ಫೇಕ್ ಎನ್'ಕೌಂಟರ್ : 7 ಸೇನಾ ಸಿಬ್ಬಂದಿಗೆ ಜೀವಾವಧಿ ಶಿಕ್ಷೆ

By Web DeskFirst Published Oct 15, 2018, 4:42 PM IST
Highlights

1994ರಲ್ಲಿ ಎಎಎಸ್'ಯು ಸಂಘಟನೆಯ ಐವರು ವಿದ್ಯಾರ್ಥಿಗಳನ್ನು ಈ 7 ಸೇನಾ ಸಿಬ್ಬಂದಿ ಉಲ್ಫಾ ಉಗ್ರರೆಂದು ಅಸ್ಸಾಮಿನ ತಿನ್ ಸುಕಿಯಾ ಜಿಲ್ಲೆಯ ಪ್ರದೇಶವೊಂದರಲ್ಲಿ ಎನ್ ಕೌಂಟರ್ ಮಾಡಿದ್ದರು.

ನವದೆಹಲಿ[ಅ.15]: ಅಸ್ಸಾಂನಲ್ಲಿ 24 ವರ್ಷದ ಹಿಂದೆ ಐವರು ವಿದ್ಯಾರ್ಥಿಗಳನ್ನು ಫೇಕ್ ಎನ್'ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಒರ್ವ ಮೇಜರ್ ಜನರಲ್ ಒಳಗೊಂಡಂತೆ 7 ಸೇನಾ ಸಿಬ್ಬಂದಿಗೆ ಸೇನಾ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

1994ರಲ್ಲಿ ಎಎಎಸ್'ಯು ಸಂಘಟನೆಯ ಐವರು ವಿದ್ಯಾರ್ಥಿಗಳನ್ನು ಈ 7 ಸೇನಾ ಸಿಬ್ಬಂದಿ ಉಲ್ಫಾ ಉಗ್ರರೆಂದು ಅಸ್ಸಾಮಿನ ತಿನ್ ಸುಕಿಯಾ ಜಿಲ್ಲೆಯ ಪ್ರದೇಶವೊಂದರಲ್ಲಿ ಎನ್ ಕೌಂಟರ್ ಮಾಡಿದ್ದರು. ಅಸ್ಸಾಮಿನ ಮಾಜಿ ಸಚಿವ ಹಾಗೂ ಬಿಜೆಪಿಯ ನಾಯಕರಾದ ಜಗದೀಶ್ ಬುಯಾನ್ ಎಂಬುವವರು ಗುವಾಹಾಟಿ ಕೋರ್ಟಿನಲ್ಲಿ 1994ರಲ್ಲಿಯೇ ಪ್ರಕರಣ ದಾಖಲಿಸಿದ್ದರು.

ಸಿಬಿಐ ಕೂಡ ತನಿಖೆ ನಡೆಸಿ ವಿದ್ಯಾರ್ಥಿಗಳನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ ಎಂದು ಆರೋಪ ಪಟ್ಟಿಯನ್ನು ಕೋರ್ಟ್ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಪ್ರಕರಣದ ಸಂಪೂರ್ಣ ವಿಚಾರಣೆ ನಡೆಸಿದ ಸೇನಾ ನ್ಯಾಯಾಲಯ ಮೇಜರ್ ಜನರಲ್ ಎ.ಕೆ.ಲಾಲ್, ಕರ್ನಲ್'ಗಳಾದ ಥಾಮಸ್ ಮ್ಯಾಥ್ಯೂ, ಸಿಬಿರೆನ್ ಕ್ಯಾಪ್ಟನ್'ಗಳಾದ ದಿಲೀಪ್ ಸಿಂಗ್, ಜಗದೋ ಸಿಂಗ್, ನಾಯಕ್ ಹುದ್ದೆಯಲ್ಲಿರುವ ಅಲ್ಬಿಂದರ್ ಸಿಂಗ್ ಹಾಗೂ ಶಿವೇಂದರ್ ಸಿಂಗ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 

click me!