(Video)ಜೈಲಿನಲ್ಲಿರಬೇಕಾದ ವಿಚಾರಣಾಧೀನ ಕೈದಿಯ ಐಷಾರಾಮಿ ಬದುಕು: ಪೊಲೀಸರೇ ಈತನಿಗೆ ಸೆಕ್ಯುರಿಟಿ!

By Suvarna Web DeskFirst Published Oct 20, 2017, 2:09 PM IST
Highlights

ನಮ್ಮ ದೇಶದಲ್ಲಿ ದುಡ್ಡು ಕೊಟ್ಟರೆ ಏನೇನಾಗುತ್ತದೆ ಎಂಬುವುದಕ್ಕೆ ಈ ಸುದ್ದಿಯೇ ಉತ್ತಮ ಉದಾಹರಣೆ. ವಿಚಾರಣಾಧೀನ ಕೈದಿಯೊಬ್ಬ ಐಷಾರಾಮಿ ಸರ್ವಿಸ್ಡ್​ ಅಪಾರ್ಟ್​​ಮೆಂಟ್'ನಲ್ಲಿ ದಿನ ಕಳೆಯುತ್ತಿದ್ದು, ಮೂರು ಐಶಾರಾಮಿ ಕಾರು 33 ಲಕ್ಷ ಹಾಗೂ ಬೆಲೆ ಬಾಳುವ ವಾಚ್ ಖರೀದಿಸುತ್ತಾನೆ.  ಖುದ್ದು ಪೊಲೀಸರೇ  ಆತನ ಗರ್ಲ್​​ಫ್ರೆಂಡ್'​ನ ಆತನ ರೂಮಿಗೆ ಬಿಟ್ಟು ಬರುತ್ತಾರೆ. ಸಾಲದು ಎಂಬುವುದಕ್ಕೆ, ಪೊಲೀಸರೆ ಆತನನ್ನು ಗರ್ಲ್​​ಫ್ರೆಂಡ್​ ಜತೆ ಶಾಪಿಂಗ್​ಗೆ ಕಳುಹಿಸುತ್ತಾರೆ. ಹೀಗೂ ಆಗುತ್ತಾ? ಎಂಬ ಪ್ರಶ್ನೆ ಕಾಡುತ್ತದೆ. ನಂಬಲು ಸಾಧ್ಯವಾಗದಿದ್ದರೂ, ನಂಬಲೇಬೇಕು. ಯಾಕೆಂದರೆ ಈ ಎಲ್ಲಾ ಮಾಹಿತಿ ಹೊರಬಿದ್ದಿದ್ದು ಐಟಿ ತನಿಖೆಯಿಂದ..!. ಅಷ್ಟಕ್ಕೂ ಯಾರು ಆ ವಿಚಾರಣಾಧೀನ ಕೈದಿ ಅಂತೀರಾ? ಇಲ್ಲಿದೆ ನೋಡಿ ವಿವರ

ನವದೆಹಲಿ(ಅ.20): ನಮ್ಮ ದೇಶದಲ್ಲಿ ದುಡ್ಡು ಕೊಟ್ಟರೆ ಏನೇನಾಗುತ್ತದೆ ಎಂಬುವುದಕ್ಕೆ ಈ ಸುದ್ದಿಯೇ ಉತ್ತಮ ಉದಾಹರಣೆ. ವಿಚಾರಣಾಧೀನ ಕೈದಿಯೊಬ್ಬ ಐಷಾರಾಮಿ ಸರ್ವಿಸ್ಡ್​ ಅಪಾರ್ಟ್​​ಮೆಂಟ್'ನಲ್ಲಿ ದಿನ ಕಳೆಯುತ್ತಿದ್ದು, ಮೂರು ಐಶಾರಾಮಿ ಕಾರು 33 ಲಕ್ಷ ಹಾಗೂ ಬೆಲೆ ಬಾಳುವ ವಾಚ್ ಖರೀದಿಸುತ್ತಾನೆ.  ಖುದ್ದು ಪೊಲೀಸರೇ  ಆತನ ಗರ್ಲ್​​ಫ್ರೆಂಡ್'​ನ ಆತನ ರೂಮಿಗೆ ಬಿಟ್ಟು ಬರುತ್ತಾರೆ. ಸಾಲದು ಎಂಬುವುದಕ್ಕೆ, ಪೊಲೀಸರೆ ಆತನನ್ನು ಗರ್ಲ್​​ಫ್ರೆಂಡ್​ ಜತೆ ಶಾಪಿಂಗ್​ಗೆ ಕಳುಹಿಸುತ್ತಾರೆ. ಹೀಗೂ ಆಗುತ್ತಾ? ಎಂಬ ಪ್ರಶ್ನೆ ಕಾಡುತ್ತದೆ. ನಂಬಲು ಸಾಧ್ಯವಾಗದಿದ್ದರೂ, ನಂಬಲೇಬೇಕು. ಯಾಕೆಂದರೆ ಈ ಎಲ್ಲಾ ಮಾಹಿತಿ ಹೊರಬಿದ್ದಿದ್ದು ಐಟಿ ತನಿಖೆಯಿಂದ..!. ಅಷ್ಟಕ್ಕೂ ಯಾರು ಆ ವಿಚಾರಣಾಧೀನ ಕೈದಿ ಅಂತೀರಾ? ಇಲ್ಲಿದೆ ನೋಡಿ ವಿವರ

ಹೌದು ಪೊಲೀಸರಿಗೆ ಲಂಚ ನೀಡಿ ತನ್ನ ಕೈಗೊಂಬೆಯನ್ನಾಗಿ ಮಾಡಿದ ಆ ವಿಚಾರಣಾಧೀನ ಕೈದಿ ಬೇರಾರು ಅಲ್ಲ , ಎಐಡಿಎಂಕೆ ಪಕ್ಷದ ಎರಡೆಲೆ ಚಿನ್ಹೆಗಾಗಿ ಆಯೋಗಕ್ಕೆ ಲಂಚ ನೀಡಿದ ಆರೋಪದಡಿಯಲ್ಲಿ ದೆಹಲಿ ಕ್ರೈಂ ಬ್ರಾಂಚ್​ ಪೊಲೀಸರಿಂದ ಇದೇ ವರ್ಷ ಏಪ್ರಿಲ್​ 16ರಂದು ಬಂಧನವಾಗಿದ್ದ ಸುಕೇಶ್ ಚಂದ್ರಶೇಖರನ್.

ಕೆಲ ಸಮಯದ ಹಿಂದಷ್ಟೇ ಎರಡೆಲೆ ಚಿಹ್ನೆ ಭಾರೀ ಸದ್ದು ಮಾಡಿದ್ದು, ಈ ಪ್ರಕರಣದಲ್ಲಿ ಶಶಿಕಲಾ ಚಿಹ್ನೆ ಪಡೆಯಲು ದಿನಕರನ್ ಮೂಲಕವಾಗಿ ಲಂಚ ನೀಡಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ದಿನಕರನ್'ನಿಂದ ಹಣ ಪಡೆದು ಮಧ್ಯವರ್ತಿಯಾಗಿ ಸುಕೇಶ್ ಕಾರ್ಯನಿರ್ವಹಿಸಿದ್ದ. ದಾಳಿಯ ವೇಳೆ ಕಾರ್​'ನಲ್ಲಿ ಭಾರೀ ಪ್ರಮಾಣದ ಹಣ, ಎರಡೆಲೆ ಚಿಹ್ನೆ ಪತ್ತೆಯಾಗಿದ್ದು, ದಿನಕರ್'ನನ್ನು ವಿಚಾರಣೆ ನಡೆಸಿದಾಗ ಆತ ಸುಕೇಶ್ ಹೆಸರು ಬಾಯ್ಬಿಟ್ಟಿದ್ದ. ​

ಹೀಗಾಗಿ ಸುಕೇಶ್'ನ್ನು ಆರೋಪಿಯಾಗಿ ಪರಿಗಣಿಸಲಾಗಿತ್ತು. ಪ್ರಕರಣದ ವಿಚಾರಣೆಗೆ ಹಾಜರಾಗಲು ಅಕ್ಟೋಬರ್​ 9 ರಂದು ಕೋರ್ಟ್​ ಸುಕೇಶ್ ಬೆಂಗಳೂರಿಗೂ ಆಗಮಿಸಿದ್ದ. 7 ಜನ ಪೊಲೀಸರು ಈತನನ್ನು ಕರೆತಂದಿದ್ದರು. ಇನ್ನು ಕೋರ್ಟ್​ ವಿಚಾರಣೆ ಮುಗಿದ ಬಳಿಕ ಈ ವಿಚಾರಣಧೀನ ಕೈದಿಗೆ ರಾಜಾತಿಥ್ಯ ನೀಡಲಾಗುತ್ತಿದ್ದು, ಈತ ಈಗಾಗಲೇ ಮೂರು ಲಕ್ಜುರಿ ಕಾರುಗಳನ್ನು ಖರೀದಿಸಿತ ಓಡಾಟ ನಡೆಸುತ್ತಿದ್ದಾನೆ. ಇದರೊಂದಿಗೆ 33 ಲಕ್ಷ ಬೆಲೆ ಬಾಳುವ ವಾಚ್'ನ್ನೂ ಖರೀದಿಸಿದ್ದಾನೆ. ಚೆನ್ನೈ, ಕೊಯಮತ್ತೂರು ಮೂಲದ ಬ್ರೋಕರ್​ಗಳಿಂದ ಕಾರು ಖರೀದಿಸಿಡುವ ಈತ ಒಟ್ಟು 35 ಲಕ್ಷದ ಶಾಪಿಂಗ್ ನಡೆಸಿದ್ದಾನೆ ಅಚ್ಚರಿ ಎಂದರೆ ಈ ಶಾಪಿಂಗ್​ ನಡೆದದ್ದು ಪೊಲೀಸರ ಸಮ್ಮುಖದಲ್ಲಿ..!.

ಇದಕ್ಕಿಂತಲೂ ಹೆಚ್ಚು ದಿಗ್ಭ್ರಮೆ ಮೂಡಿಸುವ ಸುದ್ದಿಯೆಂದರೆ ವಿಚಾರಣೆಯ ಮರುದಿನವೇ ಅಂದರೆ ಅಕ್ಟೋಬರ್​ 10, 11 ರಂದು ಗೆಳತಿ ಲೀನಾ ಜತೆ ಐಷಾರಾಮಿ ಸರ್ವಿಸ್ಡ್​ ಅಪಾರ್ಟ್​​ಮೆಂಟ್'ನಲ್ಲಿ  ಮಸ್ತ್ ಮಜಾ ನಡೆಸಿರುವುದು. ಈತನಿಗೆ ಮಜಾ ಮಾಡಲು ಖುದ್ದು ಪೊಲೀಸರೇ ಆತನ ಪ್ರೇಯಸಿಯನ್ನು ಆತನ ರೂಂಗೆ ಕಳುಹಿಸಿಕೊಟ್ಟಿದ್ದಲ್ಲದೆ, ಭರ್ಜರಿ ಸೆಕ್ಯುರಿಟಿ ಕೂಡಾ ನೀಡಿದ್ದಾರೆ.  

ಪೊಲೀಸರ ಲಂಚಬಾಕತನಕ್ಕೆ ಸಾಕ್ಷಿ ಯಾಗಿ, ವಿಚಾರಣಾಧೀನ ಕೈದಿ ಸುಕೇಶ್ ಚಂದ್ರಶೇಖರನ್ ಐಶಾರಾಮಿ ಜೀವನ ನಡೆಸುತ್ತಿರುವ ಸಿಸಿಟಿವಿ ದೃಶ್ಯಾವಳಿಗಳು ಸುವರ್ಣ ನ್ಯೂಸ್'ಗೆ ಲಭ್ಯವಾಗಿವೆ. ಈ ಮೂಲಕ ಸುಕೇಶ್ ಅಸಲಿಯತ್ತು ಹೊರಬಿದ್ದಿದೆ.  ಪ್ರಕರಣ ಕೇಂದ್ರ ಗೃಹ ಇಲಾಖೆ ಹಾಗೂ ಪೊಲೀಸ್ ಇಲಾಖೆ ತಲೆತಗ್ಗಿಸುವಂತೆ ಮಾಡಿದೆ. ಹೀಗಿದ್ದರೂ ತಿಹಾರ್ ಜೈಲಿನಲ್ಲಿರಬೇಕಾದ ಆರೋಪಿಗೆ ಇಷ್ಟು ಹಣ ನೀಡಿದವರು ಯಾರು..? ಆತನಿಗೆ ಹಣ ಎಲ್ಲಿಂದ ಬಂತು ಎಂಬ ಪ್ರಶ್ನೆಗೆ ಉತ್ತರ ಇನ್ನಷ್ಟೇ ಸಿಗಬೇಕಿದೆ.

click me!