್ ಗೆ ದರ್ಶನ್ ಸೇರಿ ನಾಲ್ವರು ಇದ್ದ ಕಾರ್  ಗುದ್ದಿದೆ. ಈ ವೇಳೆ ಪಲ್ಟಿಯಾಗಿ ಮೂವರು ಗಾಯಗೊಂಡಿದ್ದಾರೆ.

ಸ್ಥಳದಲ್ಲಿ ಕಾರು ಮಗುಚಿ ಬಿದ್ದ ವೇಳೆ ಸ್ಥಳೀಯರು ಆಗಮಿಸಿ ಕಾರನ್ನು ಮೇಲೆತ್ತಿದ್ದಾರೆ. 

ಸದ್ಯ ಗಾಯಗೊಂಡಿದ್ದ ಮೂವರನ್ನೂ ಕೂಡ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

click me!