200 ಮೌಲ್ವಿಗಳು ಸೇರಿ 600 ವಿದೇಶಿಯರಿಗೆ ಲಂಕಾ ಗೇಟ್‌ಪಾಸ್‌

By Web DeskFirst Published May 6, 2019, 9:21 AM IST
Highlights

200 ಮೌಲ್ವಿಗಳು ಸೇರಿ 600 ವಿದೇಶಿಯರಿಗೆ ಲಂಕಾ ಗೇಟ್‌ಪಾಸ್‌| ಸರಣಿ ಬಾಂಬ್‌ ಸ್ಪೋಟದ ನಂತರದಲ್ಲಿ ದ್ವೀಪರಾಷ್ಟ್ರ ಹಲವರು ಹೊರಗೆ

ಕೋಲಂಬೊ[ಮೇ.06]: ಈಸ್ಟರ್‌ ಭಾನುವಾರದ ಸರಣಿ ಬಾಂಬ್‌ ಸ್ಪೋಟದ ನಂತರದಲ್ಲಿ ದ್ವೀಪರಾಷ್ಟ್ರ ಶ್ರೀಲಂಕಾದಿಂದ 200 ಮುಸ್ಲಿಂ ಮೌಲ್ವಿಗಳು ಸೇರಿದಂತೆ ಒಟ್ಟು 600 ವಿದೇಶಿಗರನ್ನು ಹೊರಹಾರಲಾಗಿದೆ.

ಈ ಕುರಿತು ಗೃಹ ಸಚಿವ ವಜ್ರ ಅಭ್ಯವರ್ಧನೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಈ ಎಲ್ಲ ವಿದೇಶಿಗರು ಕಾನೂನಾತ್ಮಕವಾಗಿಯೇ ದೇಶಕ್ಕೆ ಬಂದಿದ್ದಾರೆ. ಆದರೆ ಭದ್ರತಾ ಕಾರಣದಿಂದ ಹಾಗೂ ಅವರ ವೀಸಾ ಅವಧಿ ಮುಗಿದಿದ್ದು, ಅದಕ್ಕಾಗಿ ದಂಡ ವಿಧಿಸಿ ಅವರನ್ನು ದೇಶದಿಂದ ಹೊರಹಾಕಲಾಗಿದೆ.

ವೀಸಾ ವ್ಯವಸ್ಥೆಯನ್ನು ಮತ್ತಷ್ಟು ಕಠಿಣಗೊಳಿಸಿದ್ದು ಧಾರ್ಮಿಕ ಶಿಕ್ಷಕರಿಗೆ ವೀಸಾ ನಿರ್ಭಂಧಿಸಲಾಗಿದೆ. ಇನ್ನು ಹೊರಹಾಕಲ್ಪಟ್ಟಮೌಲ್ವಿಗಳು ಬಾಂಗ್ಲಾ, ಭಾರತ, ಮಾಲ್ಡೀವ್‌್ಸ ಮತ್ತು ಪಾಕಿಸ್ತಾನ ದೇಶಕ್ಕೆ ಸೇರಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

click me!