ರಷ್ಯಾ ವಿಮಾನದಲ್ಲಿ ಬೆಂಕಿ: 41 ಪ್ರಯಾಣಿಕರು ಸಾವು

Published : May 06, 2019, 09:13 AM ISTUpdated : May 06, 2019, 09:16 AM IST
ರಷ್ಯಾ ವಿಮಾನದಲ್ಲಿ ಬೆಂಕಿ: 41 ಪ್ರಯಾಣಿಕರು ಸಾವು

ಸಾರಾಂಶ

ರಷ್ಯಾ ವಿಮಾನದಲ್ಲಿ ಬೆಂಕಿ: 41 ಪ್ರಯಾಣಿಕರು ಸಾವು| ಅನೇಕರಿಗೆ ಗಂಭೀರ ಗಾಯ

ಮಾಸ್ಕೋ[ಮೇ.06]: ರಷ್ಯಾದ ಪ್ರಯಾಣಿಕ ವಿಮಾನವೊಂದು ಹಾರಾಟ ಕೈಗೊಂಡಿರುವಾಗಲೇ ಬೆಂಕಿ ಕಾಣಿಸಿಕೊಂಡಿದ್ದು, ಮಾಸ್ಕೋ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಈ ಘಟನೆಯಲ್ಲಿ 41 ಮಂದಿ ಸಾವಿಗೀಡಾಗಿದ್ದಾರೆ.

78 ಮಂದಿ ಪ್ರಯಾಣಿಕರಿದ್ದ ರಷ್ಯಾದ ಸುಖೋಯ್‌ ಸೂಪರ್‌ ಜೆಟ್‌ ವಿಮಾನ ಮಾಸ್ಕೋದ ಶೆರ್ಮೆಟಿವೊ ವಿಮಾನ ನಿಲ್ದಾಣದಿಂದ ಭಾನುವಾರ ಹಾರಾಟ ಕೈಗೊಂಡ ಕೆಲವೇ ಹೊತ್ತಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವಿಮಾನದ ಹಿಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಗೊತ್ತಾಗುತ್ತಿದ್ದಂತೆ ತುರ್ತು ಭೂಸ್ಪರ್ಶ ಮಾಡಿದೆ. ಕೂಡಲೇ ಹಲವು ಮಂದಿ ಪ್ರಯಾಣಿಕರು ತುರ್ತು ದ್ವಾರದ ಮೂಲಕ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ.

ಅಷ್ಟರೊಳಗಾಗಲೇ ಬೆಂಕಿ ಇಡೀ ವಿಮಾನಕ್ಕೆ ವ್ಯಾಪಿಸಿದ್ದು, ಗಗನಸಖಿ ಸೇರಿ 13 ಮಂದಿ ಸಾವಿಗೀಡಾಗಿದ್ದಾರೆ ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ. ವಿಮಾನದಲ್ಲಿ ಇಲೆಕ್ಟ್ರಿಕಲ್‌ ಉಪಕರಣಗಳಲ್ಲಿ ಉಂಟಾದ ದೋಷದಿಂದ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ಈ ನಿಟ್ಟಿನಲ್ಲಿ ತನಿಖೆ ಕೈಗೊಳ್ಳಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮತಾಂತರವಾದ ವ್ಯಕ್ತಿ ಸಮಾಧಿ ವಿಚಾರಕ್ಕೆ ಗಲಾಟೆ: ಮತಾಂತರಿಗಳ ಬೆನ್ನಟ್ಟಿ ಚರ್ಚ್‌ಗೆ ಬೆಂಕಿ ಹಚ್ಚಿದ ಬುಡಕಟ್ಟು ಜನ
ಟೇಕಾಫ್‌ ಆದ ಕೆಲವೇ ಕ್ಷಣದಲ್ಲಿ ರನ್‌ವೇಗೆ ಬಿದ್ದು ಪತನವಾದ ವಿಮಾನ, ಎಲ್ಲಾ ಪ್ರಯಾಣಿಕರ ಸಾವು!