ರಾಜ್ಯದಲ್ಲಿ ವರುಣನ ಆರ್ಭಟ : ಸಾವು, ನೋವು

By Web DeskFirst Published Sep 26, 2018, 7:14 AM IST
Highlights

ಉತ್ತರ ಕರ್ನಾಟಕ ಮತ್ತು ಮಲೆನಾಡಿನ ಕೆಲಭಾಗಗಳಲ್ಲಿ ಭಾರಿ ಮಳೆಯಾಗಿದ್ದು ಸಿಡಿಲಿನ ಹೊಡೆತಕ್ಕೆ ಇಬ್ಬರು ಮಹಿಳೆ ಯರೂ ಸೇರಿ ಒಟ್ಟು 6 ಮಂದಿ ಮೃತಪಟ್ಟು 8 ಮಂದಿ ಗಾಯಗೊಂಡಿರುವ ಪ್ರತ್ಯೇಕ ಘಟನೆಗಳು ವರದಿಯಾಗಿವೆ. 

ಬೆಂಗಳೂರು :  ಕಳೆದೆರಡು ದಿನಗಳಿಂದ ರಾಜ್ಯದ ಕೆಲವೆಡೆ ಅಬ್ಬರಿಸುತ್ತಿರುವ ವರುಣನ ಪ್ರಭಾವ ಮಂಗಳವಾರವೂ ಮುಂದುವರಿದಿದೆ. ಉತ್ತರ ಕರ್ನಾಟಕ ಮತ್ತು ಮಲೆನಾಡಿನ ಕೆಲಭಾಗಗಳಲ್ಲಿ ಭಾರಿ ಮಳೆಯಾಗಿದ್ದು ಸಿಡಿಲಿನ ಹೊಡೆತಕ್ಕೆ ಇಬ್ಬರು ಮಹಿಳೆ ಯರೂ ಸೇರಿ ಒಟ್ಟು 6 ಮಂದಿ ಮೃತಪಟ್ಟು 8 ಮಂದಿ ಗಾಯಗೊಂಡಿರುವ ಪ್ರತ್ಯೇಕ ಘಟನೆಗಳು ವರದಿಯಾಗಿವೆ. ನಾಲ್ವರು ರೈತರು ಹೊಲದಲ್ಲಿ ಕೆಲಸ ಮಾಡುತ್ತಿರುವ ವೇಳೆ ಮತ್ತು ಇಬ್ಬರು ಕುರಿ ಕಾಯುತ್ತಿದ್ದ ಸಂದರ್ಭದಲ್ಲಿ ಸಿಡಿಲು ಬಡಿದು ಸಾವಿಗೀಡಾಗಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ಒಟ್ಟು 3 ಮಂದಿ ಸಿಡಿಲಿಗೆ ಬಲಿಯಾಗಿದ್ದು ಬಸವನ ಬಾಗೇವಾಡಿ ತಾಲೂಕು ಕಾನ್ನಾಳ ಗ್ರಾಮ ದಲ್ಲಿ ಆಡು ಮೇಯಿಸುತ್ತಿದ್ದ ಕುರಿ ಗಾಹಿಗ ಳಾದ ಯಲಗೂರಪ್ಪ ಮಾರುತಿ ಯರ ಝರಿ (22), ವಿಠ್ಠಲ ಗೂಳಪ್ಪ ವಡವಡಗಿ (28) ಮೃತಪಟ್ಟಿ ದ್ದಾರೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರಾದ ತಾಳಿಕೋಟೆ ತಾಲೂಕು ಸಾಸನೂರಿನ ಮಂಗಳಾ ಶಂಕರ ಗೌಡ ಜಲಪೂರ(೪೦), ಕೊಪ್ಪಳ ಜಿಲ್ಲೆ ಹಲ
ವಾಗಲಿಯ ಸುರೇಶ ಸಿದ್ದಪ್ಪ ಹಳ್ಳಿ (32), ಗದಗ ತಾಲೂಕಿನ ಮುಳಗುಂದದ ನೂರಜ ಹಾನ್ ಹುಸೇನಸಾಬ್ ಕಿಂಡ್ರಿ (34), ಧಾರವಾಡ ಜಿಲ್ಲೆಯ ಇಂಗಳಹಳ್ಳಿಯ ಅಲ್ತಾಫ್ ಹಸನ್‌ಸಾಬ್ ನಾಯ್ಕರ್ (20) ಎಂಬವರು ಮೃತಪಟ್ಟಿದ್ದಾರೆ.

ಬೆಂಗಳೂರು ತತ್ತರ: ಕಳೆದೆರಡು ದಿನಗಳಿಂದ ಬೀಳುತ್ತಿರುವ ಮಳೆಗೆ ಬೆಂಗಳೂರು ನಗರದ ಕೆಲ ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು ಜನರು ಪರದಾಡುವಂತಾಯಿತು. ಇದೇವೇಳೆ ಹೆಬ್ಬಾಳ ಸೇರಿದಂತೆ ಕೆಲ ರಸ್ತೆಗಳಲ್ಲಿ ರಸ್ತೆಯಲ್ಲಿ ನೀರು ಸಂಗ್ರಹಗೊಂಡ ಕಾರಣ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯ ನಾನಾ ಕಡೆ ಮಂಗಳವಾರ ಸಾಧಾರಣ ಮಳೆಯಾಗಿದೆ. ಬಾಗಲಕೋಟೆ ಸುತ್ತಲಿನ ಪ್ರದೇಶದಲ್ಲಿ ಆಲಿಕಲ್ಲು ಮಳೆ ಸುರಿಯಿತು. ಕೊಪ್ಪಳ ಜಿಲ್ಲೆಯ ಕೊಪ್ಪಳ, ಯಲಬುರ್ಗಾ ವ್ಯಾಪ್ತಿಯಲ್ಲಿ ಉತ್ತಮ ಮಳೆ ಸುರಿದಿದ್ದು ಕುಷ್ಟಗಿ, ಗಂಗಾವತಿ, ಕಾರಟಗಿ, ಹನುಮಸಾಗರ, ತಾವರಗೇರಾ ಸೇರಿದಂತೆ ವಿವಿಧೆಡೆ ಮೋಡ ಕವಿದ ವಾತಾವರಣವಿತ್ತು. ಗದಗ ಜಿಲ್ಲೆಯ ಗದಗ-ಬೆಟಗೇರಿ ಅವಳಿ ನಗರ, ನರಗುಂದ ಪಟ್ಟಣಗಳಲ್ಲಿ ಸುಮಾರು ಒಂದು ಗಂಟೆ ಉತ್ತಮ ಮಳೆಯಾಗಿದೆ. ಧಾರವಾಡ ಜಿಲ್ಲೆಯ ಕಲ ಘಟಗಿ, ಬಳ್ಳಾರಿ ಜಿಲ್ಲೆಯ ಕೆಲವೆಡೆ ಉತ್ತಮ ಮಳೆಯಾಗಿದೆ. 

ಹುಬ್ಬಳ್ಳಿ-ಧಾರವಾಡದಲ್ಲಿ ತುಂತುರು ಮಳೆಯಾಗಿದೆ. ಮಲೆನಾಡು ಜಿಲ್ಲೆ ಕೊಡಗಿನ ಮೂರ್ನಾಡು, ಮುಕ್ಕೊಡ್ಲು, ಹಾಕತ್ತೂರು ಸಮೀಪದ ತೊಂಬತ್ತು ಮನೆ, ಸೋಮವಾರಪೇಟೆ ಮತ್ತಿತರ ಕಡೆಗಳಲ್ಲಿ ಮಳೆಯಾಗಿದೆ. ಹಾಸನ ಜಿಲ್ಲೆಯ ಹಾಸನ ನಗರದಲ್ಲಿ ಭಾರಿ ಮಳೆಯಾದರೇ, ಮಲೆನಾಡು ತಾಲೂಕು ಗಳಾದ ಬೇಲೂರು, ಆಲೂರು ಮತ್ತು ಬೇಲೂರು ತಾಲೂಕು ಗಳಲ್ಲಿ ತುಂತುರು ಮಳೆಗೆ ಸೀಮಿತವಾಗಿತ್ತು. 

click me!