
ಬೆಂಗಳೂರು (ಜ.08): ಓದಿದ್ದು ಎಸ್ಸೆಸ್ಸೆಲ್ಸಿವರೆಗೆ. ಆದರೂ ಒಂದೇ ವರ್ಷದಲ್ಲಿ 7 ನೌಕರಿಗೆ ಅರ್ಹತೆ ಲಭಿಸಿತು. ಆಯ್ಕೆ ಮಾಡಿಕೊಂಡಿದ್ದು ಮಾತ್ರ ಪಿಎಸ್‌ಐ ಹುದ್ದೆ! ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕು ಮುದೂರ ಗ್ರಾಮದ ಕಾನ ಗೌಡ ಪಾಟೀಲ ಎಂಬುವರ ಪುತ್ರ ಪ್ರಶಾಂತ ಪಾಟೀಲ (38) ಎಂಬುವರು 15 ದಿನಗಳ ಹಿಂದಷ್ಟೇ ಪ್ರೊಬೇಷನರಿ ಅವಧಿ ಪೂರೈಸಿ ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ಎಸ್‌ಐ ಆಗಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ.
ಪ್ರಶಾಂತ 1985ರಿಂದ 1996ರವರೆಗೆ ಮುದ್ದೇಬಿ ಹಾಳದ ಎಂಜಿಎಂಕೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪೂರೈಸಿ ಮೈಸೂರಿನ ಎನ್‌ಟಿಟಿಎಫ್‌ನಲ್ಲಿ ಪಿಯುಸಿಗೆ ಪ್ರವೇಶ ಪಡೆದು 3ನೇ ಸೆಮ್‌ನಲ್ಲಿದ್ದಾಗ ಭಾರತೀಯ ನೌಕಾ ಸೇನೆಯ ಟೆಕ್ನಿಕಲ್ ವಿಭಾಗಕ್ಕೆ 1999ರಲ್ಲಿ ಸೇರಿದರು. 15 ವರ್ಷ ಕಾಲ ನೌಕಾ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರಿಂದ ಸೇನೆಯು ಅವರಿಗೆ ಬಿಎ ಆನರ್ಸ್ ಗೌರವ ಪದವಿ ದಯಪಾಲಿಸಿತು.
ಪಿಎಸ್‌ಐ ಹುದ್ದೆಗೆ ನಿಗದಿಪಡಿಸಿದ್ದ ಪದವಿ ದೊರಕಿದ್ದರಿಂದ 2014ರಲ್ಲಿ ನಿವೃತ್ತಿ ನಂತರ ಒಂದು ವರ್ಷ ನಿರಂತರ ಅಧ್ಯಯನ ನಡೆಸಿ, ಸಿಂಡಿ ಕೇಟ್ ಬ್ಯಾಂಕ್, ಗ್ರಾಮೀಣ ಬ್ಯಾಂಕ್, ಇಸ್ರೋ, ಜೀವವಿಮಾ ಅಧಿಕಾರಿ, ಪಿಎಸ್‌ಐ ನೌಕರಿಗೆ ಅರ್ಹತೆ ಗಳಿಸಿದರು. ಕೊನೆಗೆ ತಮ್ಮ ಬಾಲ್ಯದ ಕನಸಿನಂತೆ ಪಿಎಸ್‌ಐ ಹುದ್ದೆಯನ್ನು ಆಯ್ಕೆ ಮಾಡಿಕೊಂಡರು.
ಬಾಲ್ಯದಿಂದಲೂ ಪೊಲೀಸ್ ಅಧಿಕಾರಿ ಯಾಗುವ ಆಸೆ ಇತ್ತು. ಶಾಲೆಯಲ್ಲಿ ಫ್ಯಾನ್ಸಿ ಡ್ರೆಸ್ ಸ್ಪರ್ಧೆಯಲ್ಲಿ ಪೊಲೀಸ್ ಅಧಿಕಾರಿ ಪಾತ್ರವನ್ನೇ ಮಾಡುತ್ತಿದ್ದೆ. 2015ರಲ್ಲಿ 7 ಪರೀಕ್ಷೆ ಎದುರಿಸಿ ಎಲ್ಲದರಲ್ಲೂ ಅರ್ಹತೆ ಗಳಿಸಿದೆ. ಆದರೆ ಕಠಿಣ ಎನ್ನಿಸಿದರೂ ಪಿಎಸ್‌ಐ ಹುದ್ದೆಯನ್ನೇ ಆಯ್ಕೆ ಮಾಡಿಕೊಂಡೆ. ಇದು ಹುದ್ದೆ ಅಥವಾ ನೌಕರಿ ಅಲ್ಲ, ಸೇವೆ. ಶೋಷಣೆಗೊಳಗಾದ ಬಡವರಿಗೆ ನ್ಯಾಯ ಒದಗಿಸಲು ಪಿಎಸ್‌ಐ ಆದೆ ಎಂದು ಹೇಳುತ್ತಾರೆ ಪ್ರಶಾಂತ ಪಾಟೀಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.