ಅಮರ್'ನಾಥ್ ಯಾತ್ರಿಕರ ಮೇಲಿನ ಉಗ್ರರ ದಾಳಿಗೆ 7 ಸಾವು

By Suvarna Web DeskFirst Published Jul 10, 2017, 10:00 PM IST
Highlights

ಭಯೋತ್ಪಾದಕರು ದಾಳಿ ನಡೆಸಿದ ವೇಳೆ ರಾತ್ರಿ 8.30ರ ಸಮಯವಾಗಿದ್ದು, ಸಿಆರ್'ಪಿಎಫ್ ಯೋಧರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

ನವದೆಹಲಿ(ಜು.10): ಜಮ್ಮು ಕಾಶ್ಮೀರದ ಅನಂತ್'ನಾಗ್ ಜಿಲ್ಲೆಯಲ್ಲಿ  ಅಮರ'ನಾಥ್ ಯಾತ್ರೆಗೆ ತೆರಳುತ್ತಿದ್ದ ಭಕ್ತರ ಮೇಲೆ ಉಗ್ರರು ದಾಳಿ ನಡೆಸಿದ ಪರಿಣಾಮ 5 ಮಂದಿ ಮೃತಪಟ್ಟು 12 ಮಂದಿ ಗಾಯಗೊಂಡಿದ್ದಾರೆ.

ಅನಂತ್'ನಾಗ್ ಜಿಲ್ಲೆಯ ಬೇತಾಂಗೂ ಹಾಗೂ ಖಾನಾಬಾಲ್ ಪ್ರದೇಶಗಳಲ್ಲಿ ಪೊಲೀಸರು ಭದ್ರತೆ ಒದಗಿಸುತ್ತಿದ್ದ ಸ್ಥಳದಲ್ಲಿ   ಶಸ್ತ್ರಸಜ್ಜಿತ ಉಗ್ರರು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಯತ್ರಿಕರಿದ್ದ ಬಸ್ ತೆರಳುತ್ತಿತ್ತು. ಇಬ್ಬರು ಯಾತ್ರಿಕರು ಸ್ಥಳದಲ್ಲೇ ಮೃತಪಟ್ಟರೆ, ಉಳಿದವರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳದಿದ್ದಾರೆ' ಎಂದು ಕಾಶ್ಮೀರದ ಐಜಿಪಿ ಮುನೀರ್ ಖಾನ್ ತಿಳಿಸಿದ್ದಾರೆ.

ಭಯೋತ್ಪಾದಕರು ದಾಳಿ ನಡೆಸಿದ ವೇಳೆ ರಾತ್ರಿ 8.30ರ ಸಮಯವಾಗಿದ್ದು, ಸಿಆರ್'ಪಿಎಫ್ ಯೋಧರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಮೂಲಗಳ ಪ್ರಕಾರ ಯಾತ್ರಿಗಳ ಬಸ್ ಗುಜರಾತ್'ನಿಂದ ತೆರಳುತ್ತಿತ್ತು. ಈ ವರ್ಷ 1.2 ಲಕ್ಷ ಮಂದಿ ಯಾತ್ರಿಗೆ ತೆರಳಲು ನೋಂದಾಯಿಸಿದ್ದಾರೆ. ಘಟನೆಯನ್ನು ಹಲವು ಗಣ್ಯರು ಖಂಡಿಸಿದ್ದು, ದಾಳಿಯ ಬಗ್ಗೆ ಕಾಶ್ಮೀರ ಸಿಎಂ ಮೆಹಬೂಬ ಮುಫ್ತಿ ಅವರೊಂದಿಗೆ ದೂರವಾಣಿ ಮೂಲಕ ಕೇಂದ್ರ ಗೃಹ ಸಚಿವ  ವಿವರಣೆ ಪಡೆದು ಭದ್ರತೆ ಹೆಚ್ಚಿಸುವಂತೆ ಸೂಚಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.

(ಸಂಗ್ರಹ ಚಿತ್ರ)

click me!