
ಮುಂಬೈ[ಡಿ.18]: ಮುಂಬೈನ ಅಂಧೇರಿ ಉಪನಗರದಲ್ಲಿರುವ ಇಐಸ್‌ಐಸಿ ಕಾಮಗಾರ್ ಸರ್ಕಾರಿ ಆಸ್ಪತ್ರೆಗೆ ಸೋಮವಾರ ಸಂಜೆ ಬೆಂಕಿ ಬಿದ್ದ ಪರಿಣಾಮ 6 ತಿಂಗಳ ಮಗು ಸೇರಿದಂತೆ 8 ಸಾವನ್ನಪ್ಪಿದ್ದಾರೆ. 140 ಮಂದಿ ಗಾಯಗೊಂಡಿದ್ದು, 28 ಮಂದಿ ಗಂಭೀರ ಗಾಯಗಳಾಗಿರುವ ದಾರುಣ ಘಟನೆ ನಡೆದಿದೆ.
ಬೆಂಕಿ ಬಿದ್ದಾಗ ಆಸ್ಪತ್ರೆಯಲ್ಲಿ ಅನೇಕ ಸಂದರ್ಶಕರು, ರೋಗಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿ ಸೇರಿದಂತೆ 108 ಮಂದಿ ಸಿಲುಕಿದರು. ಆಗ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, 100ಕ್ಕೂ ಹೆಚ್ಚು ಮಂದಿಯನ್ನು ಏಣಿ ಬಳಸಿ ರಕ್ಷಿಸಿದ್ದು, ಅವರಲ್ಲಿ ಅನೇಕರಿಗೆ ಸುಟ್ಟಗಾಯಗಳಾಗಿವೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಆದರೆ ಎಂಟು ಜನ ಅಸುನೀಗಿದ್ದಾರೆ ಎಂದು ಮಹಾನಗರಪಾಲಿಕೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬೆಂಕಿ ನಿಯಂತ್ರಿಸಲಾಗಿದ್ದು, ಮತ್ತಾರಾದರೂ ಸಿಲುಕಿದ್ದಾರಾ ಎಂಬುದರ ಶೋಧ ಕಾರ್ಯಾಚರಣೆ ತಡರಾತ್ರಿಯೂ ಮುಂದುವರಿದಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ