60% ಎಂಜಿನಿಯರಿಂಗ್ ಪದವೀಧರರು ನಿರುದ್ಯೋಗಿಗಳು..!

By Suvarna Web DeskFirst Published Mar 18, 2017, 4:47 PM IST
Highlights

ಪ್ರತಿ ವರ್ಷ ತಾಂತ್ರಿಕ ಶಿಕ್ಷಣ (ಎಂಜಿನಿಯರಿಂಗ್) ಕೋರ್ಸುಗಳನ್ನು ಮುಗಿಸಿ ಹೊರಬರುವ 8 ಲಕ್ಷ ಎಂಜಿನಿಯರಿಂಗ್ ಪದವೀಧರರಲ್ಲಿ ಶೇ.60ರಷ್ಟು ಜನ ನಿರುದ್ಯೋಗಿಗಳಾಗಿಯೇ ಉಳಿಯುತ್ತಾರೆ.

ನವದೆಹಲಿ(ಮಾ.18): ಪ್ರತಿ ವರ್ಷ ತಾಂತ್ರಿಕ ಶಿಕ್ಷಣ (ಎಂಜಿನಿಯರಿಂಗ್) ಕೋರ್ಸುಗಳನ್ನು ಮುಗಿಸಿ ಹೊರಬರುವ 8 ಲಕ್ಷ ಎಂಜಿನಿಯರಿಂಗ್ ಪದವೀಧರರಲ್ಲಿ ಶೇ.60ರಷ್ಟು ಜನ ನಿರುದ್ಯೋಗಿಗಳಾಗಿಯೇ ಉಳಿಯುತ್ತಾರೆ. ಹೀಗೆಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ) ನೀಡಿದ ಅಂಕಿ ಅಂಶಗಳೇ ಹೇಳಿವೆ.

ಇದರಿಂದಾಗಿ ಪ್ರತಿ ವರ್ಷ 20 ಲಕ್ಷ ಮಾನವ ದಿನಗಳು ನಷ್ಟವಾಗುತ್ತವೆ ಎಂದು ಎಐಸಿಟಿಇ ಕಳವಳ ವ್ಯಕ್ತಪಡಿಸಿದೆ. ಇದೇ ವೇಳೆ, 3200 ಶಿಕ್ಷಣ ಸಂಸ್ಥೆಗಳಲ್ಲಿ ಶೇ.15 ಎಂಜಿನಿಯರಿಂಗ್ ಕೋರ್ಸುಗಳು ಮಾತ್ರ ನ್ಯಾಷನಲ್ ಬೋರ್ಡ್ ಆಫ್ ಅಕ್ರೆಡಿಟೇಶನ್‌'ನಿಂದ ನೋಂದಾಯಿತವಾಗಿವೆ. ಕೇವಲ ಶೇ.1ರಷ್ಟು ವಿದ್ಯಾರ್ಥಿಗಳು ಮಾತ್ರ ಬೇಸಿಗೆ ತರಬೇತಿಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಅದು ತಿಳಿಸಿದೆ.

Latest Videos

click me!