ಉಬರ್ ಟ್ಯಾಕ್ಸಿ ಚಾಲಕನ ಬಳಿ 7 ಕೋಟಿ

By Suvarna Web DeskFirst Published Dec 23, 2016, 7:08 PM IST
Highlights

ನೋಟುಅಮಾನ್ಯಬಳಿಕಬ್ಯಾಂಕ್ಗಳಮೇಲೆಆದಾಯತೆರಿಗೆಇಲಾಖೆದಾಳಿಹೆಚ್ಚಾಗಿದೆ. ಇದುವರೆಗೆಖಾಸಗಿರಂಗದಆ್ಯಕ್ಸಿಸ್ಬ್ಯಾಂಕ್ಮೇಲೆನಡೆಯುತ್ತಿದ್ದದಾಳಿಇದೀಗಖಾಸಗಿರಂಗದಹೊಸಬ್ಯಾಂಕ್ಕೊಟಕ್ಮಹೀಂದ್ರಾಬ್ಯಾಂಕ್ಮೇಲೂನಡೆದಿದೆ. ನವದೆಹಲಿಯಲ್ಲಿರುವಕೆ.ಜಿ.ಮಾರ್ಗ್ನಲ್ಲಿರುವಶಾಖೆಯಮೇಲೆಶುಕ್ರವಾರಆದಾಯತೆರಿಗೆಇಲಾಖೆನಕಲಿಖಾತೆಗಳುಇವೆಎಂಬಶಂಕೆಯಆಧಾರದಲ್ಲಿದಾಳಿನಡೆಸಲಾಗಿದೆ.

ನವದೆಹಲಿ(ಡಿ.24): ಉಬರ್ ಟ್ಯಾಕ್ಸಿ ಚಾಲಕನ ಖಾತೆಯಲ್ಲಿ 7 ಕೋಟಿ ಇರುವುದನ್ನು ಆದಾಯ ತೆರಿಗೆ ಇಲಾಖೆ ಅಕಾರಿಗಳು ಪತ್ತೆ ಹಚ್ಚಿದ್ದಾರೆ. ಹೈದರಾಬಾದ್‌ನಲ್ಲಿ ಈ ಬೆಳವಣಿಗೆ ನಡೆದಿದೆ ಎಂದು ‘ದ ಟೈಮ್ಸ್ ಆ್ ಇಂಡಿಯಾ’ ವರದಿ ಮಾಡಿದೆ. ನವೆಂಬರ್ 2ನೇ ವಾರದಿಂದ ಚಾಲಕನ ಖಾತೆಯಲ್ಲಿ ಹಣ ಸಂಗ್ರಹವಾಗುತ್ತಿರುವ ಬಗ್ಗೆ ಆದಾಯ ತೆರಿಗೆ ಅಕಾರಿಗಳು ಪತ್ತೆ ಹಚ್ಚಿದ್ದರು. ಹಣ ಸಂಗ್ರಹವಾದ ಬಳಿಕ ಹಂತ ಹಂತವಾಗಿ ಚಿನ್ನಾಭರಣ ವ್ಯಾಪಾರಿಯೊಬ್ಬರಿಗೆ ವರ್ಗಾವಣೆಯಾಗುತ್ತಿತ್ತು. ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಹಣ ಹಾಕಿದ ವ್ಯಕ್ತಿಗಳಿಬ್ಬರನ್ನು ವಶಕ್ಕೆ ಪಡೆದಾಗ ಮಾಹಿತಿ ಬಹಿರಂಗವಾಯಿತು. ಇದೀಗ ಅವರು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿಯಲ್ಲಿ 7 ಕೋಟಿಗೆ ತೆರಿಗೆ ನೀಡಲು ಒಪ್ಪಿಕೊಂಡಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ಹೇಳಿವೆ.

ನೋಟು ಅಮಾನ್ಯ ಬಳಿಕ ಬ್ಯಾಂಕ್‌ಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಹೆಚ್ಚಾಗಿದೆ. ಇದುವರೆಗೆ ಖಾಸಗಿ ರಂಗದ ಆ್ಯಕ್ಸಿಸ್ ಬ್ಯಾಂಕ್ ಮೇಲೆ ನಡೆಯುತ್ತಿದ್ದ ದಾಳಿ ಇದೀಗ ಖಾಸಗಿ ರಂಗದ ಹೊಸ ಬ್ಯಾಂಕ್ ಕೊಟಕ್ ಮಹೀಂದ್ರಾ ಬ್ಯಾಂಕ್ ಮೇಲೂ ನಡೆದಿದೆ. ನವದೆಹಲಿಯಲ್ಲಿರುವ ಕೆ.ಜಿ.ಮಾರ್ಗ್‌ನಲ್ಲಿರುವ ಶಾಖೆಯ ಮೇಲೆ ಶುಕ್ರವಾರ ಆದಾಯ ತೆರಿಗೆ ಇಲಾಖೆ ನಕಲಿ ಖಾತೆಗಳು ಇವೆ ಎಂಬ ಶಂಕೆಯ ಆಧಾರದಲ್ಲಿ ದಾಳಿ ನಡೆಸಲಾಗಿದೆ. ನಿಮ್ಮ ಗ್ರಾಹಕರನ್ನು ಅರಿಯಿರಿ (ಕೆವೈಸಿ) ಾರಂ ಸಲ್ಲಿಕೆಯಲ್ಲಿ ನಿಯಮ ಪಾಲನೆ ಮಾಡಲಾಗಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ. ಆದರೆ ಬ್ಯಾಂಕ್ ವಕ್ತಾರ ರೋಹಿತ್ ರಾವ್ ಮಾತನಾಡಿ ಬ್ಯಾಂಕ್ ವತಿಯಿಂದ ಕೆವೈಸಿ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಅಕಾರಿಗಳು ಬ್ಯಾಂಕ್ ಮ್ಯಾನೇಜರ್ ಅವರನ್ನೂ ಪ್ರಶ್ನಿಸಿದ್ದಾರೆ. ಇದರ ಜತೆಗೆ ನಕಲಿ ಖಾತೆಗಳಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಸಿದಂತೆ ಇಬ್ಬರನ್ನು ಬಂಸಲಾಗಿದೆ.

ಆದರೆ ‘ಇಂಡಿಯಾ ಟುಡೇ’ ವರದಿ ಮಾಡಿರುವ ಪ್ರಕಾರ ಆ್ಯಕ್ಸಿಸ್ ಬ್ಯಾಂಕ್‌ನಲ್ಲಿರುವ ಖಾತೆಗಳು ಮತ್ತು ಕೊಟಕ್ ಮಹೀಂದ್ರಾ ಬ್ಯಾಂಕ್ ಶಾಖೆಯಲ್ಲಿರುವ ಖಾತೆಗಳಿಗೂ ಹೊಂದಾಣಿಕೆ ಇದೆ. ರಾಕಾ ಜೇಮ್ಸ್ ಎಂಬ ಕಂಪನಿ ಹೆಸರಲ್ಲಿ ಪತ್ತೆಯಾಗಿರುವ ಖಾತೆಯಲ್ಲಿ 36.4 ಕೋಟಿ ಠೇವಣಿ ಇರುವುದು ಪತ್ತೆಯಾಗಿದೆ. ದಾಳಿ ವೇಳೆ ಒಟ್ಟು ಎಂಟು ನಕಲಿ ಖಾತೆ ಇರುವುದು ಪತ್ತೆಯಾಗಿದೆ.

ಪಶ್ಚಿಮ ಬಂಗಾಳ: ಮತ್ತೊಂದು ಬೆಳವಣಿಗೆಯಲ್ಲಿ ಜಾರಿ ನಿರ್ದೇಶನಾಲಯ ಪಶ್ಚಿಮ ಬಂಗಾಳದಲ್ಲಿ ಸಹಕಾರ ಬ್ಯಾಂಕ್ ಮತ್ತು ಜ್ಯುವೆಲ್ಲರ್ಸ್‌ಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಶೋಧ ಕಾರ್ಯಾಚರಣೆ ನಡೆಸಿದೆ. ಹೂಗ್ಲಿ ಜಿಲ್ಲೆಯಲ್ಲಿ ಜಾರಿ ನಿರ್ದೇಶನಾಲಯದ ನಾಲ್ವರು ಚಿನ್ಸುರಾ ಕೇಂದ್ರ ಸಹಕಾರ ಬ್ಯಾಂಕ್‌ಗೆ ತೆರಳಿ ಪರಿಶೀಲನೆ ನಡೆಸಿದೆ. ಬ್ಯಾಂಕ್‌ನಲ್ಲಿರುವ ಕೆಲವು ಖಾತೆದಾರರ ವಿವರಗಳನ್ನು ನೀಡುವಂತೆ ಇ.ಡಿ.ಅಕಾರಿಗಳು ಆದೇಶಿಸಿದ್ದಾರೆ. ಹೌರಾ, ನಾಡಿಯಾ ಜಿಲ್ಲೆಗಳಲ್ಲೂ ಶೋಧ, ಪರಿಶೀಲನೆ ನಡೆಸಲಾಗಿದೆ.

600 ಖಾತೆಗಳ ಮೇಲೆ ನಿಗಾ: ಮತ್ತೊಂದು ಬೆಳವಣಿಗೆಯಲ್ಲಿ ಬಿಹಾರದಲ್ಲಿ ಜನಧನ್ ಯೋಜನೆಯಡಿ ತೆರೆಯಲಾಗಿರುವ 600 ಖಾತೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಕಣ್ಣಿಟ್ಟಿದೆ. ನೋಟು ಅಮಾನ್ಯಗೊಂಡ ಬಳಿಕ ಈ ಖಾತೆಗಳಲ್ಲಿ ಒಟ್ಟು 10.8 ಕೋಟಿ ಸಂಗ್ರಹವಾಗಿದೆ.

ಆರ್‌ಬಿಐ ಕಂಟೈನರ್ ಮೇಲೆ ದಂಡ

ಛತ್ತೀಸ್‌ಗಡದ ಭಿಲೈನಿಂದ ನಾಗ್ಪುರಕ್ಕೆ ಹಳೆಯ ಮುಖಬೆಲೆಯ ನೋಟುಗಳನ್ನು ಸಾಗಿಸುತ್ತಿದ್ದ ಆರ್‌ಬಿಐ ಕಂಟೈನರ್‌ಗೆ ದಂಡ ವಿಸಲಾಗಿದೆ. ಮಿತಿಗಿಂತ ಹೆಚ್ಚು ಭಾರ ಹೊಂದಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಗೊಂಡಿಯಾ ಜಿಲ್ಲೆಯಲ್ಲಿ ಸಾರಿಗೆ ಇಲಾಖೆ ಅಕಾರಿಗಳು ದಂಡ ವಿಸಿದ್ದಾರೆ. ಒಟ್ಟು 30 ಸಾವಿರವನ್ನು ಚಾಲಕನಿಂದ ವಸೂಲು ಮಾಡಲಾಗಿದೆ. ಕಂಟೈನರ್‌ನಲ್ಲಿ ಐದು ಟನ್ ನೋಟುಗಳನ್ನು ಸಾಗಿಸಲಾಗುತ್ತಿತ್ತು.

500, 1 ಸಾವಿರ ವೌಲ್ಯದ ಹಳೆಯ ಮುಖ ಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದ್ದು 8 ಲಕ್ಷ ಕೋಟಿಯ ಹಗರಣ. ದೇಶದ ಕೈಗಾರಿಕೋದ್ಯಮಿಗಳ 1.14 ಲಕ್ಷ ಕೋಟಿ ಸಾಲ ಮನ್ನಾ ಮಾಡಲೆಂದೇ ಅದನ್ನು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.

ಅರವಿಂದ ಕೇಜ್ರಿವಾಲ್, ದೆಹಲಿ ಮುಖ್ಯಮಂತ್ರಿ

click me!