
ನವದೆಹಲಿ(ಅ.20): ಎರಡೆಲೆ ಚಿಹ್ನೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಸುಕೇಶ್ ಚಂದ್ರಶೇಖರನ್ ನಡೆಸುತ್ತಿದ್ದ ಐಷಾರಾಮಿ ಬದುಕಿನ ಅಸಲಿಯತ್ತನ್ನು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಸುವರ್ಣ ನ್ಯೂಸ್ ಬಯಲು ಮಾಡಿತ್ತು. ಸುದ್ದಿ ಪ್ರಸಾರವಾದ ಕೆಲವೇ ಕ್ಷಣಗಳಲ್ಲಿ ಸುಕೇಶ್'ಗೆ ಸಹಕರಿಸಿದ್ದ ಎಲ್ಲಾ ಏಳು ಪೊಲೀಸ್ ಸಿಬ್ಬಂದಿಯನ್ನು ದೆಹಲಿ ಪೊಲೀಸ್ ಕಮಿಷನರ್ ಅಮಾನತುಗೊಳಿಸಿಸಲು ಆದೇಶ ಹೊರಡಿಸಿದ್ದಾರೆ. ಇದು ಸುವರ್ಣ ನ್ಯೂಸ್ ಬಿಗ್ ಇಂಪ್ಯಾಕ್ಟ್.
ವಿಚಾರಣಾಧೀನ ಕೈದಿಯೊಬ್ಬ 33 ಲಕ್ಷ ಬೆಲೆ ಬಾಳುವ ವಾಚ್ ಹಾಗೂ ಚೆನ್ನೈ, ಕೊಯಮತ್ತೂರು ಮೂಲದ ಬ್ರೋಕರ್ಗಳಿಂದ ಮೂರು ಐಷಾರಾಮಿ ಕಾರು ಖರೀದಿಸಿದ್ದ. ಹೀಗೆ ಒಟ್ಟು 35 ಲಕ್ಷದ ಶಾಪಿಂಗ್ ನಡೆಸಿದ್ದ. ಈತನಿಗೆ ಈ ಐಷಾರಾಮಿ ಬದುಕು ನಡೆಸಲು ಪೊಲೀಸರೇ ಸಾಥ್ ನೀಡಿದ್ದರು. ಅಲ್ಲದೇ ಈತನ ಪ್ರೇಯಸಿಯನ್ನು ಆತನ ಬಳಿ ಖುದ್ದು ಪೊಲೀಸರೇ ಕರೆದೊಯ್ದಿದ್ದರು. ಈ ಸುದ್ದಿಯನ್ನು ಸುವರ್ಣ ನ್ಯೂಸ್ ಹಾಗೂ ಸೋದರ ಸಂಸ್ಥೆ ರಿಪಬ್ಲಿಕ್ ಟಿವಿ ಬಟಾಬಯಲು ಮಾಡಿತ್ತು. ಇದು ಕೇಂದ್ರ ಗೃಹ ಲಾಖೆ ಹಾಗೂ ಪೊಲೀಸ್ ಇಲಾಖೆಯನ್ನೇ ತಲೆ ತಗ್ಗಿಸುವಂತೆ ಮಾಡಿತ್ತು. ಆದರೀಗ ಸುದ್ದಿ ಪ್ರಸಾರವಾದ ಕೆಲವೇ ಕ್ಷಣಗಳಲ್ಲಿ ಆರೋಪಿಗೆ ಸಹಕರಿಸಿದ 7 ಸಿಬ್ಬಂದಿಗಳನ್ನು ಅಮಾನತ್ತುಗೊಳಿಸಲಾಗಿದೆ.
-ರಾಜೇಶ್ ಕುಮಾರ್ - ಎಸ್'ಐಎ
-ಜೀವನ್ ಚಂದನ್- ಮುಖ್ಯ ಪೇದೆ
-ಜೆ, ಜಾರ್ಜ್- ಪೊಲೀಸ್
-ನಿತಿನಕುಮಾರ್- ಪೊಲೀಸ್
-ಧರ್ಮೇಂದರ್- ಪೊಲೀಸ್
-ಕೇಶವ- ಪೊಲೀಸ್
-ಪುಷ್ಪೇಂದರ್ ಸಿಂಗ್- ಪೊಲೀಸ್
ಇನ್ನು ಪೊಲೀಸ್ ಅಧಿಕಾರಿಗಳಿಎ ಈ ಕುರಿತಾಗಿ ಮಾಹಿತಿ ಇದ್ದರೂ ಯಾವುದೇ ಕ್ರಮಕೈಗೊಂಡಿರಲಿಲ್ಲ. ಬದಲಾಗಿ ಸುವರ್ಣ ನ್ಯೂಸ್ ಹಾಗೂ ರಿಪಬ್ಲಿಕ್ ಟಿವಿಯಲ್ಲಿ ಪ್ರಕರಣ ಪ್ರಸಾರವಾದ ಬಳಿಕ ಇವರನ್ನು ಅಮಾನತುಗೊಳಿಸಿರುವುದು ಮತ್ತೊಂದು ವಿವಾದ ಸೃಷ್ಟಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.