ಒಟಿಪಿ ಹಂಚಿಕೊಂಡು ಒಂದು ವಾರದಲ್ಲಿ 7 ಲಕ್ಷ ಕಳೆದುಕೊಂಡ ಮಹಿಳೆ

First Published Jun 4, 2018, 1:55 PM IST
Highlights

ಬ್ಯಾಂಕ್ ಅಧಿಕಾರಿಗಳೆಂದು ಹೇಳಿಕೊಂಡು ಕರೆ ಮಾಡಿದವರ ಬಳಿ ಒಂದು ವಾರದಲ್ಲಿ 28 ಬಾರಿ ತನ್ನ ಒಟಿಪಿ ಹಂಚಿಕೊಂಡು ಮಹಿಳೆಯೋರ್ವರು 7 ಲಕ್ಷ ಹಣವನ್ನು ಕಳೆದುಕೊಂಡ ಘಟನೆ ನವಿ  ಮುಂಬೈನಲ್ಲಿ ನಡೆದಿದೆ. 

ನವಿ ಮುಂಬೈ  : ಬ್ಯಾಂಕ್ ಅಧಿಕಾರಿಗಳೆಂದು ಹೇಳಿಕೊಂಡು ಕರೆ ಮಾಡಿದವರ ಬಳಿ ಒಂದು ವಾರದಲ್ಲಿ 28 ಬಾರಿ ತನ್ನ ಒಟಿಪಿ ಹಂಚಿಕೊಂಡು ಮಹಿಳೆಯೋರ್ವರು 7 ಲಕ್ಷ ಹಣವನ್ನು ಕಳೆದುಕೊಂಡ ಘಟನೆ ನವಿ  ಮುಂಬೈನಲ್ಲಿ ನಡೆದಿದೆ. 

ಕಳೆದ ಮೇ 17 ರಂದು ಮೋಡಕ್ ಅವರಿಗೆ ಮೊದಲ ಬಾರಿಗೆ ಕರೆ ಮಾಡಿದ ವ್ಯಕ್ತಿ ತಾವು ಬ್ಯಾಂಕ್ ಅಧಿಕಾರಿಯಾಗಿದ್ದು,  ನಿಮ್ಮ ಎಟಿಎಂ ಕೆಲ ತಾಂತ್ರಿಕ ಕಾರಣಗಳಿಂದ ಬ್ಲಾಕ್ ಆಗಿದ್ದು ಅದನ್ನು ಸರಿಪಡಿಸಲು ಒಟಿಪಿ  ನೀಡಬೇಕು ಎಂದು ಕೇಳಿದ್ದಾರೆ. ಈ ವೇಳೆ ಮಹಿಳೆ ಆ ವ್ಯಕ್ತಿಯ ಬಳಿ ತಮ್ಮ ಒಟಿಪಿ ಹಂಚಿಕೊಂಡಿದ್ದು, ಅವರ ಖಾತೆಯಿಂದ 7.20 ಲಕ್ಷ ಹಣವನ್ನು ಡ್ರಾ ಮಾಡಿಕೊಂಡಿದ್ದಾರೆ. 

ತಸ್ಲೀಮ್ ಮುಜಕ್ಕರ್ ಮೋಡಕ್ ಎಂಬ  ಮಹಿಳೆ ಇದೀಗ ತಾನು ಮೋಸ ಹೋಗಿರುವ ಬಗ್ಗೆ ಅರಿತು ಪೊಲೀಸರ ಮೊರೆ ಹೋಗಿದ್ದಾರೆ. 

ಅವರ ಖಾತೆಯಿಂದ ಮುಂಬೈ, ನೋಯ್ಡಾ, ಗುರು ಗ್ರಾಮ್, ಕೋಲ್ಕತಾ, ಬೆಂಗಳೂರಿನಲ್ಲಿ ಹಣವನ್ನು ಡ್ರಾ ಮಾಡಲಾಗಿದೆ. ಮಹಿಳೆಯನ್ನು ಸಂಪರ್ಕಿಸಲು ವಂಚಕರು ಮೂರು ಸಿಮ್ ಕಾರ್ಡ್ ಗಳನ್ನು ಉಪಯೋಗಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

click me!