ಕಪ್ಪು ಹಣ ಜಮಾ ಮಾಡುವಾಗ ಸಿಕ್ಕಿಬಿದ್ರೆ 7 ವರ್ಷ ಶಿಕ್ಷೆ.....!

By suvarna web deskFirst Published Nov 21, 2016, 7:34 AM IST
Highlights

ಪರ್ಸೆಂಟೇಜ್ ಆಸೆಗೆ ಮತ್ತೊಬ್ಬರ ಹಣ ಜಮಾ ಮಾಡುವಾಗ ಸಿಕ್ಕಿಬಿದ್ರೆ ದಂಡದ ಜೊತೆ 7 ವರ್ಷಗಳ ಕಾರಾಗೃಹ ಶಿಕ್ಷೆ  ಆಗಲಿದೆ

ನವದೆಹಲಿ(ನ.21): ನೋಟ್​ ಬ್ಯಾನ್​ಗೂ ಮೊದಲೇ ಕೇಂದ್ರ ಸರ್ಕಾರ ಕಾಳಧನಿಕರಿಗೆ ಕಪ್ಪು ಹಣವನ್ನೂ ಕೂಡ ಅಕೌಂಟ್​ಗೆ ಜಮಾ ಮಾಡಿ, ಸರಿಯಾದ ತೆರಿಗೆ ಕಟ್ಟಲು ಅವಕಾಶವನ್ನ ನೀಡಿತ್ತು.

ಆದರೆ ಇದನ್ನ ಕಪ್ಪುಕುಳಗಳು ಗಣನೆಗೆ ತೆಗೆದುಕೊಂಡಿರಲಿಲ್ಲ.ಅದರ ಪರಿಣಾಮ ಈಗ ಅನುಭವಿಸುವಂತಾಗಿದೆ. ದಂಡದಿಂದ ತಪ್ಪಿಸಿಕೊಳ್ಳೋಕೆ ಕೆಲವರು ಬೇರೆಯವರಿಂದ ಹಣ ಜಮಾ ಮಾಡಿಸುವ ದಂಧೆಗೆ ಇಳಿದಿದ್ದಾರೆ.

Latest Videos

ಆದರೆ, ಇನ್ನು ಮುಂದೆ ಮತ್ತೊಬ್ಬರ ಅಕೌಂಟ್​ನಲ್ಲಿ ಜಮಾ ಮಾಡಿ, ಅವ್ರಿಗೆ ಪರ್ಸೆಂಟೇಜ್ ಲೆಕ್ಕದಲ್ಲಿ ಹಣ ನೀಡೋ ವ್ಯವಹಾರಗಳಿಗೂ ಬ್ರೇಕ್​ ಬಿಳಲಿದೆ. ಏಕೆಂದರೆ ಪರ್ಸೆಂಟೇಜ್ ಆಸೆಗೆ ಮತ್ತೊಬ್ಬರ ಹಣ ಜಮಾ ಮಾಡುವಾಗ ಸಿಕ್ಕಿಬಿದ್ರೆ ದಂಡದ ಜೊತೆ 7 ವರ್ಷಗಳ ಕಾರಾಗೃಹ ಶಿಕ್ಷೆ  ಆಗಲಿದೆ. 

click me!